ಬೆಂಗಳೂರು: ಇಡೀ ವಿಶ್ವದಲ್ಲಿ ಹತ್ತೀ ಹೆಚ್ಚಾಗಿ ಹರಡುತ್ತಿರುವ ಕರೋನಾ ವೈರಸ್ ಇದನ್ನು ತಡೆಯುವ ಉದ್ದೇಶದಿಂದ ಎಲ್ಲಾ ಸೇವೆಗಳನ್ನು ಬಂದ್ ಮಾಡಿ ಎಲ್ಲಾ ನಾಗರೀಕರು ಮನೆಯೊಳಗೇ ಉಳಿಯುವಂತೆ ಮಾಡಿದ್ದಾರೆ.  ಪರಿಸ್ಥಿತಿ ಹೀಗಿರುವಾಗ ಮನೆಯಿಂದ ಹೊರಗೆ ಹೋಗಿ ಹೇಗೆ ವಿದ್ಯುತ್ ಬಿಲ್ ಹಾಗೂ ಸಾಲದ ಕಂತುಗಳನ್ನು ಕ್ಯೂ ನಲ್ಲಿ ನಿಂತುಕೊಂಡು ಕಟ್ಟಲು ಸಾಧ್ಯ ಎಂಬುದನ್ನು ಅರಿತ ಸರ್ಕಾರಗಳು ಕೆಲವು ಕ್ರಮಗಳನ್ನು ಕೈಗೊಂಡಿದೆ ಅಷ್ಟಕ್ಕೂ ಸರ್ಕಾರ ತೆಗೆದು ಕೊಂಡಿರುವ ಅಂತಹ ಕ್ರಮಗಳೇನು ಎಂಬುದರ ಬಗ್ಗೆ ಇಲ್ಲಿದೆ ನೋಡಿ.

 

ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ಈಗಾಗಲೇ ಇಎಂಐ ಸೇರಿದಂತೆ ಎಲ್ಲದಕ್ಕೂ ವಿನಾಯ್ತಿ ನೀಡಲಾಗಿದೆ. ಇದೇ ಮಾದರಿಯಲ್ಲಿ ೩ ತಿಂಗಳ ವಿದ್ಯುತ್ ಬಿಲ್ ಗೆ ವಿನಾಯ್ತಿಯನ್ನು ನೀಡುವಂತೆ ಕೇಂದ್ರ ವಿದ್ಯುತ್ ಆಯೋಗ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

 

ಹೌದು? ನೀವು ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟದೇ ಇದ್ದರೂ ವಿನಾಯ್ತಿ ಸಿಗಲಿದೆ. ಜೊತೆಗೆ ಯಾವುದೇ ಬಡ್ಡಿಯನ್ನು ಸಹ ವಿದಿಸೋದಿಲ್ಲ. ಕಾರಣ ಕೇಂದ್ರ ವಿದ್ಯುತ್ ಆಯೋಗ ರಾಜ್ಯ ಸರ್ಕಾರಗಳಿಗೆ ೩ ತಿಂಗಳ ವಿದ್ಯುತ್ ಬಿಲ್ ಗೆ ವಿನಾಯ್ತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

 

ಈ ಹಿನ್ನಲೆಯಲ್ಲಿ ವಿದ್ಯುತ್ ಬಿಲ್ ಮೂರು ತಿಂಗಳು ಕಟ್ಟದೇ ಇದ್ದರೂ ಸರಬರಾಜು ಕಟ್ ಆಗೋದಿಲ್ಲ. ಯಾವುದೇ ಬಡ್ಡಿಯನ್ನು ಸಹ ವಿಧಿಸೋದಿಲ್ಲ. ಈ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಜನರಿಗೆ ಗುಡ್ ನ್ಯೂಸ್ ಅನ್ನು ಕೇಂದ್ರ ಸರ್ಕಾರ ನೀಡಿದೆ.

 

ಇದರ ಜೊತೆಗೆ ಸರ್ಕಾರ ಎಲ್ಲಾ ಬ್ಯಾಂಕ್‌ಗಳ ಸಾಲಗಳ ಕಂತುಗಳು ಹಾಗೂ ವಾಹನಗಳ ಮೇಲೆನ ಸಾಲದ ಕಂತುಗಳನ್ನು ಮೂರು ತಿಂಗಳ ಕಾಲ ವಿಸ್ತರಿಸಿ ಯಾರೂ ಕೂಡ ಲಾಕ್‌ಡೌನ್ ದಿನಗಳಲ್ಲಿ ಮನೆಯಿಂದ  ಬರದಂತೆ ನಿರ್ಭಂದವನ್ನು ಹೇರಿದೆ.

ಇದೆಲ್ಲದರ ನಡುವೆಯೂ ಕೂಡ ಸರ್ಕಾರದ ಆದೇಶವನ್ನು ಮೀರಿ ಮನೆಯಿಂದ ಹೊರಬಂದು ಸೋಂಕು ಹೆಚ್ಚಾಗಲು ಕಾರಣವಾಗುತ್ತಿದ್ದಾರೆ ಹಾಗಾಗಿ ನಾಗರೀಕರು ಮನೆಯಲ್ಲೇ ಉಳಿದು ಆರೋಗ್ಯವಾಗಿರಬೇಕು ಎಂಬುದು ನಮ್ಮ ಆಶಯ

Find out more: