ಕೊರೋನಾ ವೈರಸ್ ನಿಂದಾಗಿ ಇಡೀಲಾಕ್ ಡೌನ್ ಮಾಡಿರುವುದರಿಂದ ಎಲ್ಲಿಯೂ ಕೂಡ ಕಾಮಗಾರಿಗಳು ನಡೆಯದೆ ಸ್ಥಬ್ದವಾಗಿದೆ. ಇನ್ನು ಇಂತಹ ಕಾಮಗಾರಿಗಳನ್ನೇ ನೆಚ್ಚಿಕೊಂಡು ಬೇರೆ ಬೇರೆ ಊರುಗಳಿಂದ ತಮ್ಮ ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅದೆಷ್ಟೋ ಕೂಲಿ ಕಾರ್ಮಿಕರು ಕೂಲಿಯೂ ಇಲ್ಲದೆ ಹಣವೂ ಇಲ್ಲದೆ ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೆಲವು ಸೂಚನೆಗಳನ್ನು ನೀಡಿದೆ ಅಷ್ಟಕ್ಕೂ ಆ ಸೂಚನೆ ಏನು ಅಂತೀರಾ ಇಲ್ಲಿದೆ ನೋಡಿ
ಎಲ್ಲಾ ಗಡಿಭಾಗವನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ವಲಸೆ ಕಾರ್ಮಿಕರಿಗೆ ಊರಿಗೆ ತೆರಳದಂತೆ ಸೂಚನೆ ನೀಡಿ ಊಟ ಮತ್ತು ವಸತಿ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದೆ. ಯಾರು ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮನೆಗೆ ಹೋಗುತ್ತಾರೋ ಅವರನ್ನು ೧೪ ದಿನಗಳ ಕ್ವಾರಂಟೈನ್ ನಲ್ಲಿ ಇಡುವಂತೆ ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್ ೧೯ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ೨೧ ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಮಾಡುವಂತೆ ಘೋಷಿಸಿದ್ದರು. ಏತನ್ಮಧ್ಯೆ ದಿನಗೂಲಿ ನೌಕರರು ತಮ್ಮ, ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಮಹಾನಗರಗಳಲ್ಲಿ ಉದ್ಯೋಗ ಮತ್ತು ಊಟೋಪಚಾರ ಸಿಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ೧೯ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು ಸಹ ಬಸ್ ನಿಲ್ದಾಣದಲ್ಲಿ, ಬಸ್ ಗಳಲ್ಲಿ ಸಾವಿರಾರು ಜನರು ತುಂಬಿಕೊಂಡಿದ್ದಾರೆ. ಮಾರಕ ಕೋವಿಡ್ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಡಿಭಾಗದಿಂದ ಆಗಮಿಸುವ ಬಸ್ ಗಳ ಸಂಚಾರ ನಿಷೇಧಿಸಬೇಕು. ವಲಸೆ ಕಾರ್ಮಿಕರನ್ನು ೧೪ ದಿನಗಳ ಕ್ವಾರಂಟೈನ್ ನಲ್ಲಿ ಇಟ್ಟು ಅವರಿಗೆ ಅಗತ್ಯವಿರುವ ಆಹಾರ ಮತ್ತು ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.