ನವದೆಹಲಿ: ಕೊರೋನಾ ಸೋಂಕು ದೇಶದಲ್ಲಿ ಹರಡುವುದನ್ನು ತಪ್ಪಿಸುವ ಸಲುವಾಗಿ ಪ್ರಧಾನಿ ಮೋದಿಯವರು 21 ದಿನಗಳ ಕಾಲ ಲಾಕ್ಡೌನ್ ಘೋಷಣೆಯನ್ನು ಮಾಡಿ ಎಲ್ಲಾ ಸಾರಿಗೆ ವ್ಯವಸ್ಥೆ, ಎಲ್ಲಾ ಅಂಗಡಿ ಮುಂಗಟ್ಟುಗಳು ಮಾಲ್‌ಗಳು ಚಿತ್ರಮಂದಿರಗಳನ್ನು, ಶಾಲಾ ಕಾಲೇಜುಗಳನ್ನು, ಕಚೇರಿಗಳನ್ನು ಬಂದ್ ಮಾಡಲಾಗಿತ್ತು ಇಷ್ಟಾದರೂ ಕೂಡ ಲಾಕ್ ಡೌನ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರೆಶ್ನೆಯಾಗಿದೆ ಈ ಪ್ರೆಶ್ನೆಗಳಿಗೆ ಇಲ್ಲಿದೆ ಉತ್ತರ

 

ಈ ಗಾಗಲೇ ಕೊರೊನಾ ಸೋಂಕು ಶೇ.77  ಇದನ್ನು ತಡೆಗಟ್ಟಲು ಲಾಕ್ಡೌನ್ ಘೋಷಿಸಿರುವ ವಿಶ್ವದ 131 ರಾಷ್ಟ್ರಗಳಲ್ಲಿನ ಪರಿಸ್ಥಿತಿ ಕುರಿತು ಫೆ.16 ರಿಂದ ಆರಂಭಿಸಿ ಮಾ.29 ರವರೆಗೆ ದಿನಸಿ ಅಂಗಡಿಗಳಲ್ಲಿನ ಖರೀದಿ, ಮನರಂಜನಾ ಕೇಂದ್ರಗಳ ಭೇಟಿ, ಬಸ್ಸು, ರೈಲು ಸಂಚಾರ ಮತ್ತು ಕಚೇರಿಗಳಿಗೆ ಹೋಗಿಬರುವ ಮಾಹಿತಿ, ವಾಹನಸಂಚಾರ ಮಾಹಿತಿಗಳನ್ನು ಆಧರಿಸಿ ಗೂಗಲ್ ಸಂಸ್ಥೆ ಕೆಲವು ಮಾಹಿತಿಯನ್ನು ಕಲೆಹಾಕಿದೆ

 

ಭಾರತದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದರೂ ಜನರು ದಿನಬಳಕೆಯ ವಸ್ತುಗಳ ಖರೀದಿಗಾಗಿ ದಿನಸಿ ಅಂಗಡಿಗಳಿಗೆ ಹೋಗುತ್ತಿದ್ದಾರೆ. ಆದರೆ, ಸಿನಿಮಾ, ಪಾರ್ಕ್ ಸೇರಿ ವಿವಿಧ ಮನರಂಜನಾ ಕೇಂದ್ರಗಳಿಗೆ ಹೋಗುವುದು ಕಡಿಮೆಯಾಗಿದೆ. ಇದರಿಂದಾಗಿ ಲಾಕ್ಡೌನ್ನ ಯಶಸ್ಸು ಶೇ.77  ಎಂದು ಗೂಗಲ್ ಸಂಸ್ಥೆ ಹೇಳಿದೆ.

 

ಸೋಂಕು ಮತ್ತು ಸಾವಿನಲ್ಲಿ ದಾಖಲೆ ನಿರ್ಮಿಸುತ್ತಿರುವ ಇಟಲಿ ಮತ್ತು ಸ್ಪೇನ್ಗಳಲ್ಲಿ ಈ ಪ್ರಮಾಣ ಶೇ.94  ಇದೆ. ಬ್ರಿಟನ್, ಫ್ರಾನ್ಸ್ ಮತ್ತು ಫಿಲಿಪ್ಪೀನ್ಸ್ನಲ್ಲಿ ಈ ಪ್ರಮಾಣ ಶೇ.80 ಆಗಿದೆ.

 

ಲಕ್ಷಾಂತರ ಮಂದಿ ಸೋಂಕಿನಿಂದ ಬಳಲುತ್ತಿದ್ದರೂ ಅಮೆರಿಕದ ಜನತೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇಲ್ಲಿ ಇನ್ನೂ ಶೇ.50 ಜನರು ತೀವ್ರ ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ವಾತಾವರಣ ಹಿತಕರವಾಗಿದೆ ಎಂದು ಸಮುದ್ರ ತಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದ ಆಸ್ಟ್ರೇಲಿಯಾದಲ್ಲಿ ಇದೀಗ ಅಂಥ ತಾಣಗಳಿಗೆ ಹೋಗುವವರ ಸಂಖ್ಯೆ ಶೇ.50 ಕ್ಷೀಣಿಸಿದೆ.

 

ಜಪಾನ್ ಮತ್ತು ಸ್ವೀಡನ್ನಲ್ಲೂ ಕರೊನಾ ವೈರಸ್ ಸೋಂಕಿನ ಹಾವಳಿ ಇದ್ದರೂ, ಅಲ್ಲಿ ಲಾಕ್ಡೌನ್ನಂಥ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ. ಆದರೂ, ದಿನಸಿ ಖರೀದಿ, ಮನರಂಜನಾ ಕೇಂದ್ರಗಳ ಭೇಟಿ ಶೇ.25 ಕಡಿಮೆಯಾಗಿದೆ ಎಂದು ಗೂಗಲ್ ತಿಳಿಸಿದೆ.

 

ದಕ್ಷಿಣ ಕೊರಿಯಾ ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕ್ರಮಗಳನ್ನು ಜಾರಿಗೊಳಿಸಿತ್ತು. ಇದರಿಂದಾಗಿ ಅಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ದಿನಸಿ ಖರೀದಿ ಮತ್ತು ಮನರಂಜನಾ ಕೇಂದ್ರಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಶೇ.೧೯ ಕಡಿಮೆಯಾಗಿದೆ.

 

 

Find out more: