ದೇಶದಲ್ಲಿ ಕೊರೋನಾ ವೈರಸ್ ತಡೆಯುವ ಉದ್ದೇಶದಿಂದ 21 ದಿನಗಳವರೆಗೆ ಲಾಕ್ ಡೌನ್ ಮಾಡಲಾಗಿತ್ತು ಇದರಿಂದ ಇದರಿಂದ ಸಾಕಷ್ಟು ಕೂಲಿ ಕಾರ್ಮಿಕರಿಗೆ ದಿನಗೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆಗೆ ಕಷ್ಟವಾಗುತ್ತಿತ್ತು ಇದನ್ನು ಗಮನಿಸಿದ ರಾಜ್ಯ ಸರ್ಕಾರ ಇವರ ಕಷ್ಟಗಳಿಗೆ ನೆರವಾಗುವ ಉದ್ದೇಶದಿಂದ ರಾಜ್ಯದಲ್ಲಿರುವಂತಹ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರಿಂದ ಅದೆಷ್ಟೋ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿತ್ತು  ಆದರೆ ಇಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ದಾರಕ್ಕೆ ಕೂಲಿ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ ಅಷ್ಟಕ್ಕೂ ರಾಜ್ಯ ಸರ್ಕಾರದ ಅಂತಹ ನಿರ್ದಾರ ಯಾವುದು ಗೊತ್ತಾ?

 

 

ದೇಶಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ತಿಂಡಿ, ಊಟಕ್ಕೆ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಉಚಿತ ತಿಂಡಿ, ಊಟ ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಇಂದಿರಾ ಕ್ಯಾಂಟೀನ್ ನಲ್ಲಿ ಲಾಕ್ ಡೌನ್ ನಂತ್ರ ತಿಂಡಿ, ಊಟ ಪ್ರೀ ಆಗಿ ದೊರೆಯುತ್ತಿತ್ತು. ಆದ್ರೇ ಇದಕ್ಕೆ ಬ್ರೇಕ್ ಹಾಕಿರುವ ರಾಜ್ಯ ಸರ್ಕಾರ ಮೊದಲಿನಂತೆಯೇ ರೂ.೫ಕ್ಕೆ ತಿಂಡಿ, ರೂ.10 ಕ್ಕೆ ಊಟ ನೀಡುವಂತ ತೀರ್ಮಾನವನ್ನು ಕೈಗೊಂಡಿದೆ.

 

ಲಾಕ್ ಡೌನ್ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ನೀಡಲಾಗುತ್ತಿದ್ದ ಉಚಿತ ಊಟಕ್ಕೆ ರಾಜ್ಯ ಸರ್ಕಾರವು ಬ್ರೇಕ್ ಹಾಕಿದೆ. ಹೀಗಾಗಿ ಇಂದಿನಿಂದ ಇಂದಿರಾ ಕ್ಯಾಂಟೀನ್ ನಲ್ಲಿ ರೂ.5 ಕ್ಕೆ ತಿಂಡಿ, ರೂ.`10 ಕ್ಕೆ ಊಟ ನೀಡುವಂತ ತೀರ್ಮಾನವನ್ನು ಕೈಗೊಂಡಿದೆ.  ಇಂತಹ ಸರ್ಕಾರದ ನೀತಿಯಿಂದ ದುಡಿಮೆಯಿಲ್ಲದ ಹೊತ್ತಿನಲ್ಲಿ ಕಾರ್ಮಿಕರು ಸ್ವಲ್ವ ಯೋಚಿಸುವಂತಹ ಪರಿಸ್ಥಿತಿ ಬಂದಿದೆ.

 

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯಲ್ಲಿ, ಇಂದಿರಾ ಕ್ಯಾಂಟೀನ್ ಉಚಿತ ಊಟಕ್ಕೆ ಬ್ರೇಕ್ ಹಾಕಲಾಗಿದೆ. ಇಂದಿರಾ ಕ್ಯಾಂಟಿನ್ ಊಟಕ್ಕೆ ಹಣ ನಿಗಧಿ ಮಾಡುವಂತ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಇಂದಿರಾ ಕ್ಯಾಂಟೀನ್ ನಮಗೆ ಅಗತ್ಯ ಇಲ್ಲ. ಇದರಿಂದಾಗಿ ೧.೬೫ ಕೋಟಿ ಖರ್ಚಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ತಿಂಡಿಗೆ ರೂ.5, ಊಟಕ್ಕೆ ರೂ.10 ಹಣ ನಿಗಧಿ ಮಾಡುವಂತ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಇಂದಿನಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಪ್ರೀ ಊಟ ಸಿಗೋದಿಲ್ಲ.

 

Find out more: