ಕೋರೋನಾ ವೈರಸ್ ದಿನದಿಂದ ದಿನಕ್ಕೆ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಇದರಿಂದ ಪ್ರಪಂಚಾದ್ಯಂತ ಲಕ್ಷಾಂತರ ಮಂದಿ ಪ್ರಾಣಕಳೆದುಕೊಂಡಿದ್ದಾರೆ ಹಾಗೂ ಸಾಕಷ್ಟು ಮಂದಿಗೆ ಕೊರೋನಾ ಸೋಂಕು ಹರಡಿರುವುದು ದೃಡಪಟ್ಟಿದೆ ಇದರಿಂದ ವಿಶ್ವದ ಎಲ್ಲಾ ರಾಷ್ಟ್ರಗಳ ಸ್ಥಿತಿ ಚಿಂತಾಜನಕವಾಗಿದೆ. ಇಷ್ಟೆಕ್ಕೆಲ್ಲಾ ಆ ಒಂದು ರಾಷ್ಟ್ರ ಕಾರಣ ಎಂದು ಅಂತರಾಷ್ಟ್ರೀಯ ನ್ಯಾಯವಾದಿಗಳ ಮಂಡಳಿ ಆರೋಪಿಸಿದೆ.. ಅಷ್ಟಕ್ಕೂ ಆ ರಾಷ್ಟ್ರ ಯಾವುದು ಗೊತ್ತಾ?
ಕೊರೋನ ವೈರಸ್ ಹಾವಳಿಯು ತಾನು ಜಾಗತಿಕವಾಗಿ ಸೂಪರ್ ಪವರ್ ಆಗುವ ದುರುದ್ದೇಶದಿಂದ, ಇಡೀ ರಾಷ್ಟ್ರದಲ್ಲೇ ಬಹು ಶಕ್ತಿಯುಳ್ಳರ ಆಷ್ಟ್ರವಾಗಬೇಕು ಎಂಬ ದುರುದ್ದೇಶವನ್ನು ಇಟ್ಟುಕೊಂಡು ಚೀನಾ ರೂಪಿಸಿದ ಸಂಚಾಗಿದೆ ಎಂದು ಲಂಡನ್ ಮೂಲದ ಅಂತಾರಾಷ್ಟ್ರೀಯ ನ್ಯಾಯವಾದಿಗಳ ಮಂಡಳಿಯೊಂದು ಶನಿವಾರ ಆಪಾದಿಸಿದೆ.
ಕೊರೋನ ವೈರಸ್ ಹರಡುವ ಮೂಲಕ ಮಾನವಕುಲದ ವಿರುದ್ಧ ಘೋರ ಅಪರಾಧಗಳನ್ನು ಎಸಗಿದ್ದಕ್ಕಾಗಿ ಚೀನಾವು ದಂಡ ಪಾವತಿಸುವಂತೆ ಮಾಡಬೇಕೆಂದು ಅದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯನ್ನು ಆಗ್ರಹಿಸಿದೆ.
ಕೊರೋನ ವೈರಸ್ ಹರಡುವುದನ್ನು ತಡೆಯುವಲ್ಲಿ ಚೀನಾ ಸರಕಾರದ ನಿಷ್ಕ್ರಿಯತೆಯಿಂದಾಗಿ, ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ, ಟ್ರಿಲಿಯನ್ ಡಾಲರ್ ನಷ್ಟವುಂಟಾಗಿದೆ ಹಾಗೂ ಭಾರತ ಸೇರಿದಂತೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆಂದು ಐಸಿಜೆ ಅಧ್ಯಕ್ಷ ಆದೀಶ್ ಸಿ. ಅಗರ್ವಾಲ್ ಹೇಳಿದ್ದಾರೆ.
ವುಹಾನ್ ಹೊರತುಪಡಿಸಿ ಚೀನಾದ ಉಳಿದ ಭಾಗಗಳಿಗೆ ಕೊರೋನ ವೈರಸ್ ಯಾಕೆ ಹರಡಲಿಲ್ಲವೆಂಬುದು ನಿಗೂಢವಾಗಿಯೇ ಉಳಿದಿದೆ. ಆದರೆ ಇದೇ ಸಮಯದಲ್ಲಿ ಈ ವೈರಸ್ ಜಗತ್ತಿನ ಉಳಿದ ಎಲ್ಲಾ ದೇಶಗಳಿಗೂ ಪಸರಿಸಿದೆ ಎಂದು ಅವರು ಹೇಳಿದರು.
ಜಗತ್ತಿನಾದ್ಯಂತ 50 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೋನ ವೈರಸ್ ಸೋಂಕು ಹರಡಿರುವುದಕ್ಕೆ ಚೀನಾ, ಅದರ ಸೇನೆ ಹಾಗೂ ವುಹಾನ್ ಪ್ರಾಂತವನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಅಗರ್ವಾಲ್ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಘಟನೆಯನ್ನು ಆಗ್ರಹಿಸಿದರು.
ಕೊರೋನ ಸೋಂಕು ಹರಡಿರುವುದಕ್ಕಾಗಿ ಚೀನಾವು ಇಡೀ ಜಗತ್ತಿಗೆ ಅದರಲ್ಲೂ ನಿರ್ದಿಷ್ಟವಾಗಿ ಭಾರತಕ್ಕೆ ಅಪಾರ ದಂಡವನ್ನು ಪಾವತಿಸುವಂತೆ ಯುಎನ್‌ಎಚ್‌ಆರ್ಸಿಯು ಬೀಜಿಂಗ್ ಆಡಳಿತಕ್ಕೆ ಆದೇಶ ನೀಡಬೇಕೆಂದು ಅವರು ಆಗ್ರಹಿಸಿದರು.
ಕೊರೋನ ವೈರಸ್ ಹರಡುವಿಕೆಯು, ಜೈವಿಕ ಸಮರದ ಮೂಲಕ ಜಗತ್ತಿನ ಸೂಪರ್ ಪವರ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹಾಗೂ ಇತರ ರಾಷ್ಟ್ರಗಳನ್ನು ದುರ್ಬಲಗೊಳಿಸಲು ಚೀನಾ ರೂಪಿಸಿದ ಸಂಚಿನ ಪರಿಣಾಮವಾಗಿದೆ.