ನವದೆಹಲಿ: ಮಲೇರಿಯಾ ಔಷಧಿಯಿಂದ ಕೊರೋನಾ ವೈರಸ್‌ಗೆ ಚಿಕಿತ್ಸೆ ನಿಡಲಾಗುವುದು ಎಂದು ಸಂಶೋಧಕರು ಹೇಳಿದ್ದೇ ತಡ ಎಲ್ಲಾ ದೇಶಗಳು ಭಾರತಕ್ಕೆ ಔಷಧಿಯನ್ನು ಕಳುಹಿಸಿಕೊಡುವಂತೆ ಮನವಿಯನ್ನು ಮಾಡಿದ್ದಾರೆ. ಇದರನ್ವಯ ಶ್ರೀಲಂಕಾ ಕೂಡ ಮನವಿಯನ್ನು ಸಲ್ಲಿಸಿದ ಪರಿಣಾಮ ಶ್ರೀಲಂಕಾಕ್ಕೂ ಔಷಧಿಯನ್ನು ನೀಡಿದೆ ಇದಕ್ಕೆ ಶ್ರೀಲಂಕಾ ಅಧ್ಯಕ್ಷ ಭಾರತದ ಪ್ರಧಾನಿಗಳಿಗೆ ಹಾಗೂ ಪ್ರಜೆಗಳಿಗೆ ಏನು ಹೇಳಿದ್ದಾರೆ ಗೊತ್ತಾ? ಇಲ್ಲಿದೆ ನೊಡಿ..
ಕರೋನಾ ವೈರಸ್ ಇಡೀ ವಿಶ್ವದಲ್ಲಿ ಸೇರಿಕೊಂಡು ಸಾಕಷ್ಟು ಜನರನ್ನು ಬಲಿತೆಗೆದುಕೊಂಡು, ಹಲವರನ್ನು ನರಳುವಂತೆ ಮಾಡಿದೆ. ಈ ಕೊರೋನಾ ವೈರಸ್‌ಗೆ ವಿವಿಧ ದೇಶಗಳ ಸಂಶೋಧಕರು ಔಷಧಿಗಳನ್ನು ಕಂಡು ಹಿಡಿಯುತ್ತಿದ್ದರೂ ಕೂಡ ಯಾವೂದೇ ಔಷಧಿ ಇನ್ನೂ ಸಫಲವಾಗಿಲ್ಲ. ಈ ಮಧ್ಯೆ ಕೆಲವು ಸಂಶೋಧಕರು ಮಲೇರಿಯಾ ಕ್ಕೆ ಬಳಸುತ್ತಿದ್ದ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿ ಕೊರೋನಾ ವೈರಸ್ಸಿಗೂ ಬಳಸಬಹುದು ಎಂದು ತಿಳಿಸಿದ್ದಾರೆ ಇದರಿಂದಾಗಿ ಭಾರತಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದ್ದು ಭಾರತಕ್ಕೆ ಔಷಧಿ ನೀಡುವಂತೆ ಮನವಿಯನ್ನು ಮಾಡಲಾಗಿತ್ತು.
ಅದರಂತೆ ರಸ್ತಿಗೆ ಇದ್ದ ಎಲಾ ನಿರ್ಭಂಧವನ್ನು ತೆಗೆದು ಅಗತ್ಯ ದೇಶಗಳಿಗೆ ಔಷಧಿಯನ್ನು ಕಳಿಸಿಕೊಡಲಾಗಿತ್ತಿದೆ. ಇದೇ ರೀತಿ ಶ್ರೀಲಂಕಾಕ್ಕೂ ಔಷಧಿಯನ್ನು ರಪ್ತು ಮಾಡಲಾಗಿದೆ. ಇದಕ್ಕೆ ಆ ದೇಶದ ಅಧ್ಯಕ್ಷ ಗೊಟಬಯ ರಾಜಪಕ್ಷೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ಧನ್ಯವಾದ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜಪಕ್ಷೆ ಅವರು, ’ಶ್ರೀಲಂಕಾಗೆ ವಿಶೇಷ ವಿಮಾನದಲ್ಲಿ ಔಷಧಿಯನ್ನು ಕಳುಹಿಸಿಕೊಟ್ಟಿರುವ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತದ ಜನರಿಗೆ ಹೃದಯತುಂಬಿ ಮೆಚ್ಚುಗೆ ತಿಳಿಸಲು ಬಯಸುತ್ತೇನೆ. ಅಗತ್ಯ ಸಮಯದಲ್ಲಿ ನೀವು ತೋರಿದ ಉದಾರ ಬೆಂಬಲವು ಪ್ರಶಂಸನೀಯ’ ಎಂದು ಟ್ವೀಟ್ ಮಾಡಿದ್ದಾರೆ.
ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಗಳನ್ನು ಕೊರೊನಾ ಸೋಂಕಿನಿಂದ ಬಳಲುವ ರೋಗಿಗಳ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ಮಾತ್ರೆಗಳನ್ನು ಬಳಸಲಾಗುತ್ತದೆ.
ಈ ಮಾತ್ರೆಗಳ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರದ ವಿದೇಶಿ ವ್ಯಾಪಾರ ನಿರ್ದೇಶನಾಲಯವು ಇತ್ತೀಚೆಗೆ ಆದೇಶ ಹೊರಡಿಸಿತ್ತು. ಆದರೆ, ಟ್ರಂಪ್ ಅವರು ಮಾತ್ರೆ ಪೂರೈಸುವಂತೆ ಭಾರತಕ್ಕೆ ಒತ್ತಡ ಹೇರಿದ್ದರು. ಅದಾದ ನಂತರ ಸರ್ಕಾರವು ತನ್ನ ನಿರ್ಧಾರ ಬದಲಿಸಿಕೊಂಡಿದ್ದು, ಔಷಧ ರಫ್ತು ಮಾಡಲು ನಿರ್ಧರಿಸಿದೆ.
ಈ ಮಾತ್ರೆಗಳ ಉತ್ಪಾದನೆ ಹಾಗೂ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್ ಪೂರೈಕೆ ಮಾಡುವಂತೆ ಅಮೆರಿಕಾ, ಶ್ರೀಲಂಕಾ, ನೇಪಾಳ ಸೇರಿದಂತೆ ಕನಿಷ್ಠ ೨೦ ರಾಷ್ಟ್ರಗಳು ಈಗ ಬೇಡಿಕೆ ಸಲ್ಲಿಸಿವೆ. ನೆರೆಯ ದೇಶಗಳು ಸೇರಿದಂತೆ ಬೇಡಿಕೆ ಸಲ್ಲಿಸಿರುವ ಎಲ್ಲ ದೇಶಗಳಿಗೆ ಮಲೇರಿಯಾ ನಿರೋಧಕ ಮಾತ್ರೆಗಳನ್ನು ಹಂತಹಂತವಾಗಿ ಭಾರತ ಪೂರೈಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು.