ನವದೆಹಲಿ: ತನ್ನ ನೆಲದಲ್ಲಿ ಕೊರೋನಾಗೆ ಜೀವವನ್ನು ಕೊಟ್ಟು ಇಡೀ ವಿಶ್ವಕ್ಕೆ ಹರಡಿಸಿರುವ ಕೀರ್ತಿ ಚೀನಾ ದೇಶಕ್ಕೆ ಸೇರಬೇಕು. ಈ ಗಾಗಲೇ ವಿಶ್ವದ ಹಲವಾರು ದೇಶಗಳು ಕೊರೋನಾ ವೈರಸ್ ನಿಂದ ಸಾವು ನೋವುಗಳನ್ನು ಅನುಭವಿಸುತ್ತಿರುವಾಗ ನಾನು ನಿಮಗೆ ಸಹಾಯಕ್ಕೆ ನಿಲ್ಲುತ್ತೇನೆ ಎಂದು ಮುಂದೆ ಬಂದು ನಿಂತ ಚೀನಾ ಕೆಲವು ವೈದ್ಯಕೀಯ ಸಾಮಗ್ರಿಗಳನ್ನು ಕೆಲವು ರಾಷ್ಟ್ರಗಳಿಗೆ ರಸ್ತು ಮಾಡಲಾಗಿತ್ತು. ಆದರೆ ಈಗ ಚೀನಾದಿಂದ ಆಮದು ಮಾಡಿಕೊಂಡ ವೈದ್ಯಕೀಯ ಸಾಮಗ್ರಿಗಳನ್ನು ಪುನಃ ಚೀನಾಕ್ಕೆ ವಾಪಸ್ ಮಾಡಿದೆ. ಅಷ್ಟಕ್ಕೂ  ಆ ರಾಷ್ಟ್ರಗಳು ಸಾಮಗ್ರಿಗಳನ್ನು ವಾಪಸ್ ಮಾಡಿದ್ದಾದರೂ ಏತಕ್ಕೆ ಹಾಗೂ ವಾಪಸ್ ಮಾಡಿದ ರಾಷ್ಟ್ರಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ

 

ಜಗತ್ತಿನಾದ್ಯಂತ ರಾಷ್ಟ್ರಗಳು ಕರೊನಾ ವೈರಸ್ನಿಂದ ತತ್ತರಿಸಿ ಹೋಗಿವೆ. ಔಷಧ, ಲಸಿಕೆ ಯಾವುದೂ ಇಲ್ಲದ ರೋಗ ನಿರ್ಮೂಲನೆಗೆ ವೈದ್ಯಕೀಯ ಸಿಬ್ಬಂದಿ ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ ವೈದ್ಯರಿಗೆ ಅಗತ್ಯವಿರುವ ವೈಯಕ್ತಿಕ ಸುರಕ್ಷತಾ ಸಾಧನಗಳು (ಪಿಪಿಇ ಕಿಟ್) ಮತ್ತು ಕರೊನಾ ವೈರಸ್ ಟೆಸ್ ಕಿಟ್ಗಳ ಕೊರತೆ ಹಲವು ದೇಶಗಳನ್ನು ಕಾಡುತ್ತಿದೆ. ವೈರಸ್ನ್ನು ಹುಟ್ಟಿಸಿ ಇಡೀ ಜಗತ್ತಿಗೆ ಬಿಟ್ಟ ಚೀನಾ ಈಗ ಭಾರತ ಸೇರಿ ಅನೇಕ ದೇಶಗಳಿಗೆ ಪಿಪಿಇ ಕಿಟ್ಗಳನ್ನು, ಕರೊನಾ ಟೆಸ್ಟಿಂಗ್ ಕಿಟ್ಗಳನ್ನು ಒದಗಿಸುತ್ತಿದೆ.

 

ಆದರೆ ಒಂದಷ್ಟು ದೇಶಗಳು ಚೀನಾ ರಫ್ತು ಮಾಡುತ್ತಿರುವ ಮಾಸ್ಕ್ಗಳು, ರಕ್ಷಣಾ ಸಾಧನಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ತುಂಬ ಕಳಪೆ ಮಟ್ಟದಲ್ಲಿದ್ದು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದ್ದಲ್ಲದೆ, ವಾಪಸ್ ಕೂಡ ಕಳಿಸಿವೆ. ಇತ್ತೀಚೆಗೆ ಫಿನ್ಲ್ಯಾಂಡ್ ಕೂಡ ಬಹಿರಂಗವಾಗಿಯೇ ಚೀನಾ ವಿರುದ್ಧ ಅಸಮಾಧಾನವ್ಯಕ್ತಪಡಿಸಿದೆ. ಆ ದೇಶ ಕಳಿಸುವ ಮಾಸ್ಕ್ಗಳು ನಮ್ಮ ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎಂದು ಹೇಳಿದೆ.

 

ಚೀನಾ ಹಡಗಿನಲ್ಲಿ ಕಳಿಸಿಕೊಟ್ಟ 2 ಮಿಲಿಯನ್ ಸರ್ಜಿಕಲ್ ಮಾಸ್ಕ್ಗಳು ಮತ್ತು 2,3೦,೦೦೦ ರೆಸ್ಪಿರೇಟರ್ ಮಾಸ್ಕ್ಗಳು ಅಗತ್ಯ ಗುಣಮಟ್ಟದಲ್ಲಿ ಇಲ್ಲ. ಇದನ್ನು ಕರೊನಾಕ್ಕೆ ಚಿಕಿತ್ಸೆ ನೀಡುವ ವೈದ್ಯರು ಬಳಕೆ ಮಾಡಲು ಸಾಧ್ಯವೇ ಇಲ್ಲ ಎಂದು ಫಿನ್ಲ್ಯಾಂಡ್ ಬುಧವಾರ ತಿಳಿಸಿದೆ.

 

ಕಳೆದ ವಾರ ಸ್ಪೇನ್, ನೆದರ್ಲ್ಯಾಂಡ್, ಟರ್ಕಿ, ಆಸ್ಟ್ರೇಲಿಯಾ ದೇಶಗಳು ಚೀನಾ ಕಳಿಸಿದ್ದ ಮಾಸ್ಕ್ಗಳನ್ನು ವಾಪಸ್ ಕಳಿಸಿವೆ.

 

ಚೀನಾದಿಂದ ಕಳಿಸುವ ವೈದ್ಯಕೀಯ ಸುರಕ್ಷತಾ ಸಾಧನಗಳಲ್ಲಿ ದೋಷವಿದೆ ಎಂದು ಆರೋಪಿಸಿ, ಮಾಸ್ಕ್ಗಳನ್ನು, ಟೆಸ್ಟಿಂಗ್ ಕಿಟ್ಗಳನ್ನು ವಾಪಸ್ ಕಳಿಸಿರುವ ದೇಶಗಳು ಹೀಗಿವೆ..

 

ಕೆನಡಾ: ಚೀನಾದಿಂದ ಕಳಿಸಲಾಗಿದ್ದ ಗುಣಮಟ್ಟವಿಲ್ಲದ 62,600 ಸರ್ಜಿಕಲ್ ಮಾಸ್ಕ್ಗಳನ್ನು ವಾಪಸ್ ಕಳಿಸಿದ್ದಾಗಿ ಟೊರಂಟೋ ತಿಳಿಸಿದೆ. ಅದರಲ್ಲಿ ಅನೇಕ ಮಾಸ್ಕ್ಗಳು ಕತ್ತರಿಸಲ್ಪಟ್ಟಿದ್ದವು ಎಂದು ಹೇಳಿದೆ.

 

ಸ್ಪೇನ್ : ಚೀನಾದಿಂದ 3,40,000 ಟೆಸ್ಟ್ ಕಿಟ್ಗಳನ್ನು ಖರೀದಿ ಮಾಡಲಾಗಿತ್ತು. ಅದರಲ್ಲಿ 60,000 ಕಿಟ್ಗಳು ಬಳಕೆಗೆ ಯೋಗ್ಯವಾಗಿರಲಿಲ್ಲ. ಅವುಗಳಿಂದ ನಿಖರವಾಗಿ ತಪಾಸಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವಾಪಸ್ ಮಾಡಿದ್ದೇವೆ ಎಂದು ಸ್ಪೇನ್ ಸರ್ಕಾರ ತಿಳಿಸಿದೆ.

 

ನೆದರ್ಲ್ಯಾಂಡ್: ಚೀನಾ ಕಳಿಸಿದ್ದ 6,00000 ಫೇಸ್ ಮಾಸ್ಕ್ಗಳನ್ನು ವಾಪಸ್ ಕಳಿಸಲಾಗಿದೆ. ಈ ಮಾಸ್ಕ್ಗಳು ಸರಿಯಾಗಿರಲಿಲ್ಲ. ಅದರ ಫಿಲ್ಟರ್ಗಳಲ್ಲೂ ಸಮಸ್ಯೆ ಇತ್ತು. ಆದರೂ ಅವುಗಳಿಗೆ ಗುಣಮಟ್ಟದ್ದು ಎಂದು ಸರ್ಟಿಫಿಕೇಟ್ ಕೊಡಲಾಗಿತ್ತು. ನಾವದನ್ನು ವಾಪಸ್ ಕಳಿಸಿದ್ದೇವೆ ಎಂದು ಡಚ್ ಆರೋಗ್ಯ ಸಚಿವಾಲಯ ತಿಳಿಸಿದೆ.

 

ಟರ್ಕಿ: 3,50, 000 ರೊನಾ ವೈರಸ್ ಕಿಟ್ಗಳನ್ನು ಚೀನಾಕ್ಕೆ ವಾಪಸ್ ಕಳಿಸಿದ್ದಾಗಿ ಟರ್ಕಿ ಘೋಷಿಸಿದೆ.

 

Find out more: