ಕೊರೋನಾ ವೈರಸ್  ವಿರುದ್ಧ ದೇಶವನ್ನು ಎರಡೇ ಹಂತದ ಲಾಕ್ ಡೌನ್‌ಗೆ ಆದೇಶವನ್ನು ಪ್ರಧಾನಿ ಮೋದಿಯವರು ಇಂದು ನೀಡಿದ್ದಾರೆ. ಇದರ ಜೊತೆಗೆ ದೇಶದ ಜನತೆಗೆ ಸಪ್ತ ಸೂತ್ರಗಳನ್ನು ನೀಡಿದ್ದಾರೆ ಆದರೆ ಇದಕ್ಕೆ ಆಕ್ಷೇಪವನ್ನು ವ್ಯಕ್ತ ಪಡಿಸಿರುವ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ 7 ಪ್ರೆಶ್ನೆಗಳನ್ನು ಕೇಳಿದ್ದಾರೆ. ಅಷ್ಟಕ್ಕೂ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್  ಪಕ್ಷ  ಕೇಳಿರುವ ಪ್ರೆಶ್ನೆಗಳು ಏನು ಗೊತ್ತಾ..?

 

ಪ್ರಧಾನಿ ಮೋದಿಯವರು ದೇಶದ ಜನತೆಗೆ  ನೀಡಿರುವ ಸಪ್ತ ಸೂತ್ರಗಳಿಗೆ ಆಕ್ಷೇಪವನ್ನು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ನ ರಣದೀಪ್ ಸಿಂಗ್ ಸುರ್ಜೇವಾಲ, ಲಾಕ್ಡೌನ್ಗೆ ಕಾಂಗ್ರೆಸ್ ಬೆಂಬಲ ನೀಡುತ್ತೆ. ಕೇವಲ ಜನರ ಜವಾಬ್ದಾರಿಗಳನ್ನು ಮಾತ್ರವೇ ನೆನಪಿಸಬೇಡಿ.. ನಿಮ್ಮ ಜವಾಬ್ದಾರಿಯನ್ನೂ ನಿರ್ವಹಿಸಿ ಎಂದು ಒತ್ತಾಯಿಸಿದ್ರು.

 

ಹಾಗಾದ್ರೆ ಕೇಂದ್ರ ಸರ್ಕಾರದ ಮುಂದೆ ಕಾಂಗ್ರೆಸ್ ಇಟ್ಟ ಸಪ್ತಪ್ರಶ್ನೆಗಳು ಏನು ಅಂತ ನೋಡೋದಾದ್ರೆ,

 

1.ಕೊರೋನಾ ನಿಯಂತ್ರಿಸುವ ಏಕೈಕ ದಾರಿ ಅಂದ್ರೆ ಅದು ಟೆಸ್ಟಿಂಗ್.. 2020 ರ ಫೆಬ್ರವರಿಯಿಂದ ಏಪ್ರಿಲ್ 13. ರವರೆಗೆ ಅಂದ್ರೆ 72 ದಿನಗಳಲ್ಲಿ ದೇಶದಲ್ಲಿ ಕೇವಲ 2,17,554 ಮಂದಿಯ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಅಂದ್ರೆ ಪ್ರತಿದಿನ ಸರಾಸರಿ 3,021 ಪರೀಕ್ಷೆಗಳು ನಡೆದಿವೆ. ಹಾಗಾದ್ರೆ ಪರೀಕ್ಷಾ ಪ್ರಮಾಣ ಹೆಚ್ಚಿಸಲು ಯಾವ ಕ್ರಮ ಕೈಗೊಂಡಿದ್ದೀರಿ..?

2. ಕೊರೋನಾ ಹೋರಾಟದಲ್ಲಿ ಮೊದಲ ಸಾಲಿನಲ್ಲಿ ವೈದ್ಯರು, ನರ್ಸ್ಗಳು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮತ್ತು ಪೌರಕಾರ್ಮಿಕರು ಇದ್ದಾರೆ. ಇವರಿಗೆ ಅಗತ್ಯವಾದ ಎನ್-೯೫ ಮಾಸ್ಕ್ ಮತ್ತು ಪಿಪಿಇ ಕೊರತೆ ಇದೆ. ಈ ವಿಚಾರದಲ್ಲಿ ಯಾಕೆ ಸುಮ್ಮನಿದ್ದೀರಿ..? ಯಾವ ಕ್ರಮ ಕೈಗೊಂಡಿದ್ದೀರಿ..?

 

3. ಇಂದು ಕೋಟ್ಯಂತರ ಕೂಲಿ ಕಾರ್ಮಿಕರು ದಿನದ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸಲು ನಿಮ್ಮ ಪ್ಲಾನ್ ಏನು..?

 

4. ಲಕ್ಷಾಂತರ ಎಕರೆಯಲ್ಲಿ ಬೆಳೆದ ಬೆಳೆ ಕಟಾವಿಗೆ ಬಂದು ನಿಂತಿವೆ. ಅದಕ್ಕೆ ಯಾವ ರೀತಿ ಸಿದ್ಧತೆ ನಡೆಸಿದ್ದೀರಿ..? ಸಮಯಕ್ಕೆ ಸರಿಯಾಗಿ ಕೊಯ್ಲು ಮತ್ತು ಎಂಎಸ್ಪಿ ನಿಗದಿಪಡಿಸಿ ಬೆಳೆ ಖರೀದಿ ಬಗ್ಗೆ ಯಾಕೆ ಸುಮ್ಮನಿದ್ದೀರಿ..?

 

5. ಕೊರೋನಾಗೂ ಮುನ್ನವೇ ದೇಶದಲ್ಲಿ ಯುವಕರು ನಿರುದ್ಯೋಗದ ಸಮಸ್ಯೆ ಅನುಭವಿಸ್ತಿದ್ರು. ಆದ್ರೆ ಈಗ ಆ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಸರ್ಕಾರದ ಕೋವಿಡ್-೧೯ ಎಕನಾಮಿಕ್ ರಿಕವರಿ ಟಾಸ್ಕ್ ಫೋರ್ಸ್ ಎಲ್ಲಿ ಮಾಯವಾಗಿದೆ..? ಕೋಟ್ಯಂತರ ಯುವಕರು ಎಲ್ಲಿಗೆ ಹೋಗಬೇಕು..?

 

6. ದೇಶದ ಆರ್ಥಿಕತೆಯ ಆಧಾರವಾದ ಅಂಗಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತೊಂದರೆ ಅನುಭವಿಸ್ತಿವೆ. ಕೃಷಿ ಬಿಟ್ಟರೆ ಅತಿ ಹೆಚ್ಚಿನ ಉದ್ಯೋಗ ಈ ಕ್ಷೇತ್ರದಲ್ಲಿದೆ. ಹೀಗಾಗಿ ಇವುಗಳನ್ನು ಮತ್ತೆ ಹಳಿಗೆ ತರಲು ನಿಮ್ಮ ಯೋಜನೆ ಏನು..?

 

7. ಕೊರೋನಾದಿಂದ ಉಂಟಾಗುವ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಜಗತ್ತಿನ ಎಲ್ಲಾ ರಾಷ್ಟ್ರಗಳು ಕೋಟಿ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಿಸಿತು. ಈ ಪಟ್ಟಿಯಲ್ಲಿ ಸರ್ಕಾರ ಏಕೆ ಕೊನೆಯ ಸ್ಥಾನದಲ್ಲಿದೆ..?

ಹೀಗೆ ಕಾಂಗ್ರೆಸ್ ಪರವಾಗಿ ರಣದೀಪ್ ಸಿಂಗ್ ಸುರ್ಜೇವಾಲ ಕೇಂದ್ರ ಸರ್ಕಾರದ ಮುಂದೆ 7 ಪ್ರಶ್ನೆಗಳನ್ನಿಟ್ಟಿದ್ದಾರೆ.

 

 

 

Find out more: