ನವದೆಹಲಿ:ಕೊರೋನಾ ವೈರಸ್ ದೇಶವನ್ನು ಹಳವಾಗಿ ಕಾಡುತ್ತಿರುವ ಸಂದರ್ಭದಲ್ಲಿ ಇದರ ಹಾವಳಿಯನ್ನು ಕಡಿಮೆ ಮಾಡುವ ದೃಷ್ಠಿಯಿಂದ ಲಾಕ್ ಡೌನ್ ಮಾಡಲಾಗಿತ್ತು. ಅಷ್ಟಾದರೂ ಕೂಡ ಕೊರೋನಾ ಸೋಂಕಿನ ಸಂಖ್ಯೆ ಕಡಿಮೆಯಾಗದ ಕಾರಣ ಮತ್ತೆ 19 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಇಷ್ಟಾದರೂ ಕೂಡ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ ಅದೇ ಪರಿಸ್ಥಿತಿ ಕರ್ನಾಟಕದಲ್ಲಿ ಮುಂದುವರೆದಿದೆ ಆದರೆ ಪ್ರಧಾನಿ ಕಚೇರಿ ಕರ್ನಾಟಕದ ಎರಡು ಎರಡು ಜಿಲ್ಲೆಗಳ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಿದೆ ಅಷ್ಟಕ್ಕೂ ಆ ಎರಡು ಜಿಲ್ಲೆಗಳು ಯಾವುವು ಗೊತ್ತಾ..? ಇಲ್ಲಿದೆ ನೋಡಿ..
ಕೊರೋನಾವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದರ ಪರಿಣಾಮ ಈಗ ರಾಜ್ಯದಲ್ಲಿಯೂ ಕೂಡ ಬೀರಿದೆ. ಈ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯದಲ್ಲಿನ ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ವಿಚಾರವಾಗಿ ಸ್ವತಃ ಪ್ರಧಾನಿ ಕಚೇರಿ ಕಾಳಜಿ ವಹಿಸುತ್ತಿದೆ.
ದಕ್ಷಿಣ ಭಾರತದ ಕೇರಳ ಹಾಗೂ ಲಕ್ಷದ್ವೀಪಗಳಲ್ಲಿನ ಕೊರೊನಾ ಪ್ರಕರಣಗಳನ್ನು ನಿಭಾಯಿಸುವ ಹೊಣೆ ಹೊತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಮೈಸೂರು ಮತ್ತು ಬೆಂಗಳೂರಿನಲ್ಲಿನ ಕೊರೋನಾ ವಿದ್ಯಮಾನಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.ಈಗಾಗಲೇ ಕೇಂದ್ರ ಸಚಿವರು ಈ ನಿಟ್ಟಿನಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕೊರೋನಾ ಪ್ರಕರಣಗಳ ವಿಚಾರವಾಗಿ ನಿಮ್ಹಾನ್ಸ್ ನಿರ್ದೇಶಕ ಪ್ರೋ. ಬಿ ಎನ್ ಗಂಗಾಧರ್, ಜಯದೇವ ಅಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಮುಂತಾದವರೊಂದಿಗೆ ಸಚಿವರು ಮಾಹಿತಿ ಸಂಗ್ರಹಿಸಿದ್ದಾರೆ. ಅದೇ ರೀತಿಯಾಗಿ ಮೈಸೂರು ಪ್ರಕರಣಗಳ ವಿಚಾರವಾಗಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರಿನ ರಾಜ ಕುಟುಂಬದ ಯದುವೀರ ಒಡೆಯರ್ ಮತ್ತು ಡಾ. ಮಂಜುನಾಥ್ ಅವರೊಂದಿಗೆ ಡಿವಿಎಸ್ ಚರ್ಚಿಸಿದ್ದಾರೆ.
ಈ ವಿಚಾರವಾಗಿ ತಿಳಿಸಿದ ಕೇಂದ್ರ ಸಚಿವ ಡಿವಿಎಸ್ ’ಮೈಸೂರು ಮತ್ತು ಬೆಂಗಳೂರಿನಲ್ಲಿ ಕೊರೋನಾ ಹಬ್ಬಿದ ರೀತಿ, ಕೊರೋನಾ ಸೋಂಕು ಹಬ್ಬುವುದನ್ನು ತಡೆಯಲು ಅಲ್ಲಿ ಕೈಗೊಂಡಿರುವ ಕ್ರಮಗಳು, ಒಂದು ವೇಳೆ ಈ ಭಾಗದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದರೆ ಆಗುವ ಸಾಧಕ ಬಾಧಕಗಳು ಮುಂತಾದವುಗಳ ಬಗ್ಗೆ ನಾನು ಸಮಾಲೋಚನೆ ನಡೆಸಿದ್ದು, ಪ್ರಧಾನಿ ಕಾರ್ಯಾಲಯಕ್ಕೆ ವರದಿ ನೀಡಿದ್ದೇನೆ ಎಂದು ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.