ಕೊರೋನಾ ವೈರಸ್ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವಂತಹ ಈ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ, ಈ ಸಂದರ್ಭದಲ್ಲಿ ಭಾರತಕ್ಕೆ ವಿಶ್ವ ಸಂಸ್ಥೆಯಲ್ಲಿ ಮಹತ್ವದ ಸ್ಥಾನ ದೊರೆಯಲಿದೆ. ಇದರಿಂದ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಗೌರವ ಹೆಚ್ಚಾಗಲಿದೆ. ಅಷ್ಟಕ್ಕೂ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತಕ್ಕೆ ದೊರೆಯಲಿರುವ ಸ್ಥಾನ ಏನು ಗೊತ್ತಾ..?
ಜಗತ್ತು ಕರೊನಾ COVID19 ಸೋಂಕಿನ ಕಾರಣಕ್ಕೆ ತಲ್ಲಣಗೊಂಡಿರುವ ಈ ಸಂಕಷ್ಟಮಯ ಸನ್ನಿವೇಶದಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆಯ ಎಕ್ಸಿಕ್ಯೂಟಿವ್ ಬೋರ್ಡ್ನ ಚೇರ್ಮನ್ಷಿಪ್ ಮುಂದಿನ ತಿಂಗಳು ಭಾರತಕ್ಕೆ ಸಿಗಲಿದೆ. ಸದ್ಯ ಈ ಪಾತ್ರವನ್ನು ಜಪಾನ್ ನಿವರ್ಹಿಸುತ್ತಿದೆ.
ಈ ಚೇರ್ಪರ್ಸನ್ ಸ್ಥಾನಕ್ಕೆ ಭಾರತದ ಹೆಸರನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳು ಕಳೆದ ವರ್ಷವೇ ಒಮ್ಮತದಿಂದ ನಾಮನಿರ್ದೇಶನ ಮಾಡಿದ್ದವು. ಎಕ್ಸಿಕ್ಯೂಟಿವ್ ಬೋರ್ಡ್ಗೂ ಮೂರು ವರ್ಷದ ಅವಧಿಗೂ ಭಾರತದ ಹೆಸರನ್ನು ನಾಮನಿರ್ದೇಶನ ಮಾಡಿದ್ದವು. ಇದರಂತೆ, ಮುಂದಿನ ತಿಂಗಳು ಹದಿನೆಂಟರಂದು ಡಬ್ಲ್ಯುಎಚ್ಒ ಕೇಂದ್ರ ಕಚೇರಿಯಲ್ಲಿ ಆರಂಭವಾಗಲಿರುವ ವಾರ್ಷಿಕ ಸಾಮಾನ್ಯಸಭೆಯಲ್ಲಿ ಎಕ್ಸಿಕ್ಯೂಟಿವ್ ಬೋರ್ಡ್ನ ಚೇರ್ಮನ್ಷಿಪ್ಗೆ ಭಾರತದ ಪ್ರತಿನಿಧಿಯ ನಾಮನಿರ್ದೇಶನವಾಗಲಿದೆ.
ಈ ಸಾಮಾನ್ಯ ಸಭೆ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಅವರ ದಿಕ್ಸೂಚಿ ಭಾಷಣದೊಂದಿಗೆ ಆರಂಭವಾಗುತ್ತದೆ. ಈ ಭಾಷಣ ಬಹುತೇಕ ವುಹಾನ್ ಕರೊನಾ ವೈರಸ್ ಸೋಂಕು ತಡೆ ವಿಚಾರದ ಕುರಿತೇ ಇರಲಿದೆ. ಇದೇ ವೇಳೆ ಔಪಚಾರಿಕವಾಗಿ ಖಾಲಿ ಇರುವ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯರ ನೇಮಕವೂ ಆಗಲಿದೆ. ಈ ಹಿಂದಿನ ಕಾರ್ಯಸೂಚಿ ಪ್ರಕಾರ ಸಾಮಾನ್ಯ ಸಭೆಯಲ್ಲಿ 60 ವಿಷಯಗಳು ಚರ್ಚೆ ಆಗಬೇಕಾಗಿತ್ತು. ಆದರೆ, ಈ ಸಲದ ಸಭೆಯಲ್ಲಿ ಕೇವಲ ಮೂರು ಕಾರ್ಯಸೂಚಿಯಷ್ಟೇ ಇದೆ.
ಎಕ್ಸಿಕ್ಯೂಟಿವ್ ಬೋರ್ಡ್ನಲ್ಲಿ 34 ಸದಸ್ಯರಿದ್ದು, ಭಾರತದ ಪ್ರತಿನಿಧಿ ಚೇರ್ಪರ್ಸನ್ ಆಗಿದ್ದುಕೊಂಡು ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಂ ಜತೆಗೆ ನಿಕಟವಾಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ, ಡೈರೆಕ್ಟರ್ ಜನರಲ್ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ಎಕ್ಸಿಕ್ಯೂಟಿವ್ ಬೋರ್ಡ್ ಚೇರ್ಪರ್ಸನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ.
ಇದೇ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರೋಗ್ರಾಂ ಬಜೆಟ್ ಮತ್ತು ಅಡ್ಮಿನಿಸ್ಟ್ರೇಷನ್ ಕಮಿಟಿಯಲ್ಲೂ ಭಾರತದ ಪ್ರತಿನಿಧಿ ಇಂಡೋನೇಷ್ಯಾದ ಪ್ರತಿನಿಧಿಯ ಸ್ಥಾನವನ್ನು ತುಂಬಲಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಡಬ್ಲ್ಯುಎಚ್ಒ ಅಧಿಕಾರಿಯೊಬ್ಬರು ಭಾರತದ ನಡೆಯನ್ನು ಸಮರ್ಥಿಸಿಕೊಂಡಿದ್ದು, ಡಬ್ಲ್ಯುಎಚ್ಒ ಸುಧಾರಣೆ ಮತ್ತು ಕರೊನಾ ಸೋಂಕು ಹೋರಾಟದಲ್ಲಿ ಭಾರತ ತೋರಿಸಿರುವ ಪಾರದರ್ಶಕತೆ ಮತ್ತು ಬದ್ಧತೆ ಮಾದರಿಯಾಗಿರುವಂಥದ್ದು ಎಂದು ಹೇಳಿಕೊಂಡಿದ್ದಾರೆ.
ಇನ್ನು ಎಕ್ಸಿಕ್ಯೂಟಿವ್ ಬೋರ್ಡ್ನಲ್ಲಿ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಂ ಅವರ ಐದು ವರ್ಷದ ಅವಧಿ 2021ರ ಮೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಅದರ ನಂತರ ಆ ಸ್ಥಾನವನ್ನೂ ಭಾರತ ತುಂಬಲಿದೆ. 34 ಸದಸ್ಯರ ಎಕ್ಸಿಕ್ಯೂಟಿವ್ ಬೋರ್ಡ್ ಇದಕ್ಕಾಗಿ ಅಭ್ಯರ್ಥಿಗಳ ಸಂದರ್ಶನ ನಡೆಸಬೇಕು. ನಂತರ ಹೆಲ್ತ್ ಅಸೆಂಬ್ಲಿಯಲ್ಲಿ ಮತಕ್ಕೆ ಹಾಕಿ ಆಯ್ಕೆ ಮಾಡಲಾಗುತ್ತದೆ.