ಕೊರೋನಾ ವೈರಸ್ ಸೋಂಕು ಭಾರತದಲ್ಲಿ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಈ ಮಹಾ ಮಾರಿ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮವನ್ನು ಕೈಗೊಂಡರೂ ಕೂಡ ಯಾವುದೇ ಪ್ರಯೊಜನಗಳು ಸಾಧ್ಯವಾಗಿಲ್ಲ. ಈ ನಡುವೆ ಭಾರತೀಯ ವಿಜ್ಞಾನಿಗಳು ಆತಂಕಕಾರಿ ವಿಷಯವೊಂದನ್ನು ತಿಳಿಸಿದ್ದಾರೆ… ಇದರಿಂದ ದೇಶದ ಜನರು ಆತಂಕದಲ್ಲಿದ್ದಾರೆ. ಅಷ್ಟಕ್ಕೂ ವಿಜ್ಞಾನಿಗಳು ತಿಳಿಸಿದ ಆ ವಿಷಯ ಏನು ಗೊತ್ತಾ..?

 

ಭಾರತದಲ್ಲಿ ಲಾಕ್‌ಡೌನ್ ಹಿಂತೆಗೆದುಕೊಂಡ ಬಳಿಕವೂ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯುಂಟಾಗಲಿದೆ. ಆದರೆ ಜುಲೈ ಅಥವಾ ಆಗಸ್ಟ್ ತಿಂಗಳ ಮುಂಗಾರಿನಲ್ಲಿ ಕೊರೋನಾ ವೈರಸ್‌ನ ಎರಡನೆ ಅಲೆ ಕಂಡುಬರುವ ಸಾಧ್ಯತೆಯಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಲಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಸೋಂಕು ಹರಡುವಿಕೆಯನ್ನು ತಡೆಯಲು ಹಾಗೂ ಜನರ ನಡುವಿನ ಸುರಕ್ಷಿತ ಅಂತರವನ್ನು ಭಾರತವು ನಿಯಂತ್ರಿಸಲು ಎಷ್ಟರ ಮಟ್ಟಿಗೆ ಶಕ್ತವಾಗಲಿದೆ ಎಂಬುದನ್ನು ಅವಲಂಭಿಸಿ, ಎರಡನೆ ಹಂತದ ಕೊರೋನಾ ಸೋಂಕಿನ ಏರಿಕೆಯ ಗತಿಯು ನಿರ್ಧರಿತವಾಗಲಿದೆಯೆಂದು ಅವರು ಹೇಳಿದರು.

 

''ಕೊರೋನ ಸೋಂಕಿನ ಹೊಸ ಪ್ರಕರಣಗಳ ಏರಿಕೆಯು ಒಂದೇ ರೀತಿಯ ಸ್ಥಿರತೆಯೊಂದಿಗೆ ಸಾಗುತ್ತಿದೆ ಮತ್ತು ತರುವಾಯ ಕೆಲವು ವಾರಗಳವರೆಗೆ ಅದು ಇಳಿಮುಖಗೊಳ್ಳುತ್ತಾ ಹೋಗಲಿದೆ'' ಎಂದು ತಮಿಳುನಾಡಿನ ಶಿವನಾಡಾರ್ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಸಮಿತ್ ಭಟ್ಟಾಚಾರ್ಯ ತಿಳಿಸಿದ್ದಾರೆ.

 

''ಆದಾಗ್ಯೂ,ಜುಲೈ-ಆಗಸ್ಟ್ ತಿಂಗಳ ಮುಂಗಾರಿನಲ್ಲಿ ಕೊರೋನ ಸೋಂಕಿನ ಎರಡನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಆ ಸಮಯದಲ್ಲಿ ನಾವು ಎಷ್ಟರ ಮಟ್ಟಿಗೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತೇವೆ ಎಂಬುದನ್ನು ಅವಲಂಭಿಸಿ , ಸೋಂಕಿನ ಏರಿಕೆಯ ಗತಿ ನಿರ್ಧಾರವಾಗಲಿದೆ '' ಎಂದು ವರು ಹೇಳುತ್ತಾರೆ.

ಸಮಿತ್ ಭಟ್ಟಾಚಾರ್ಯ ಅವರ ಅನಿಸಿಕೆಗೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಪ್ರಾಚಾರ್ಯ ರಾಜೇಶ್ ಸುಂದರನ್ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ.

 

''ಲಾಕ್‌ಡೌನ್ ಹಿಂತೆಗೆದ ಬಳಿಕ ನಾವು ಸಾಮಾನ್ಯ ಚಟುವಟಿಕೆಗಳಿಗೆ ಮರಳಿದಾಗ, ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಾಗುವ ಸಾಧ್ಯತೆಗಳಿವೆ. ಚೀನಾವು ಇತ್ತೀಚೆಗೆ ಪ್ರಯಾಣದ ಕುರಿತ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಇಂತಹ ಬೆಳವಣಿಗೆಗಳು ಕಂಡುಬಂದಿವೆಯೆಂದು ಅವರು ಹೇಳಿದ್ದಾರೆ.

 

ಕಳೆದ ಕೆಲವು ದಿನಗಳಲ್ಲಿ ಈ ಹಿಂದಿಗಿಂತ ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಯ ಹೆಚ್ಚಳವು ನಿಧಾನವಾಗಿರುವುದು ಕಂಡುಬಂದಿದೆ ಎಂದು ಭಟ್ಟಾಚಾರ್ಯ ತಿಳಿಸಿದರು.

 

ಕೊರೋನಾದಿಂದ ಗುಣಮುಖರಾದವರಲ್ಲಿ ಸೋಂಕು ಮತ್ತೆ ಕಾಣಿಸಿಕೊಂಡಿರುವುದನ್ನು ಚೀನಾ ಹಾಗೂ ಯುರೋಪ್‌ನಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನಗಳಿಂದ ಕಂಡುಬಂದಿದೆ. ಹೀಗಾಗಿ ಸೋಂಕು ತಗಲಿ ಗುಣಮುಖರಾದವರಲ್ಲಿ ಎರಡನೆ ಸಲ ಸೋಂಕು ತಗಲುವುದರ ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಯಲಿದೆಯೆಂಬುದಕ್ಕೆ ಯಾವುದೇ ನಿದರ್ಶನವಿಲ್ಲವೆಂದು ಭಟ್ಟಾಚಾರ್ಯ ತಿಳಿಸುತ್ತಾರೆ.

\

Find out more: