ಪ್ರಧಾನಿ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತದಲ್ಲಿ ಕೋವಿಡ್ 19 ವೈರಸ್​ ಆರ್ಭಟ ಮುಂದುವರಿದಿದ್ದು ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುವವರ ಸಂಖ್ಯೆ ಏರುತ್ತಲೇ ಇದೆ. ಇದರ ಕುರಿತಾಗಿ ಪ್ರಧಾನಿ ಇಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

 

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿ ಮೇ 3ರವರೆಗೂ ಲಾಕ್​​ಡೌನ್​​ ವಿಸ್ತರಿಸಿ ಆದೇಶಿಸಿದ್ದಾರೆ. ಮಾತ್ರವಲ್ಲದೆ ಕೋವಿಡ್ ಕುರಿತಂತೆ ಆಗ್ಗಾಗ ಜನರನ್ನುದ್ದೇಶಿಸಿ ಮಾತಾಡುತ್ತಿರುತ್ತಾರೆ. ಇಂದಿನ ಕಾರ್ಯಕ್ರಮದಲ್ಲಿ ಕೋವಿಡ್ -19 ಮಾಹಾಮಾರಿ ವಿರುದ್ಧದ ಹೋರಾಟದ ಪ್ರಗತಿ ಮತ್ತು ಮುಂದಿನ ಹಾದಿಯ ಕುರಿತು ಅವರ ಅಭಿಪ್ರಾಯಗಳನ್ನು ಜನರಿಗೆ ತಿಳಿಸುವ ನಿರೀಕ್ಷೆಯಿದೆ.

ಮನ್ ಕೀ ಬಾತ್ ಕಾರ್ಯಕ್ರಮ ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್​ಸೈಟ್​, ನ್ಯೂಸ್​​ ಆನ್​​ ಎಐಆರ್​ ಆಯಪ್​​ನಲ್ಲೂ ಪ್ರಸಾರವಾಗಲಿದೆ.

 

ಕಳೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ( ಮಾರ್ಚ್ 29) ಪ್ರಧಾನಿ ಮೋದಿ ದೇಶದಲ್ಲಿ ಲಾಕ್ ಡೌನ್ ವಿಧಿಸಿದಕ್ಕಾಗಿ ಜನರನ್ನು ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಮಾತ್ರವಲ್ಲದೆ ಲಾಕ್ ಡೌನ್ ನಿಂದಾಗುವ ಒಳಿತುಗಳ ಕುರಿತು ಮನವರಿಕೆ ಮಾಡಿ ಕೊಟ್ಟಿದ್ದರು.

 

ಕೋವಿಡ್ 19 ವೈರಸ್​​ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಲಾಕ್​​ಡೌನ್​​​​​ ವಿಸ್ತರಿಸುವ ಕುರಿತಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು 20.3 ಕೋಟಿ ಮಂದಿ ವೀಕ್ಷಿಸಿದ್ಧಾರೆ ಎಂದು ಬ್ರಾಡ್​​ಕಾಸ್ಟ್​​ ಆಡಿಯನ್ಸ್​ ರೀಸರ್ಚ್​​ ಕೌನ್ಸಿಲ್​​(ಬಿಎಆರ್​​ಸಿ) ತಿಳಿಸಿತ್ತು. ಏಪ್ರಿಲ್​​​ 14ನೇ ತಾರೀಕಿನಂದು ಮಾಡಿದ ಮೋದಿಯವರ 21 ನಿಮಿಷಗಳ ಲಾಕ್​ಡೌನ್​​ ಭಾಷಣವನ್ನು 199 ನ್ಯೂಸ್​​ ಚಾನೆಲ್​​ಗಳ ಮೂಲಕ 20 ಕೋಟಿ ಮಂದಿ ನೋಡಿದ್ದರು.

 

ಪ್ರಧಾನಿ ನರೇಂದ್ರ ಮೋದಿಯವರ ಏಪ್ರಿಲ್​​ 14ರ ಲಾಕ್​ಡೌನ್​​ ಭಾಷಣವೂ ಮಾರ್ಚ್​​​ ತಿಂಗಳ ಭಾಷಣದ ವೀಕ್ಷಕರ ಸಂಖ್ಯೆಯನ್ನು ಮೀರಿಸಿತ್ತು. ಮೊದಲ ಬಾರಿಗೆ 21 ದಿನಗಳ ಕಾಲ ಲಾಕ್​​ಡೌನ್​​ ಬಗ್ಗೆ ಮಾಡಿದ್ದ ಹಿಂದಿನ ಭಾಷಣವೂ ಆಗ 201 ವಾಹಿನಿಗಳ ಮೂಲಕ 19.7 ಕೋಟಿ ಮಂದಿಯನ್ನು ತಲುಪಿತ್ತು. ಇದಕ್ಕೂ ಮುನ್ನ ಮಾಡಲಾಗಿದ್ದ ಜನತಾ ಕರ್ಫ್ಯೂ ಭಾಷಣವನ್ನು 8.3 ಕೋಟಿ ಪ್ರೇಕ್ಷಕರು ವೀಕ್ಷಿಸಿದ್ದರು.

 

Find out more: