ನವದೆಹಲಿ,: ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಆದೇಶವನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಗಿದೆ. ಆದರೂ ಡೆಡ್ಲಿ ಸೋಂಕಿನ ಅಟ್ಟಹಾಸ ಕಡಿಮೆಯಾಗಿಲ್ಲ. ಹೀಗಾಗಿ ಮೇ 3ರ ನಂತರ ಲಾಕ್​ಡೌನ್​ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎನ್ನುವುದು ಇಂದು ನಿರ್ಧಾರವಾಗಲಿದೆ.  ಆದ್ರೆ, ಪ್ರಧಾನಿ ನರೇಂದ್ರ ಮೋದಿ ಮೇ.3ರೊಳಗೆ ಈ ಬ್ಗಗೆ ಯಾವ ಸಂದರ್ಭದಲ್ಲಾದರೂ ನಿರ್ಧಾರವನ್ನು ಪ್ರಕಟಿಸಬಹುದು.

ಮೋದಿ ವಿಡಿಯೋ ಕಾನ್ಫರೆನ್ಸ್ 

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಲಿದ್ದಾರೆ. ಎಲ್ಲಾ ರಾಜ್ಯಗಳ ಪರಿಸ್ಥಿತಿ ತಿಳಿದುಕೊಳ್ಳಲಿದ್ದಾರೆ. ಜೊತೆಗೆ ಲಾಕ್​ಡೌನ್​ ವಿಸ್ತರಣೆ ಬಗ್ಗೆ ಅಭಿಪ್ರಾಯವನ್ನೂ ಸಂಗ್ರಹಿಸಲಿದ್ದು, ಹಂತಹಂತವಾಗಿ ವಿನಾಯಿತಿ ನೀಡಿದರೆ ಹೇಗೆ?

ಈಗಾಗಲೇ ಲಾಕ್​ಡೌನ್​ ಆದೇಶಕ್ಕೂ ಮೊದಲು ಹಾಗೂ ಲಾಕ್​​ಡೌನ್​ ವಿಸ್ತರಿಸುವುದಕ್ಕಿಂತ ಮುನ್ನ ಸೇರಿದಂತೆ ಕೊರೋನಾ ವಿರುದ್ಧ ಹೋರಾಟದ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳ ಸಿಎಂ ಜತೆ ಸಭೆ ನಡೆಸಿಕೊಂಡು ಬರುತ್ತಿದ್ದಾರೆ.

ಎರಡನೇ ಹಂತದ ಲಾಕ್​ಡೌನ್​ ವಿಧಿಸುವಕ್ಕೂ ಮುನ್ನ ಏಪ್ರಿಲ್​ 11 ರಂದು ಸಿಎಂಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ್ದರು. ಈಗ ಮೇ 3ರಂದು ಎರಡನೇ ಹಂತದ ಲಾಕ್​ಡೌನ್ ಅವಧಿ ಅಂತ್ಯವಾಗಲಿದೆ. ಈ ಅವಧಿ ಮುಕ್ತಾಯಗೊಳ್ಳುವ ಮುನ್ನ ಎಲ್ಲಾ ರಾಜ್ಯದ ಸಿಎಂಗಳೊಂದಿಗೆ ಪ್ರಧಾನಿ ಮೋದಿ ನಡೆಸುತ್ತಿರುವ ಈ ವಿಡಿಯೋ ಕಾನ್ಫರೆನ್ಸ್ ಮಹತ್ವ ಪಡೆದುಕೊಂಡಿದೆ.ಲಾಕ್ ಡೌನ್ ಅಂತ್ಯವಾಗಲಿದೆಯಾ..? ಅಥವಾ ಮತ್ತೆ ವಿಸ್ತರಣೆಯಾಗಲಿದ್ಯಾ..? ಎನ್ನುವ ಕುತೂಹಲ ಮೂಡಿಸಿದೆ.

ಲಾಕ್‌ಡೌನ್ ಸಡಿಲಿಕೆ ಕಷ್ಟ ಸಾಧ್ಯ 

ಹೌದು....ದೇಶದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ದಿನ ಲಾಕ್‌ಡೌನ್ ವಿಸ್ತರಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಲಾಕ್‌ಡೌನ್ ಸಡಿಲಿಕೆ ಮಾಡಿದ್ರೆ, ಅದು ಕೇವಲ ಗ್ರೀನ್ ಝೋನ್‌ ಪ್ರದೇಶಗಳಲ್ಲಿ ಮಾತ್ರ. ಗ್ರೀನ್ ಝೋನ್‌ ಪ್ರದೇಶಗಳಲ್ಲಿ ಸಡಿಲಿಕೆ ನೀಡಿದ್ರೂ ಅಂತರ್ ಜಿಲ್ಲಾ ಮತ್ತು ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಮೊದಲಿನಂತೆ ಸ್ವತಂತ್ರವಾಗಿ ಓಡಾಡುವ ತವಕ: ಲಾಕ್‌ಡೌನ್‌ಗೆ ವಿನಾಯ್ತಿ ಸಿಗುತ್ತಾ?

ಲಾಕ್‌ಡೌನ್ ವಿಸ್ತರಣೆಗೆ ರಾಜ್ಯಗಳ ಮನವಿ 

ಮೇ.3ರ ನಂತರವೂ ಲಾಕ್‌ಡೌನ್ ಮುಂದುವರಿಸುವಂತೆ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಓಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿವೆ. ಇನ್ನು ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ ಸೇರಿದಂತೆ 6 ರಾಜ್ಯಗಳು ಕೇಂದ್ರ ನೀಡುವ ಸೂಚನೆ ಪಾಲನೆ ಮಾಡುವುದಾಗಿ ಹೇಳಿವೆ.

ಲಾಕ್‌ಡೌನ್ ವಿಸ್ತರಣೆ ಮಾಡುವಂತೆ ವರದಿ 

ಕೇಂದ್ರ ಟಾಸ್ಕ್ ಫೋರ್ಟ್ ಸಮಿತಿ ಕೂಡ ಮೇ.3 ನಂತರವೂ ಲಾಕ್‌ಡೌನ್ ಇನ್ನಷ್ಟು ದಿನ ಮುಂದುವರಿಸುವುದು ಒಳ್ಳೆಯದು ಎನ್ನುವ ವರದಿಯನ್ನು ಮೋದಿಗೆ ಸಲ್ಲಿಸಿದೆ. ಇವೆಲ್ಲವೂಗಳನ್ನು ಸೇರಿಸಿ ಸೋಮವಾರ ಸಿಎಂಗಳ ಜತೆ ಸಭೆ ನಡೆಸಿ ಮೋದಿ ಅಂತಿಮ ನಿರ್ಧಾರ ಕೈಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

Find out more: