ನವದೆಹಲಿ : ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ ಅಷ್ಟಕ್ಕೂ ಈ ಒಂದು ಸಭೆಯಲ್ಲಿ ಏನೇನು ಚರ್ಚಿಸಲಾಗುತ್ತದೆ ಗೊತ್ತಾ..?

 

ಈಗಾಗಲೇ ಕೋವಿಡ್ 19 ತಹಬದಿಗೆ ಬಾರದ ಕಾರಣ ಲಾಕ್​ಡೌನ್​ ಎರಡನೇ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಅದಾಗ್ಯೂ ಇಂದಿನ ಸಭೆಯಲ್ಲಿ ಮೇ 3ರ ಬಳಿಕ ಲಾಕ್​ಡೌನ್​ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ? ಲಾಕ್ ಡೌನ್ ನಿಂದ ಹಂತಹಂತವಾಗಿ ಹೊರಬರುವ ಮಾರ್ಗಗಳು ಮತ್ತು ಪ್ರಸ್ಥುತ ಕೈಗೊಂಡಿರುವ ಕಾರ್ಯಗಳ ಬಗ್ಗೆ ಸಂವಾದ ನಡೆಸಲಿದ್ದಾರೆ.

ಕೋವಿಡ್ 19 ಮಾಹಾಮಾರಿ ಆರಂಭಗೊಂಡಾಗಿನಿಂದ ಪ್ರಧಾನಿ, ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಮೂರನೇ ವಿಡಿಯೋ ಕಾನ್ಫರೆನ್ಸ್ ಇದಾಗಿದೆ. ಈ ಸಂವಾದ ಬೆಳಗ್ಗೆ 11 ಗಂಟೆ ಸುಮಾರಿಗೆ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

 

 

ಈ ಸಭೆಯಲ್ಲಿ ಆಯಾ ರಾಜ್ಯಗಳಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಹರಡುವಿಕೆಯ ಪ್ರಮಾಣ ಹಾಗೂ ಸ್ಥಿತಿಗತಿಯ ಕುರಿತು ಮಾತುಕತೆ ನಡೆಸಲಿದ್ದಾರೆ. ಜೊತೆಗೆ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವುದೇ ಅಥವಾ ವಿಸ್ತರಣೆ ಮಾಡುವುದೇ ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

 

 

ಕಳೆದ ಮಾರ್ಚ್.24ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ 21 ದಿನಗಳ ಕಾಲ ಭಾರತ ಲಾಕ್ ಡೌನ್ ಘೋಷಿಸಿದರು. ಅನಂತರ ರಾಜ್ಯಗಳ ಶಿಫಾರಸ್ಸು ಹಾಗೂ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಲಾಕ್ ಡೌನ್ ನ್ನು ಮೇ.03ರವರೆಗೂ ವಿಸ್ತರಣೆ ಮಾಡಲಾಗಿತ್ತು.

 

ಐದು ರಾಜ್ಯಗಳಿಂದ ಲಾಕ್ ಡೌನ್ ವಿಸ್ತರಣೆಗೆ ಶಿಫಾರಸು:

 

ಕೊರೊನಾ ವೈರಸ್ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಸಂಗ್ರಹಿಸುವ ಪೂರ್ವದಲ್ಲಿಯೇ ಭಾನುವಾರವೇ ಐದು ರಾಜ್ಯಗಳು ಲಾಕ್ ಡೌನ್ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸಿವೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಓಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಉತ್ತರ ಪ್ರದೇಶ ಜೂನ್.30ರವರೆಗೂ ಸಾರ್ವಜನಿಕ ಸ್ಥಳದಲ್ಲಿ ಜನರು ಗುಂಪುಗೂಡುವಂತಿಲ್ಲ ಎಂದು ಹೇಳಿದೆ.

 

ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ ಸೇರಿದಂತೆ 6 ರಾಜ್ಯಗಳು ಕೇಂದ್ರ ನೀಡುವ ಸೂಚನೆ ಪಾಲನೆ ಮಾಡುವುದಾಗಿ ಹೇಳಿವೆ. ತೆಲಂಗಾಣ ಸರ್ಕಾರ ಈಗಾಲೇ ಮೇ 7ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಕೇರಳ, ಬಿಹಾರ, ಅಸ್ಸಾಂ ಮೋದಿ ಜೊತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ಪ್ರಕಟಿಸಲಿವೆ.

 

 

Find out more: