ವೈಜಾಗ್: ಒಂದು ಕಡೆ ಇಡೀ ದೇಶವೇ ಕೊರೊನಾದಿಂದ ಸಂಕಷ್ಟ ಪಡುತ್ತಿದೆ. ಅದರಲ್ಲಿ ಭಾರತವೂ ಹೊರತಲ್ಲ. ಭಾರತದ ಬಹುತೇಕ ರಾಜ್ಯಗಳು ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಇನ್ನೂ ಕೊರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡುತ್ತಿದೆ. ಆದರೆ ಇದೀಗ ಆಂದ್ರಪ್ರದೇಶದಿಂದ ಮತ್ತೊಂದು ಆತಂಕದ ಸುದ್ದಿ ಹೊರ ಬಿದ್ದಿದೆ. ಹೌದು ವಿಶಾಖಪಟ್ಟಣದಲ್ಲಿ ಇಂದು ಮುಂಜಾನೆ ರಾಸಾಯನಿಕ ಸ್ಥಾವರದಿಂದ ಒಂದು ವಿಷಾನಿಲ ಸೋರಿಕೆ ಆಗಿದೆ ಇದರಿಂದ ಸುತ್ತಮುತ್ತಲಿಜ ಜನರೆಲ್ಲ ಭಯಭಿತರಾಗಿದ್ದಾರೆ.

 

ಹೌದು ಈ ದುರಂತದಿಂದ ಈಗಾಗಲೇ 8 ಮಂದಿ ಸಾವನ್ನಪ್ಪಿದ್ದು, 5000ಕ್ಕು ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಅಷ್ಟೇ ಅಲ್ಲದೇ ವೈಜಾಗ್ ಸುತ್ತಮುತ್ತಲಿನ ಅನೇಕರು ಬೇರೆ ಬೇರೆ ರಾಜ್ಯದಲ್ಲಿ ಇರುವವರು ಇದೀಗ ಆತಂಕಿತರಾಗಿದ್ದಾರೆ. ತಮ್ಮ ವೈಜಾಗ್ ನಲ್ಲಿ ಇರುವವರಿಗೆ ಕರೆ ಮಾಡಿ ಯೋಗ ಕ್ಷೇಮವನ್ನು ವಿಚಾರ ಮಾಡುತ್ತಿದ್ದಾರೆ. 

 

ತೆಲುಗು ಸುದ್ದಿ ವಾಹಿನಿಗಳ ಪ್ರಕಾರ, ಇಂದು ಬೆಳಿಗ್ಗೆ 3 ಗಂಟೆಗೆ ಗೋಪಾಲಪಟ್ಟಣಂ ನ ಬಳಿ ಇರುವ ಆರ್.ಆರ್.ವೆಂಕಟಪುರಂ ನಲ್ಲಿನ ಎಂಜಿ ಪಾಲಿಮರ್ಸ್ ಇಂಡಸ್ಟ್ರಿಯಲ್ಲಿ ವಿಷಾನಿಲ ಸೋರಿಕೆ ಆಗಿದೆ. ಇದರಿಂದ ಮೂರು ಕಿ,ಮೀ ವ್ಯಾಪ್ತಿಯವರೆಗೂ ಇದರ ಪ್ರಭಾವ ಬಿರಿದೆ. ಸ್ಥಳಿಯರು ಆತಂಕ್ಕೆ ಈಡಾಗಿದ್ದಾರೆ. 

 

ವಿಷಾನಿಲ ಸೋರಿಕೆ ಆದ ಬೆನ್ನಲ್ಲೆ, ಅನೇಕರು ರಸ್ತೆಯಲ್ಲಿ ಪ್ರಜ್ನಾಹೀನ ಸ್ಥಿತಿಯಲ್ಲಿ ಮಲಗಿದ್ದಾರೆ. ಇನ್ನೂ ಅನೇಕರಿಗೆ ಉಸಿರಾಟದ ಸಮಸ್ಯೆ ಆಗಿದೆ. ಅಷ್ಟೇ ಅಲ್ಲದೇ ಅನೇಕರಿಗೆ ತಮ್ಮ ದೇಹದ ಮೇಲೆ ದುದ್ದುಗಳು ಕಾಣಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದಿ ಪರೀಶಿಲನೆ ನಡೆಸುತ್ತಿದ್ದಾರೆ. ಅಲ್ಲದೇ ಗಾಯಗೊಂಡ ಜನರನ್ನು ಸ್ಥಳಾಂತರ ಮಾಡೋಕೆ ಆರಂಭಿಸಿದ್ದಾರೆ.

 

ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ವೈಜಾಗ್ ಜಿಲ್ಲಾಧಿಕಾರಿಯೂ ಸ್ಥಳಕ್ಕೆ ಆಗಮಿಸಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎರಡು ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುವುದು. ಉಸಿರಾಟದ ತೊಂದರೆ ಎದುರಿಸುತ್ತಿರುವ ಜನರಿಗೆ ಆಕ್ಸಿಜನ್ ನೀಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ. ವಿಷಾನಿಲ ಸೋರಿಕೆಗೆ ಕಾರಣ ಏನು ಎಂದು ಇಲ್ಲಿಯತನಕ ತಿಳಿದು ಬಂದಿಲ್ಲ. ಆದರೆ ಇದರಿಂದ ವೈಜಾಗ್ ಜನ ಆತಂಕಕ್ಕೆ ಈಡಾಗಿದ್ದಾರೆ.

Find out more: