ಕೊರೋನಾ ವೈರಸ್ ಇಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಎಲ್ಲಾ ಉದ್ದಿಮೆಗಳನ್ನು ಬಂದ್ ಮಾಡಿ ಸಾಕಷ್ಟು ದೇಶ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಅನುಭವಿಸುವಂತಾಗಿದೆ ಇದರ ಜೊತೆಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ವೈರಸ್ ಗೆ ತಡೆಯಲು ಸಾಕಷ್ಟು ಹಣವನ್ನು ವ್ಯಯಿಸಬೇಕಾಗಿದೆ ಇದರಿಂದ ಕೇಂದ್ರ ಹಾಗೂ ರಾಜ್ಯ ಬೊಕ್ಕಸ ಸಾಕಷ್ಟು ಕಡಿಮೆಯಾಗಿದೆ. ಇದರಿಂದ ರಾಜ್ಯವನ್ನು ನಡೆಸಿರುವುದು ಕಷ್ಟ ಕರವಾಗಿರುವುದರಿಂದ ರಾಜ್ಯಗಳಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಿದ ಹಿನ್ನಲೆ ಸಾಕಷ್ಟು ಜನರು ಗುಂಪು ಗುಂಪಾಗಿ ಬಂದು ಮದ್ಯವನ್ನು ಖರೀದಿಸಿದ್ದಾರೆ ಇದರಿಂದ ಕೊರೊನಾ ಹರಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸುರ್ಪಿಂಕೋರ್ಟ್ ಸರ್ಕಾರಕ್ಕೆ ಸಲಹೆಯನ್ನು ನೀಡಿದೆ. ಸುಪ್ರಿಂ ಕೋರ್ಟ್ ನೀಡಿರುವ ಈ ಸಲಹೆ ಇಂದ ಮದ್ಯಪ್ರಿಯರ ಖಷಿ ದುಪ್ಪಟ್ಟಾಗಿದೆ. ಅಷ್ಟಕ್ಕೂ ಸುಪ್ರಿಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದ ಸಲಹೆ ಏನು ಗೊತ್ತಾ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರಗಳ ಬೊಕ್ಕಸಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಅದನ್ನು ಭರ್ತಿ ಮಾಡುವ ಸಂಬಂಧ ಮದ್ಯದಂಗಡಿಗಳನ್ನು ತೆರೆಯಲು ಹಲವು ರಾಜ್ಯ ಸರ್ಕಾರಗಳೇನೋ ಆದೇಶ ಹೊರಡಿಸಿಬಿಟ್ಟವು. ಅದರಂತೆ ಅಂಗಡಿಗಳೂ ತೆರೆದವು. ಬೊಕ್ಕಸವೂ ಭರ್ತಿಯಾಗುತ್ತ ಬಂದಿದೆ.
ಅದೇ ಇನ್ನೊಂದೆಡೆ, ಕರೊನಾ ವೈರಸ್ ಹರಡುವಿಕೆಯ ಭೀತಿಯ ಈ ದಿನಗಳಲ್ಲಿ, ಮದ್ಯದಂಗಡಿ ತೆರೆದಿರುವುದಕ್ಕೆ ತೀವ್ರ ಆಕ್ಷೇಪಗಳೂ ಬರುತ್ತಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಮದ್ಯದ ನಶೆಯಲ್ಲಿ ಏನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಯದೇ ವೈರಸ್ ಹರಡುವಲ್ಲಿ ಎಣ್ಣೆಪ್ರಿಯರು ಬಹುದೊಡ್ಡ ಪಾತ್ರ ವಹಿಸುತ್ತಿದ್ದಾರೆ.
ಕರೊನಾ ಸೋಂಕನ್ನು ತಾವಷ್ಟೇ ತಂದುಕೊಳ್ಳುವುದಲ್ಲದೇ, ಅವರಿಗೆ ಸಮಾಜಕ್ಕೂ ಅಪಾಯ ಇರುವ ಹಿನ್ನೆಲೆಯಲ್ಲಿ, ಮದ್ಯದಂಗಡಿಗಳನ್ನು ಮುಚ್ಚಲು ಸರ್ಕಾರಗಳಿಗೆ ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನು ಪರಿಶೀಲಿಸಿದ ಸುಪ್ರಿಂ ಕೋರ್ಟ್, ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೆ ಮನೆಗೆ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಪರಿಶೀಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದಕೊಳ್ಳುವಿಕೆ ಸೇರಿದಂತೆ ಲಾಕ್‌ಡೌನ್ ನಿಯಮಗಳ ಅನ್ವಯ ಮದ್ಯಪೂರೈಕೆ ಮಾಡಲು ಹೇಗೆ ಸಾಧ್ಯ ಎಂಬ ಬಗ್ಗೆ ಸರ್ಕಾರಗಳು ಚಿಂತನೆ ಮಾಡಬೇಕು ಎಂದಿದೆ.
'ನಾವು ಆದೇಶ ನೀಡುತ್ತಿಲ್ಲ. ಆದರೆ, ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸುವ ನಿಟ್ಟಿನಲ್ಲಿ ರಾಜ್ಯಗಳು ಪರೋಕ್ಷ ಮದ್ಯ ಮಾರಾಟ ಅಥವಾ ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಗಮನಹರಿಸಬಹುದು' ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಸದಸ್ಯ ಪೀಠ ಹೇಳಿದೆ.
ಮದ್ಯದಂಗಡಿ ತೆರೆದಿರುವುದರಿಂದ ಆಗುತ್ತಿರುವ ಹಾಗೂ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ್ದ ಅರ್ಜಿದಾರರು, ಅಂಗಡಿ ತೆರೆದಿರುವುದಕ್ಕೆ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ, 'ಈ ಪಿಐಎಲ್ ಗೆ ಸಂಬಂಧಿಸಿದಂತೆ ನಾವು ಯಾವುದೇ ಆದೇಶ ನೀಡುವುದಿಲ್ಲ.
ಆದರೆ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೇ ಮನೆಗೆ ಸರಬರಾಜು ಮಾಡುವ ಬಗ್ಗೆ ಆಲೋಚಿಸಬೇಕು' ಎಂದು ತಿಳಿಸಿದೆ.
2 ಹಂತಗಳ ಲಾಕ್‌ಡೌನ್ ಮುಗಿದ ಬಳಿಕ ಮೇ 4ರಿಂದ ಕೇಂದ್ರ ಸರ್ಕಾರ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿತ್ತು. ಆದಾಯದ ಪ್ರಮುಖ ಮೂಲವಾಗಿರುವುದರಿಂದ ಬಹುತೇಕ ಎಲ್ಲ ರಾಜ್ಯಗಳೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದವು. ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ಜನರು ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯ ದೇಶದಾದ್ಯಂತ ಕಂಡುಬಂದಿತ್ತು.