ಕೊರೋನಾ ವೈರಸ್ ಇಮದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ ಇದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ 2 ಹಂತದ ಲಾಕ್ ಮಾಡಿ ಮೂರನೇ ಹಂತದ ಲಾಕ್ ಡೌನ್ ನಲ್ಲಿ ಕೊರೋನಾ ಸೋಂಕು ಕಡಿಮೆ ಇರುವ ಭಾಗಗಳಲ್ಲಿ ಸ್ವಲ್ಪ ಸಡಿಲಿಕೆಯನ್ನು ಮಾಡಲಾಗಿತ್ತು. ಆದರೂ ಕೂಡ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಒಂದು ಆತಂಕದ ಸುದ್ದಿಯೊಂದನ್ನು ಹೊರ ಹಾಕಿದೆ. ಅಷ್ಟಕ್ಕೂ ಆ ಆತಂಕದ ಸುದ್ದಿ ಏನು ಗೊತ್ತಾ..?
ಜಗತ್ತಿನ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೊರೋನಾ ವೈರಸ್ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸಿದೆಯಾದರೂ, ಅಂತಹದೇ ಸನ್ನಿವೇಶ ಭಾರತದಲ್ಲಿಯೂ ಉಂಟಾಗುವ ನಿರೀಕ್ಷೆಯಿಲ್ಲವೆಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.
'ಇತರ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೊರೋನ ವೈರಸ್‌ನಿಂದ ಉಂಟಾಗಿರುವ ಭೀಕರ ಪರಿಸ್ಥಿತಿ ಭಾರತದಲ್ಲಿಯೂ ಸೃಷ್ಟಿಯಾಗುವ ಸಾಧ್ಯತೆಯನ್ನು ನಾವು ನಿರೀಕ್ಷಿಸುವುದಿಲ್ಲ. ಆದಾಗ್ಯೂ, ಅತ್ಯಂತ ಭಯಾನಕ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ನಾವು ಇಡೀ ದೇಶವನ್ನು ಸಜ್ಜುಗೊಳಿಸುತ್ತಿದ್ದೇವೆ'' ಎಂದು ವರ್ಧನ್ ಹೇಳಿದ್ದಾರೆ.
ಕೋವಿಡ್-19 ಪಿಡುಗನ್ನು ನಿಭಾಯಿಸುವ ನಿಟ್ಟಿನಲ್ಲಿ ಹೊಸದಿಲ್ಲಿಯಲ್ಲಿ ಅವರು ವಿವಿಧ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಈಶಾನ್ಯ ರಾಜ್ಯಗಳ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಈ ವಿಷಯ ತಿಳಿಸಿದರು.
ಕೋವಿಡ್-19 ವಿರುದ್ಧ ಭಾರತ ಬಲವಾಗಿ ಹೋರಾಡುತ್ತಿದ್ದು, ದೇಶದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆಯೆಂದು ಹರ್ಷವರ್ಧನ್ ತಿಳಿಸಿದರು.''ಭಾರತದಲ್ಲಿ ಕೋವಿಡ್-19 ಮರಣ ಪ್ರಮಾಣವು ಶೇ.3.3ರಲ್ಲಿಯೇ ಮುಂದು ವರಿದಿದ್ದು, ಚೇತರಿಕೆಯ ಪ್ರಮಾಣವು 29.9 ಶೇಕಡಕ್ಕೇರಿದೆ. ಇದು ಅತ್ಯುತ್ತಮವಾದ ಸೂಚಕಗಳಾಗಿವೆ. 7 ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯು 9.9 ದಿನಗಳಲ್ಲಿ ದ್ವಿಗುಣಗೊಳ್ಳುತ್ತಿದ್ದರೆ, ಕಳೆದ ಮೂರು ದಿನಗಳಿಂದ ಅದು 11 ದಿನಗಳಿಗೆ ವಿಸ್ತರಿಸಿದೆ'' ಎಂದು ಆರೋಗ್ಯ ಸಚಿವರು ತಿಳಿಸಿದರು.
ಕೊರೋನಾ ರೋಗಿಗಳ ಚಿಕಿತ್ಸೆಗೆಂದೇ ವಿಶೇಷವಾಗಿ 843 ಆಸ್ಪತ್ರೆಗಳನ್ನು ಮೀಸಲಿರಿಸಲಾಗಿದ್ದು, ಒಟ್ಟು 1,65,991 ಆಸ್ಪತ್ರೆಗಳಿವೆ ಎಂದವರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾಹಿತಿ ನೀಡಿದರು.
ದೇಶಾದ್ಯಂತ 1991 ಕೋವಿಡ್-19 ಆರೋಗ್ಯ ಕೇಂದ್ರಗಳಿದ್ದು, ಒಟ್ಟು 1,35,643 ಹಾಸಿಗೆಗಳಿವೆ. ಐಸೊಲೇಶನ್ ಹಾಗೂ ತೀವ್ರ ನಿಗಾ ಘಟಕದ ಹಾಸಿಗೆಗಳನ್ನು ಇವು ಒಳಗೊಂಡಿವೆ ಎಂದವರು ತಿಳಿಸಿದರು.
ಕೊರೋನಾ ವೈರಸ್ ನಿರ್ವಹಣೆಯಲ್ಲಿ ಆರೋಗ್ಯ ಸಚಿವಾಲವು ನಿರಂತರವಾಗಿ ರಾಜ್ಯಗಳ ಜೊತೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ ಹಾಗೂ ದೈನಂದಿನ ಆಧಾರದಲ್ಲಿ ದತ್ತಾಂಶಗಳ ಮೇಲೆ ನಿಗಾವಿರಿಸಿದೆ ಎಂದರು.