ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ. ಕೊರೋನಾ  ವೈರಸ್ ಇಂದ ದೇಶವನ್ನು ರಕ್ಷಣೆಯನ್ನು ಮಡುವ ಉದ್ದೇಶದಿಂದ ಇಡೀ ದೇಶಕ್ಕೆ ಮೂರು ಬಾರಿ ಲಾಕ್ ಡೌನ್ ಏರಿದ್ದರೂ ಕೂಡ ಯಾವುದೇ ಪ್ರಯೋಜನವಾಗದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತೇ ಇದೆ. ಇದುವರೆಗೂ ದೇಶದಲ್ಲಿ ಕೊರೋನಾ ಸೋಂಕಿನಿಂದ ಸುಮಾರು ಎರಡು ಸಾವಿರ ಜನರು ಪ್ರಾಣವನ್ನು ಕಳಿದುಕೊಂಡಿದ್ದಾರೆ. ಈ ವೈರಸ್ ಅನ್ನು ಹೀಗೇ ಮುಂದು ವರಿಯಲು ಬಿಟ್ಟರೆ ಈ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ.  ಈ ಕುರಿತಾಗಿ ಸರ್ಕಾರಗಳು ಸೂಕ್ತ ಕ್ರಮವನ್ನು ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನಾಳೆ ಈ ಕುರಿತು ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳ ಜೊತೆ ಮಾತುಕತೆಯನ್ನು ನಡೆಸಲಿದ್ದಾರೆ.

 

ಮೂರನೇ ಹಂತದ ಲಾಕ್​ಡೌನ್​ ಅವಧಿ ಮುಗಿಯಲು ಇನ್ನೂ ಒಂದು ವಾರ ಬಾಕಿ ಇರುವಾಗಲೇ ಪ್ರಧಾನಿ ಮೋದಿಯವರು ಮತ್ತೊಮ್ಮೆ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಮೇ 11ರ ಮಧ್ಯಾಹ್ನ 3ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ.

 

ದೇಶದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಮಾರ್ಚ್​ 25ರಿಂದ ಲಾಕ್​ಡೌನ್ ಜಾರಿ ಮಾಡಲಾಗಿದೆ. ಮೊದಲು ಮಾರ್ಚ್​ 25ರಿಂದ ಏಪ್ರಿಲ್​ 14ರವರೆಗೆ ಲಾಕ್​ಡೌನ್​ ಅವಧಿ ಇತ್ತು. ಅದು ನಂತರ ಮೇ 4ರವರೆಗೆ ವಿಸ್ತರಣೆಯಾಯಿತು. ಆದರೂ ಕರೊನಾ ನಿಯಂತ್ರಣವಾಗಿಲ್ಲದ ಕಾರಣ ಮೇ 17ರವರೆಗೆ ಲಾಕ್​ಡೌನ್ ಮುಂದುವರಿದಿದೆ.

 

ಹೀಗೆ ಪ್ರತಿಬಾರಿಯೂ ಲಾಕ್​ಡೌನ್​ ಅವಧಿ ಮುಕ್ತಾಯವಾಗುವಾಗ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸುತ್ತಿದ್ದಾರೆ. ಆಯಾ ರಾಜ್ಯಗಳಲ್ಲಿನ ಕೊವಿಡ್​-19 ಪರಿಸ್ಥಿತಿ, ಆರ್ಥಿಕ ಸ್ಥಿತಿಗತಿಗಳ ವರದಿ ಕೇಳುತ್ತಿದ್ದಾರೆ. ಲಾಕ್​ಡೌನ್ ಶುರುವಾದಾಗಿನಿಂದಲೂ ಇದು ಐದನೇ ಬಾರಿಗೆ ಮೋದಿಯವರು ಎಲ್ಲ ರಾಜ್ಯಗಳ ಸಿಎಂಗಳ ಜತೆ ಸಭೆ ನಡೆಸುತ್ತಿರುವುದು.

 

ದೇಶವನ್ನು ಕೊವಿಡ್​ ಹಸಿರು, ಕಿತ್ತಳೆ, ಕೆಂಪು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಲಾಕ್​ಡೌನ್​ನ ಮೂರನೇ ಅವಧಿಯಲ್ಲಿ ಗ್ರೀನ್​ ಜೋನ್​​ನಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಒಂದೇ ಸಲ ದೇಶದಲ್ಲಿ ಲಾಕ್​ಡೌನ್​ ತೆಗೆಯಲು ಸಾಧ್ಯವಿಲ್ಲ. ಹಂತಹಂತವಾಗಿ ಈ ಪ್ರಕ್ರಿಯೆ ನಡೆಯುತ್ತದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

 

ಕಳೆದ ಒಂದು ವಾರದಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

 

ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೇರಿದಂತೆ ಗೃಹ ಮತ್ತು ಆರೋಗ್ಯ ಕಾರ್ಯದರ್ಶಿ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

 

Find out more: