ಕೊರೋನಾ ವೈರಸ್ ಇಮದಾಗಿ ಇಡೀ ಪ್ರಪಂಚವೇ ನರಳುತ್ತಿರುವಂತಹ ಸಂದರ್ಭದಲ್ಲಿ ಸಾಕಷ್ಟು ದೇಶಗಳು ಈ ಕೊರೋನಾ ಸೋಂಕನ್ನು ತಡೆಯುವ ಉದ್ದೇಶದಿಂದ ಪ್ರಪಂಚದ ಸಾಕಷ್ಟು ದೇಶಗಳು ಬಹಳ ರೀತಿಯಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದರೂ ಕೂಡ ಕೊರೋನಾ ಸೋಂಕು ಕಡಿಮೆಯಾಗುವ ಯಾವ ಲಕ್ಷಣಗಳೂ ಕೂಡ ಕಾಣುತ್ತಿಲ್ಲ ಈ ನಡುವೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲರನ್ನೂ ಆಶ್ಚರ್ಯಗೊಳಿಸುವಂತಹ ಎಚ್ಚರಿಕೆಯನ್ನು ನೀಡಲಾಗಿದೆ.

 

ಇಡೀ ಜಗತ್ತಿಗೆ ಮಾರಕವಾಗಿರುವ ಕೊರೊನಾ ವೈರಸ್‌ಗೆ ಔಷಧ ಕಂಡುಹಿಡಿಯಲು ಬಹುತೇಕ ಎಲ್ಲ ರಾಷ್ಟ್ರಗಳು ಭಾರಿ ಪ್ರಯತ್ನ ಮಾಡುತ್ತಿದೆ. ಅಮೆರಿಕ, ಚೀನಾ, ಯುಕೆ, ಇಸ್ರೇಲ್, ಸ್ಪೇನ್, ಇಟಲಿ ಹೀಗೆ ಎಲ್ಲ ದೇಶಗಳ ವಿಜ್ಞಾನಿಗಳು ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ.

ಆದ್ರೀಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತಿಯಾದ ಆತ್ಮವಿಶ್ವಾಸ ಹೇಳಿಕೆ ನೀಡಿದ ವಿರೋಧಕ್ಕೆ ಕಾರಣವಾಗಿದ್ದಾರೆ. ಕೊವಿಡ್‌ಗೆ ಔಷಧಿ ಪತ್ತೆ ಹೆಚ್ಚುತ್ತಿದ್ದೇವೆ ಹೇಳಿದ್ದ ಟ್ರಂಪ್ ಈಗ ವರಸೆ ಬದಲಾಯಿಸಿದ್ದಾರೆ. ''ಮಹಾಮಾರಿ ಕೊರೊನಾಗೆ ಔಷಧವೇ ಬೇಡ. ಔಷಧವೇ ಇಲ್ಲದ ಸೋಂಕು ಮಾಯವಾಗುತ್ತೆ' ಎಂದು ಚರ್ಚೆಗೆ ಕಾರಣವಾಗಿದ್ದಾರೆ.

 

''ಕೊರೊನಾ ವೈರಸ್‌ ಹರಡುವಿಕೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಇಳಿಕೆಯಾಗುತ್ತೆ. ಈ ಹಿಂದೆ ಹಲವು ರೀತಿಯ ವೈರಸ್‌ಗಳು ಬಂದಿದೆ. ಆ ಸಮಯದಲ್ಲಿ ಔಷಧ ಕಂಡುಹಿಡಿಯುದಕ್ಕೆ ಮುಂಚೆಯೇ ವೈರಸ್‌ ಇಲ್ಲವಾಗಿದೆ. ಬಹುಶಃ, ಕೊರೊನಾ ವಿಚಾರದಲ್ಲೂ ಅದು ಸತ್ಯವಾಗಬಹುದು' ಎಂದು ಟ್ರಂಪ್ ಹೇಳಿದ್ದಾರೆ.

 

ಅಮೆರಿಕದಲ್ಲಿ ಅತಿ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಅತಿ ಹೆಚ್ಚು ಸಾವು ಸಂಭವಿಸಿದೆ. ಕೊವಿಡ್ ನಿಯಂತ್ರಿಸುವಲ್ಲಿ ಟ್ರಂಪ್ ಎಡವಿದರು ಎಂದು ವಿಶ್ವ ಮಟ್ಟದಲ್ಲಿ ಟೀಕೆ ಎದುರಾಗಿದೆ. ಇದೀಗ, ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ''ಟ್ರಂಪ್ ಕೊರೊನಾವನ್ನು ನಿಯಂತ್ರಿಸುವಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಅವರ ಬೇಜವಾಬ್ದಾರಿಯಿಂದ ದೇಶದಲ್ಲಿ ಇಷ್ಟು ನಷ್ಟ ಅನುಭವಿಸಿದೆ'' ಎಂದು ಹೇಳಿದ್ದಾರೆ.


ಅಮೆರಿಕದ ಸ್ಥಿತಿ ಏನಾಗಿದೆ?

ಜಗತ್ತಿನಾದ್ಯಂತ ಸುಮಾರು 41 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅಮೆರಿಕದಲ್ಲಿ ಮಾತ್ರ 11 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಅಂಟಿಕೊಂಡಿದೆ. 80 ಸಾವಿರ ಜನರು ಕೊವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕದಲ್ಲಿ ದೊಡ್ಡ ಮಟ್ಟದ ಅಪಾಯ ಆಗಿರುವುದು ಭಾರಿ ಹಿನ್ನಡೆಯಾಗಿದೆ.

 

ಕೊರೊನಾಗಿಂತ ರಾಜಕೀಯ ಹೆಚ್ಚಾಯಿತೇ?

ನವೆಂಬರ್‌ ತಿಂಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಸಲ ಡೊನಾಲ್ಡ್ ಟ್ರಂಪ್ ಅವರನ್ನು ಮಣಿಸಲೇ ಬೇಕು ಎಂದು ಡೆಮಾಕ್ರಿಟಿಕ್ ಪಕ್ಷ ಪಣ ತೊಟ್ಟಂತಿದೆ. ಟ್ರಂಪ್ ವಿರುದ್ಧ ಜೋ ಬಿಡೆನ್ ಅವರನ್ನು ಬೆಂಬಲಿಸಿರುವ ಒಬಾಮ, ಪ್ರಚಾರದ ಮುಂದಾಳತ್ವ ವಹಿಸಲು ಮುಂದಾಗಿದ್ದಾರೆ. ಕೊರೊನಾದಿಂದ ಅಮೆರಿಕ ಜನರ ಸಾಯುತ್ತಿದ್ದರು ಅಲ್ಲಿನ ಪಕ್ಷಗಳು ಮಾತ್ರ ರಾಜಕೀಯವಾಗಿ ಆರೋಪ-ಪ್ರತ್ಯಾರೋಪ ಮಾಡುತ್ತಿರುವುದು ಕಂಡುಬರುತ್ತಿದೆ.

 

Find out more: