ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗಿ ಇಡೀ ವಿಶ್ವವನ್ನೇ ಕರಿನೆರಳಿನಂತೆ ಆಕ್ರಮಿಸಿ ವಿಶ್ವದ ಅಸಂಖ್ಯಾತ ಮಂದಿಯನ್ನು ಬಲಿತೆಗೆದು ಕೊಂಡು ಮತ್ತಷ್ಟು ಜನರನ್ನು ಕಾಡುತ್ತಿರುವ ಕೊರೋನಾ ಸೋಂಕು ಮುಂದಿನದಿನಗಳಲ್ಲಿ ಇಡೀ ವಿಶ್ವವನ್ನು ಮತ್ತಷ್ಟು ಕಾಡಲಿದೆ. ಇದರಿಂದಾಗಿ ಇಡೀ ವಿಶ್ವದ ಆತಂಕದಿಂದ ಜೀವನವನ್ನು ನಡೆಸುವಂತಾಗಿದೆ. ಈ ಕೊರೋನಾ ವೈರಸ್ ಬಡ ಶ್ರೀಮಂತ ರಾಷ್ಟ್ರಗಳು ಎಂದು ನೋಡದೆ ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಸಮಾನವಾಗಿ ಕಾಡುತ್ತಿದೆ. ಇದಕ್ಕೆ ಹೊರತಾಗಿ ಅಮೇರಿಕ ಇಲ್ಲ. ಇಲ್ಲೂ ಕೂಡ ಕೊರೋನಾ ವೈರಸ್ ರಣ ಕೇಕೆಯನ್ನು ಹಾಕಿ ಸಾಕಷ್ಟು ಜನರನ್ನು ಬಲಿತೆಗೆದು ಕೊಳ್ಳುತ್ತಿದೆ. ಅಷ್ಟಕ್ಕೂ ಅಮೇರಿಕಾದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರು ಎಷ್ಟು ಮಂದಿ ಗೊತ್ತಾ..? 

 

ವಾಷಿಂಗ್ಟನ್ಅಮೆರಿಕದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 20 ಸಾವಿರ ಜನರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ.

 

ಅಮೆರಿಕದಲ್ಲಿ 13.6 ಲಕ್ಷ ಜನರು ಕೋವಿಡ್‌-19 ಸೋಂಕಿನಿಂದ ಬಳಲುತ್ತಿದ್ದಾರೆ. ಇಲ್ಲಿಯವರೆಗೂ 80,574 ಜನರು ಮೃತಪಟ್ಟಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

 

ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕು 187 ರಾಷ್ಟ್ರಗಳಿಗೆ ಹರಡಿದೆ. ಇಲ್ಲಿಯವರೆಗೂ 41 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. 2.10 ಲಕ್ಷ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲೇ ಹೆಚ್ಚು ಜನರು ಬಲಿಯಾಗಿದ್ದಾರೆ.

 

ಅಮೆರಿಕ ಹೊರತುಪಡಿಸಿದರೆ, ಸ್ಪೇನ್‌, ಇಟಲಿ, ಇಂಗ್ಲೆಂಡ್‌, ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ. ಫ್ರಾನ್ಸ್‌, ಬ್ರೆಜಿಲ್‌, ಜರ್ಮನಿ, ಟರ್ಕಿ, ಇರಾನ್‌ನಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಜಗತ್ತಿಗೆ ಕೊರೊನಾ ವೈರಸ್‌ ಹರಡಿದ ಚೀನಾದಲ್ಲಿ 82 ಸಾವಿರ ಸೋಂಕಿತರ ಪೈಕಿ 4 ಸಾವಿರ ಜನರ ಮೃತಪಟ್ಟಿದ್ದಾರೆ. 78 ಸಾವಿರ ಜನರು ಗುಣಮುಖರಾಗಿದ್ದಾರೆ ಎಮದು ಚೀನಾ ಹೇಳಿದೆ.

 

ಭಾರತದಲ್ಲಿ ಸೋಂಕಿತರ ಸಂಖ್ಯೆ 67 ಸಾವಿರ ದಾಟಿದ್ದು ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಜಪಾನ್‌ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿಯವರೆಗೆ 3,000 ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಶ್ವೇತಭವನದ ಮೂವರು ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿದಂತೆ ಶ್ವೇತಭವನದ ಎಲ್ಲರೂ ಪ್ರತಿ ದಿನ ಕೊರೊನಾ ಪತ್ತೆ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಸೋಂಕಿತ ಸಿಬ್ಬಂದಿಗೆ ಆಪ್ತರಾಗಿದ್ದ ಅಧಿಕಾರಿಗಳನ್ನು ಮತ್ತು ಅವರ ಕುಟುಂಬದವರನ್ನು ಕ್ವಾರಂಟೈನ್‌ ಮಾಡಲಾಗಿದೆ.

 

Find out more: