ಕೊರೋನಾ ವೈರಸ್ ಸೋಂಕು ಭಾರತದಲ್ಲಿ ಹೆಚ್ಚಾಗುತ್ತಿರುವ ಕಾರಣ ಲಾಕ್ ಡೌನ್ ಮಾಡುವ ವಿಚಾರವಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆದ ವಿಡಿಯೋ ಕಾನ್ಪರೆನ್ಸ್ ನಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟಕ್ಕೂ ಮಮತಾ ಬ್ಯಾನರ್ಜಿ ಮೋದಿಯವ ಮೇಲಿ ಕಿಡಿಕಾರಲು ಕಾರಣವೇನು..? ಇಲ್ಲಿದೆ ನೋಡಿ.

 

ಕೊರೋನ ವೈರಸ್ ನಿಯಂತ್ರಿಸುವ ನೆಪದಲ್ಲಿ ಕೇಂದ್ರ ಸರಕಾರವು ರಾಜಕೀಯ ಮಾಡುತ್ತಿದೆ ಮತ್ತು ರಾಜ್ಯಗಳ ನಡುವೆ ತಾರತಮ್ಯವೆಸಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಪ್ರಧಾನಿ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಿಡಿಕಾರಿದ್ದಾರೆ.

 

''ರಾಜಕೀಯದ ಆಟವಾಡಲು ಇದು ಸಮಯವಲ್ಲ. ನಮ್ಮ (ರಾಜ್ಯಗಳ) ಅಭಿಪ್ರಾಯಗಳನ್ನು ಯಾವತ್ತೂ ಕೇಳಲಾಗುವುದಿಲ್ಲ. ದೇಶದ ಒಕ್ಕೂಟ ವ್ಯವಸ್ಥೆಯನ್ನು ನೆಲಸಮಗೊಳಿಸದಿರಿ'' ಎಂದು ಸಭೆಯಲ್ಲಿ ಮಮತಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

 

ಆನಂತರ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಮಮತಾ, ಕೇಂದ್ರ ಸರಕಾರವು ಯಾಕೆ ಯಾವತ್ತೂ ಪಶ್ಚಿಮಬಂಗಾಳವನ್ನು ಟೀಕಿಸುತ್ತಲೇ ಇದೆ. ಇಂದಿನ ಸಭೆಯಲ್ಲಿ ಕೊರೋನ ವೈರಸ್‌ನಿರ್ವಹಣೆಯಲ್ಲಿ ಹಣಕಾಸುವ ನೆರವು ನೀಡುವ ಬಗ್ಗೆ ಕೇಂದ್ರ ಸರಕಾರವು ಯಾವುದೇ ಮಾತನ್ನು ಆಡಿಲ್ಲವೆಂದು ಮಮತಾ ಹೇಳಿದರು.

 

ರಾಜ್ಯದಲ್ಲಿ ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಹಾಗೂ ಸೋಂಕಿತರ ಸಂಖ್ಯೆಯನ್ನು ಮರೆಮಾಚಲಾಗುತ್ತಿದೆಯೆಂಬ ವರದಿಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರಕಾರವು ಪಶ್ಚಿಮಬಂಗಾಳಕ್ಕೆ ಅಂತರ್ ಸಚಿವಾಂಗ ಕೇಂದ್ರೀಯ ತಂಡವನ್ನು ಕಳುಹಿಸಿದ ಬಳಿಕ ಮೋದಿ ಸರಕಾರ ಹಾಗೂ ಮಮತಾ ಸರಕಾರದ ನಡುವೆ ಕೊರೋನಾ ಬಿಕ್ಕಟ್ಟು ನಿರ್ವಹಣೆಯ ವಿಚಾರವಾಗಿ ಜಟಾಪಟಿಯೇರ್ಪಟ್ಟಿತ್ತು.

 

 

ಮಂಗಳವಾರದಿಂದ ರೈಲು ಸೇವೆಗಳ ಪುನಾರಂಭಿಸುವ ಕೇಂದ್ರದ ನಿರ್ಧಾರಕ್ಕೆ ತೆಲಂಗಾಣ, ತಮಿಳ್ನಾಡು, ಚತ್ತೀಸ್‌ಗಢ ಮುಖ್ಯಮಂತ್ರಿಗಳ ವಿರೋಧ.

 

ರೈಲು ಸಂಚಾರ ಆರಂಭಗೊಂಡಲ್ಲಿ ಕೋವಿಡ್-19 ಪ್ರಕರಣಗಳು ಉಲ್ಬಣಗೊಳ್ಳಲಿದ್ದು, ತಮ್ಮ ರಾಜ್ಯಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಲಿವೆ ಎಂದು ಅವು ಆತಂಕ ವ್ಯಕ್ತಪಡಿಸಿವೆ. ಕನಿಷ್ಠ ಮೇ 31ರವರೆಗಾದರೂ ರೈಲು ಸಂಚಾರ ಸ್ಥಗಿತಗೊಳಿಸಬೇಕೆಂದು ಅವು ಆಗ್ರಹಿಸಿವೆ.

 

► ಮೇ 31ರವರೆಗೆ ಲಾಕ್‌ಡೌನ್ ವಿಸ್ತರಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಆಗ್ರಹ.

► ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ರಸ್ತೆ,ರೈಲು ಹಾಗೂ ವಾಯುಯಾನಕ್ಕೆ ಅವಕಾಶ ನೀಡಲು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಒಲವು.

► ಲಾಕ್‌ಡೌನ್ ಬಳಿಕ ದುಡಿಮೆಯಿಲ್ಲದೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

► ರಾಜಧಾನಿ ದಿಲ್ಲಿಯಲ್ಲಿ ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದೆಡೆ ಅರ್ಥಿಕ ಚಟುವಟಿಕೆಗಳ ಪುನರಾರಂಭಿಸಲು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗ್ರಹ

 

Find out more: