ಕೊರೋನಾ ವೈರಸ್ ಅನ್ನು ತಡೆಗಟ್ಟುವ ಉದ್ದೇಶದಿಂದ ಭಾರತದಲ್ಲಿ 3 ಲಾಕ್ ಡೌನ್ ಅನ್ನು ಮಾಡಲಾಗಿತ್ತು ಆದರೆ ಈ ಲಾಕ್ ಡೌನ್ ನ ನಡುವೆಯೂ ಕೂಡ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಆದರೆ ಈ ಸೋಂಕನ್ನು ತಡೆಗಟ್ಟುವ ಸಲುವಾಗಿ ಮತ್ತೊಮ್ಮೆ ಕಟ್ಟುನಿಟ್ಟಿನ ಲಾಕ್ ಡೌನ್ ಅವಶ್ಯಕತೆ ದೇಶಕ್ಕೆ ಇದೆ. ಈ ಲಾಕ್ ಡೌನ್ ಗೆ ಸಂಬಂದ ಪಟ್ಟಂತೆ ಮೋದಿ ಇಂದು ದೇಶದ ಜನರ ಕುರಿತಾಗಿ ಭಾಷಣವನ್ನು ಮಾಡಿದ್ದಾರೆ

 

ನಿನ್ನೆಯಷ್ಟೇ ರಾಜ್ಯದ ಎಲ್ಲ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಕೊವಿಡ್​-19 ಸ್ಥಿತಿಗತಿಗಳನ್ನು ಚರ್ಚೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.


ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ 10,500ರ ಗಡಿದಾಟಿದ ಬೆನ್ನಲ್ಲೇ ಮಾತನಾಡಿದ ಅವರು, ಒಂದು ವೈರಸ್​ನಿಂದಾಗಿ ಇಡೀ ಜಗತ್ತು ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಇದರಿಂದ ಬಚಾವಾಗಲು ಗಟ್ಟಿ ಸಂಕಲ್ಪ ಮಾಡಬೇಕು ಎಂದರು.

 

ನಾವು ಇಂಥ ಸಂಕಷ್ಟವನ್ನು ಮೊದಲು ಯಾವತ್ತೂ ಕೇಳಿರಲೂ ಇಲ್ಲ, ನೋಡಿರಲೂ ಇಲ್ಲ. ಒಂದು ಸಣ್ಣ ಕಲ್ಪನೆಯೂ ಇರಲಿಲ್ಲ. ಯಾರೂ ಊಹಿಸದಂತಹ ಕಷ್ಟ ಮಾನವ ಕುಲಕ್ಕೆ ಎದುರಾಗಿದೆ. ಆದರೆ ಈ ವೈರಸ್ ಎದುರು ಮಾನವರು ಎಂದೂ ಸೋಲನ್ನು ಒಪ್ಪಿಕೊಳ್ಳಬಾರದು. ನಾವು ನಮ್ಮನ್ನು ರಕ್ಷಿಸಿಕೊಳ್ಳುವದರೊಂದಿಗೆ ಮುನ್ನುಗ್ಗಬೇಕು ಎಂದು ಹೇಳಿದರು.

 

ಈ ಕರೊನಾ ಬಿಕ್ಕಟ್ಟು ಶುರುವಾದಾಗ ಒಂದೇಒಂದು ಪಿಪಿಇ ಕಿಟ್​ ಭಾರತದಲ್ಲಿ ತಯಾರಾಗುತ್ತಿರಲಿಲ್ಲ. ಕೆಲವೇ ಕೆಲವು ಎನ್​ 95 ಮಾಸ್ಕ್​ಗಳು ಲಭ್ಯ ಇದ್ದವು. ಆದರೆ ಇಂದು ಪ್ರತಿದಿನ ಭಾರತದಲ್ಲಿ 2 ಲಕ್ಷ ಪಿಪಿಇ ಕಿಟ್​​ಗಳು ಸಿದ್ಧಗೊಳ್ಳುತ್ತವೆ. 2 ಲಕ್ಷ ಎನ್​ 95 ಮಾಸ್ಕ್​ಗಳು ರೆಡಿ ಆಗುತ್ತಿವೆ. ಭಾರತ ಈ ಕರೊನಾ ಬಿಕ್ಕಟ್ಟಿನ ಕಾಲವನ್ನೂ ಒಂದು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದೆ. ಆರ್ಥಿಕತೆಯಲ್ಲಿ ಹಿಂದೆ ಹೋಗಿರುವ ನಮ್ಮ ದೇಶವನ್ನು ಮತ್ತೆ 21ನೇ ಶತಮಾನಕ್ಕೆ ವಾಪಸ್​ ತರಲು ಸ್ವಾವಲಂಬನೆಯೇ ಪ್ರಮುಖ ಮಾರ್ಗ. ಕರೊನಾ ಹೋರಾಟದಲ್ಲಿ ಭಾರತದ ಕ್ರಿಯೆ, ಕೆಲಸಗಳು ಇಡೀ ಜಗತ್ತಿನ ಎದುರು ಪ್ರತಿಫಲಿಸುತ್ತಿವೆ. ನಮ್ಮಲ್ಲಿನ ಕೌಶಲ ಬೆಳಕಿಗೆ ಬರುತ್ತಿದೆ ಎಂದು ಮೋದಿಯವರು ಹೇಳಿದರು.

ಕರೊನಾ ಸಂಕಷ್ಟ ಕಾಲ ನಿರ್ವಹಣೆಗಾಗಿ, ಸ್ವಾವಲಂಬಿ ಭಾರತ ಅಭಿಯಾನ (ಆತ್ಮ ನಿರ್ಭರ ಭಾರತ ಅಭಿಯಾನ) ಕ್ಕಾಗಿ ಇಂದು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡುತ್ತಿದ್ದು, ಇದು ಭಾರತ ಜಿಡಿಪಿ ದರದ ಪ್ರತಿಶತ 10ರಷ್ಟಾಗಿದೆ. ದೇಶದ ಬಡವರು, ಮಧ್ಯಮವರ್ಗದವರು, ಉದ್ಯಮ ಕ್ಷೇತ್ರ, ಕೃಷಿಕರು, ಶ್ರಮಿಕರು, ರೈತರು ಸೇರಿ ಎಲ್ಲರಿಗಾಗಿ ಈ ಪ್ಯಾಕೇಜ್​ ನೀಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

 

Find out more: