ಕೊವಿಡ್-19 ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ 20ಲಕ್ಷಕೋಟಿ ಪ್ಯಾಕೇಜ್ ನನ್ನು ನೀಡಿದೆ. ಹಾಗಿದ್ದರೆ ಯಾವ ಯಾವ ರಂಗಕ್ಕೆ ಈ ಪ್ಯಾಕೇಜ್ ಜಲ್ಲಿ ಪಾಲು ದೊರೆಯುತ್ತದೆ ಗೊತ್ತಾ ಇಲ್ಲಿದೆ ನೋಡಿ..?

 

ಭಾರತವನ್ನು ಕಾಡುತ್ತಿರುವ ವಿನಾಶಕಾರಿ ಕೊರೊನಾ ವೈರಸ್‍ನಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಪುನಃಶ್ಚೇತನ ನೀಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‍ನಲ್ಲಿ ಕೃಷಿಕರು, ಕಾರ್ಮಿಕರು, ಶ್ರಮಿಕ ವರ್ಗದವರು, ಬಡವರು ಮತ್ತು ಸಣ್ಣ ಉದ್ಯಮಗಳಿಗೆ ಪ್ರಥಮಾದ್ಯತೆ ದೊರೆಯುವ ಅಪಾರ ನಿರೀಕ್ಷೆ ಇದೆ.

 

ಭಾರತದ ಬೆನ್ನುಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಸಿಂಹ ಪಾಲು ಲಭಿಸುವ ನಿರೀಕ್ಷೆ ಇದೆ ಎಂದು ವಿಶ್ಲೇಷಿಸಲಾಗಿದೆ. ನಂತರ ದೇಶದ ಬಡವರು, ಕಾರ್ಮಿಕರು, ಶ್ರಮಿಕ ವರ್ಗದವರು, ಗುಡಿ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳು, ಸಂಕಷ್ಟದಲ್ಲಿರುವ ಮಧ್ಯಮ ವರ್ಗದವರಿಗೂ ಇದರಲ್ಲಿ ಅಗ್ರ ತಾಂಬೂಲ ಲಭಿಸಲಿದೆ ಎಂದು ಹಣಕಾಸು ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

 

ಭಾರತದಲ್ಲಿರುವ ವಿವಿಧ ಪ್ರಮುಖ ವಲಯಗಳಿಗೆ 20 ಲಕ್ಷ ಕೋಟಿ ರೂ.ಗಳ ರಾಷ್ಟ್ರ ಸ್ವಾವಲಂಬನೆ ದೃಷ್ಟಿಕೋನದ ವಿಶೇಷ ಆರ್ಥಿಕ ಪ್ಯಾಕೇಜ್‍ನಲ್ಲಿ ಏಷ್ಟೆಷ್ಟು ಮೊತ್ತ ಲಭಿಸಲಿದೆ ಎಂಬ ಪ್ರಶ್ನೆಗೆ ಇಂದು 4 ಗಂಟೆಗೆ ಸ್ಪಷ್ಟ ಉತ್ತರ ಲಭಿಸಲಿದೆ.

 

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನ ಸಂಪೂರ್ಣ ಸ್ವರೂಪವನ್ನು ಅನಾವರಣಗೊಳಿಸಲಿದ್ದಾರೆ. ಭಾರತದ 130 ಕೋಟಿ ಜನರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ತಮಗೆ ಲಭಿಸಬಹುದಾದ ಜೀವನಾವಶ್ಯಕ ಹಣಕ್ಕಾಗಿ ಎದುರು ನೋಡುತ್ತಿದ್ದಾರೆ.

 

ಯಾವ ವಲಯಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ಪ್ಯಾಕೇಜ್ ನೀಡಬೇಕೆಂಬ ಬಗ್ಗೆ ನಿನ್ನೆ ಇಡೀ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ನಿರ್ಮಲಾ ನೇತೃತ್ವದಲ್ಲಿ ಹಣಕಾಸು ಸಚಿವಾಲಯದ ಉನ್ನತಾಕಾರಿಗಳು, ಆರ್ಥಿಕ ತಜ್ಞರು ಮತ್ತು ವಿವಿಧ ವಲಯಗಳ ಪರಿಣಿತರೊಂದಿಗೆ ಚರ್ಚಿಸಿ ಅಂತಿಮ ಸ್ವರೂಪದ ಪಟ್ಟಿಯನ್ನು ತಯಾರಿಸಲಾಗಿದೆ.

 

ಕೃಷಿ ಮತ್ತು ಕೈಗಾರಿಕಾ ಸಾಲಗಳನ್ನು ಮನ್ನಾ ಮಾಡುವಂತೆ ಕೇಂದ್ರದ ಮೇಲೆ ವ್ಯಾಪಕ ಒತ್ತಡ ಇರುವುದರಿಂದ ಈ ಬೇಡಿಕೆಯನ್ನು ಆತ್ಮ ನಿರ್ಭರ್ ಭಾರತ್ ಅಭಿಮಾನ್ ಪ್ಯಾಕೇಜ್‍ನಲ್ಲಿ ಪರಿಗಣಿಸಲಾಗುತ್ತದೆಯೇ ಎಂಬ ಕುತೂಹಲವೂ ಸೃಷ್ಟಿಯಾಗಿದೆ.

 

ಅಂತೆಯೇ ಎಲ್ಲ ವಲಯಗಳಿಗೂ ಆದ್ಯತೆ ನೀಡುವ ಜೊತೆಗೆ ಅಸಂಘಟಿತ ವಲಯಗಳಿಗೂ ಸೂಕ್ತ ಪರಿಹಾರ ನಿಡಬೇಕಾದ ಸವಾಲು ಕೇಂದ್ರ ಸರ್ಕಾರದ ಮುಂದಿದೆ. ಇದಲ್ಲದೇ, ಬಡವರು, ಕಾರ್ಮಿಕರು, ದಿನಗೂಲಿ ನೌಕರರು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಸೌಲಭ್ಯ ಕಲ್ಪಿಸುವ ಇರಾದೆ ಪ್ರಧಾನಿ ಮೋದಿಯವರದ್ದಾಗಿದೆ.

 

ಗುಡಿ ಕೈಗಾರಿಕೆಗಳು, ಗೃಹ ಉದ್ಯಮಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳ ಪುನ:ಶ್ಚೇತನಕ್ಕಾಗಿಯೂ ದೊಡ್ಡ ಮಟ್ಟದ ಹಣಕಾಸು ನೆರವು ಲಭಿಸುವ ಸೂಚನೆ ಈಗಾಗಲೇ ದೊರೆತಿದೆ. ಭಾರತದ ಬಹುತೇಕ ಎಲ್ಲ ವಲಯಗಳು ಮತ್ತು ಕ್ಷೇತ್ರಗಳು ಮತ್ತು ದೇಶವಾಸಿಗಳಿಗೆ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನನ್ನು ಈ ಸಂಕಷ್ಟ ಸಮಯದಲ್ಲಿ ಸದ್ಬಳಕೆ ಮಾಡುವುದು ಕೇಂದ್ರದ ಆಶಯ.

 

ದೇಶೀಯ ಒಟ್ಟು ಉತ್ಪನ್ನದ ಶೇ.10ರಷ್ಟು ಪ್ರಮಾಣದ ಈ ಬೃಹತ್ ಆರ್ಥಿಕ ಪ್ಯಾಕೇಜ್ ಬಗ್ಗೆ ಕೇವಲ ಭಾರತಕ್ಕೆ ಮಾತ್ರವಲ್ಲದೇ ಇತರ ದೇಶಗಳಲ್ಲೂ ತೀವ್ರ ಕುತೂಹಲ ಕೆರಳಿಸಿದೆ. 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬಗ್ಗೆ ಈಗಾಗಲೇ ಎಲ್ಲ ವಲಯಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಇದರ ಲಭ್ಯತೆಯ ಸ್ವರೂಪದ ಸ್ಪಷ್ಟ ಚಿತ್ರಣ ಸಂಜೆ ಅನಾವರಣಗೊಳ್ಳಲಿದೆ.

 

Find out more: