ಕೊರೋನಾ ವೈರಸ್ ಇಡೀ ವಿಶ್ವ ವನ್ನೇ ವ್ಯಾಪಿಸಿ ಸಾಕಷ್ಟು ಜನರನ್ನು ಬಲಿ ತೆಗೆದು ಕೊಳ್ಳುತ್ತಿದ್ದು ಇದನ್ನು ತಡೆಗಟ್ಟುವಂತಹ ಔಷಧಿಯನ್ನು ಸಂಶೋಧಿಸುವಂತಹ ಪ್ರಯತ್ನದಲ್ಲಿ ಈಗಾಗಲೇ ಎಲ್ಲಾ ರಾಷ್ಟ್ರಗಳು ತೊಡಗಿಕೊಂಡಿವೆ. ಆ ಒಮದು ದೇಶ ಮಾತ್ರ ಈಗ ಮುಂಚೂಣೆಯಲ್ಲಿ ತನ್ನ ತನ್ನ ಸಂಶೋಧನೆಯನ್ನು ಮಾಡಿ ಮೊದಲ ಪರೀಕ್ಷೆಯಲ್ಲಿ ಯಶಶ್ವಿಯಾಗಿದ್ದಾರೆ ಅಷ್ಟಕ್ಕೂಆ ರಾಷ್ಟ್ರಯಾವುದು ಗೊತ್ತಾ..

 

ಹೌದು ಕೊವಿಡ್​-19ಕ್ಕೆ ಲಸಿಕೆ ಕಂಡು ಹಿಡಿಯಲು 100ಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳು, ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಆದರೆ ಇದುವರೆಗೂ ಕರೊನಾ ಸೋಂಕಿಗೆ ಯಾವುದೇ ಅನುಮೋದಿತ ಔಷಧವೂ ಇಲ್ಲ. ಲಸಿಕೆ ತಯಾರಿಕೆಯೂ ಸಾಧ್ಯವಾಗುತ್ತಿಲ್ಲ. ಆದರೆ ಸಂಸ್ಥೆಗಳ ಪ್ರಯತ್ನ ಮಾತ್ರ ನಿಂತಿಲ್ಲ. ಅದೂ ಅಲ್ಲದೆ, ಕರೊನಾ ವಿರುದ್ಧ ಹೋರಾಡುವ, ಎಲ್ಲ ರೀತಿಯಿಂದಲೂ ಉತ್ತಮವಾದ, ಸುರಕ್ಷಿತ ಲಸಿಕೆ ಅಭಿವೃದ್ಧಿಗೆ 12-18ತಿಂಗಳು ಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಈ ಮಧ್ಯೆ ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಮಾಡರ್ನಾ ಒಂದು ಸಿಹಿ ಸುದ್ದಿ ಕೊಟ್ಟಿದೆ. ಬಯೋಟೆಕ್​ ಸಂಸ್ಥೆಯಲ್ಲಿ ತಯಾರು ಮಾಡಲಾಗಿರುವ ಕೊವಿಡ್ ವಿರುದ್ಧದ ಲಸಿಕೆ ಆರಂಭಿಕ ಹಂತದ ಪ್ರಯೋಗದಲ್ಲಿ ಭರವಸೆ ಮೂಡಿಸಿದೆ. ಈ ಲಸಿಕೆ ಈಗಾಗಲೇ ಕರೊನಾದಿಂದ ಚೇತರಿಸಿಕೊಂಡಿರುವವರ ದೇಹದಲ್ಲಿರುವ ವೈರಸ್​ ತಟಸ್ಥಗೊಳಿಸುವ ಆಯಂಟಿಬಾಡಿ (ಪ್ರತಿಕಾಯ)ಯನ್ನು ಉತ್ಪಾದಿಸುತ್ತಿದೆ ಎಂದು ಹೇಳಿದೆ.

 

ಆರ್​ಎನ್​ಎ-1273 ಲಸಿಕೆ ಪ್ರಯೋಗಕ್ಕೆ ಸ್ವಯಂಪ್ರೇರಿತರಾಗಿ ಮುಂದೆ ಬಂದ ಒಪ್ಪಿಗೆ ನೀಡಿದ ಕೆಲವೇ ಮಂದಿಯ ಮೇಲೆ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಎಂಟು ಜನರ ದೇಹದಲ್ಲಿ ಉತ್ಪಾದನೆಯಾದ ಪ್ರತಿಕಾಯದ ಪ್ರಮಾಣ, ಈಗಾಗಲೇ ಕೊವಿಡ್​-19ಗೆ ತುತ್ತಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವವರ ದೇಹದಲ್ಲಿ, ವೈರಸ್​ನ್ನು ತಟಸ್ಥಗೊಳಿಸಿದ ಆಯಂಟಿಬಾಡಿಯ ಪ್ರಮಾಣಕ್ಕೂ ಸಾಮ್ಯತೆ ಇದೆ ಎಂದು ತಿಳಿಸಿದೆ.

 

ಹಾಗೇ ಈ ಲಸಿಕೆ ಸುರಕ್ಷಿತವಾಗಿದೆ ಮತ್ತು ಕರೊನಾ ದಾಳಿಯನ್ನು ತಡೆಯುತ್ತದೆ ಎಂದು ಬಯೋಟೆಕ್​ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಅಮೆರಿಕ ಸರ್ಕಾರವು ಮಾಡರ್ನಾದ ಲಸಿಕೆ ಅಭಿವೃದ್ಧಿಗೆ ಅರ್ಧ ಬಿಲಿಯನ್​ ಡಾಲರ್​ ಹೂಡಿಕೆ ಮಾಡಿದ್ದು, ಈಗ ಮೊದಲನೇ ಹಂತದ ಕ್ಲಿನಿಕಲ್​ ಟೆಸ್ಟ್​ನ್ನು ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ಹೆಲ್ತ್​ ನಡೆಸಿದೆ. 15 ಜನರ ಮೂರು ಗುಂಪು ಲಸಿಕೆಯ ಪ್ರಯೋಗಕ್ಕೆ ಒಡ್ಡಿಕೊಂಡಿತ್ತು. ಅಂದರೆ ಒಟ್ಟು 45 ಮಂದಿಯ ಮೇಲೆ ಲಸಿಕೆ ಪರೀಕ್ಷೆ ನಡೆದಿದೆ. ಈ ಮೂರು ಗುಂಪಿಗೆ ವಿವಿಧ ಡೋಸ್​​ನಲ್ಲಿ ನೀಡಲಾಗಿತ್ತು ಎಂದು ಮಾಹಿತಿ ನೀಡಿದೆ.

 

ಎರಡನೇ ಹಂತದ ಕ್ಲಿನಕಲ್​ ಟೆಸ್ಟ್​ನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಗುವುದು. ಹಾಗೇ ಲಸಿಕೆಯ ಸಾಮರ್ಥ್ಯ ನಿರ್ಧರಿಸುವ ಕೊನೇ ಮತ್ತು ಮೂರನೇ ಹಂತದ ಕ್ಲಿನಿಕಲ್​ ಟೆಸ್ಟ್ ಜುಲೈನಲ್ಲಿ ಪ್ರಾರಂಭವಾಗಬೇಕು ಎಂದು ನಿರ್ಧಾರ ಮಾಡಿದ್ದಾರೆ ಕಂಪನಿ ತಿಳಿಸಿದೆ.

 

Find out more: