ಕೊರೊನಾ ವೈರಸ್ ಎಲ್ಲಾ ಪ್ರಪಂಚವನ್ನು ಆವರಿಸಿ ಸಾಕಷ್ಟು ಜನರನ್ನು ವ್ಯಾಪಿಸಿ ಲಕ್ಷಾಂತರ ಮಂದಿಯನ್ನು ಈ ಗಾಗಲೇ ಬಲಿಯನ್ನು ತೆಗೆದುಕೊಳ್ಳುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಪ್ರಪಂಚದ ಸಾಕಷ್ಟು ರಾಷ್ಟ್ರಗಳು ಇದಕ್ಕೆ ಔಷಧಿಯನ್ನು ಸಂಶೋಧಿಸುತ್ತಿದ್ದಾರೆ . ಸದ್ಯ ಮಲೇರಿಯಾ ನಿಯಂತ್ರಣಕ್ಕೆ ನೀಡುವ ಔಷಧಿಯನ್ನೇ ನೀಡಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿವಿಧ ದೇಶಗಳ ಹಲವು ವಿಜ್ಞಾನಿಗಳು, ಔಷಧ ತಯಾರಿಕಾ ಸಂಸ್ಥೆಗಳು ಕೊವಿಡ್-19ಕ್ಕೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿವೆ.
ಇದೀಗ ಚೀನಾದ ವಿಜ್ಞಾನಿಗಳು ತಾವು ಕೊವಿಡ್-19ನ್ನು ಗುಣಪಡಿಸುವ ಔಷಧಿಯನ್ನು ಕಂಡು ಹಿಡಿದಿದ್ದು, ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ಈ ಔಷಧಿ ಕರೊನಾ ವಿರುದ್ಧ ಹೋರಾಡುತ್ತದೆ. ಖಂಡಿತ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುತ್ತದೆ. ಬಹುಶಃ ಯಾವುದೇ ಲಸಿಕೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಚೀನಾದ ಪ್ರತಿಷ್ಠಿತ ಪೀಕಿಂಗ್ ವಿಶ್ವವಿದ್ಯಾನಿಲಯದಲ್ಲಿ ಈ ಔಷಧಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಇಲ್ಲಿನ ಸಂಶೋಧಕರು ಅದರ ಬಗ್ಗೆ ತುಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಸೋಂಕಿಗೆ ಒಳಗಾದವರ ಚೇತರಿಕೆಯ ಅವಧಿಯನ್ನು ಈ ಹೊಸ ಔಷಧಿ ಕಡಿಮೆ ಮಾಡುತ್ತಿದೆ. ದೇಹಕ್ಕೆ ಪ್ರವೇಶ ಮಾಡಿದ ಕೆಲವೇ ಸಮಯದಲ್ಲಿ ಸೋಂಕು ನಿವಾರಣೆ ಮಾಡುತ್ತದೆ ಎಂಬುದು ಪ್ರಯೋಗದಲ್ಲಿ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ಕರೊನಾ ಸೋಂಕಿತ ಇಲಿಗೆ ನಾವು ಅಭಿವೃದ್ಧಿ ಪಡಿಸಿದ ಸೋಂಕು ನಿವಾರಕ ಆಯಂಟಿಬಾಡಿ ಔಷಧಿಯನ್ನು ಇಂಜೆಕ್ಟ್ ಮಾಡಿದ್ದೆವು. ಐದು ದಿನಗಳಲ್ಲಿ ಇಲಿಯ ದೇಹದಲ್ಲಿ ಸೋಂಕಿನ ಪ್ರಮಾಣ ತುಂಬ ಕಡಿಮೆಯಾಗಿತ್ತು ಎಂದು ವಿಶ್ವವಿದ್ಯಾನಿಲಯದ ಬೀಜಿಂಗ್ ಅಡ್ವಾನ್ಸ್ಡ್ ಇನ್ನೋವೇಶನ್ ಸೆಂಟರ್ ಫಾರ್ ಜೀನೋಮಿಕ್ಸ್ನ ನಿರ್ದೇಶಕ ಸನ್ನಿ ಕ್ಸಿ ತಿಳಿಸಿದ್ದಾರೆ. ಈ ಔಷಧಿಯಿಂದ ಕೊವಿಡ್-19ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂಬುದು ಪ್ರಯೋಗದಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಔಷಧಿ ಕ್ಲಿನಿಕಲ್ ಟೆಸ್ಟ್ಗೆ ಯೋಜನೆ ರೂಪಿಸಲಾಗುತ್ತಿದೆ. ಚೀನಾದಲ್ಲಿ ಕರೊನಾ ಪ್ರಕರಣಗಳು ಕಡಿಮೆಯಾಗಿದ್ದರಿಂದ ಆಸ್ಟ್ರೇಲಿಯಾ ಸೇರಿ ಬೇರೆ ಕೆಲವು ದೇಶಗಳಲ್ಲಿ ಕ್ಲಿನಿಕಲ್ ಟೆಸ್ಟ್ ಮಾಡಲಾಗುತ್ತದೆ. ಗಿನಿಯಿಲಿ (guinea pigs)ಗಳ ಮೇಲೆ ಪ್ರಯೋಗ ಮಾಡಲಾಗುವುದು ಎಂದು ವಿವರಿಸಿದ್ದಾರೆ. ಹಾಗೇ ಎಲ್ಲ ಪ್ರಯೋಗಗಳೂ ಮುಗಿದು ಔಷಧಿ ಬಳಕೆಗೆ ಸಿಗುವುದು ಈ ವರ್ಷದ ಕೊನೆಯಲ್ಲಿ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.