ಕೊರೋನ ವರಸ್ ಇಡೀ ವಿಶ್ವವನ್ನೇ ವ್ಯಾಪಿಸಿ ಸಾಕಷ್ಟು ಜನರನ್ನು ಬಲಿತೆಗೆದುಕೊಂಡಿದೆ, ಇದರ ಜೊತೆಗೆ ಅನೇಕ ದೇಶಗಳು ಆರ್ಥಿಕ ಪರಿಸ್ಥಿತಿ ಕುಸಿದಿದೆ ಆದರೆ ಈ ಕೊರೋನಾ ಭಾರತಕ್ಕೆ ಹೊಸೊ ಹೊಸ ಅವಕಾಶಗಳನ್ನು ಮಾಡಿಕೊಡುತ್ತಿದೆ . ಆದರೆ ಅತಿ ವೇಗವಾಗಿ ಆರ್ಥಿಕ ಸುಧಾರಣೆಗಳನ್ನು ಮಾಡಿಕೊಂಡರೆ ಮಾತ್ರ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅಷ್ಟಕ್ಕೂ ಅಂತಹ ಅವಕಾಶಗಳು ಏನು ಗೊತ್ತಾ..?

 

ಕೊರೊನ್ ವೈರಸ್ ಸಂಕಷ್ಟವು ಭಾರತಕ್ಕೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಕ್ಷಿಪ್ರಗತಿಯಲ್ಲಿ ಆರ್ಥಿಕ ಸುಧಾರಣೆಗಳಿಗೆ ಚಾಲನೆ ನೀಡಿದರೆ ಮಾತ್ರ ಈ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

 

ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವಿದ್ಯಮಾನಗಳ ಉಸ್ತುವಾರಿ ಹೊತ್ತಿದ್ದ, ಇನ್ನೇನು ನಿವೃತ್ತರಾಗಲಿರುವ ಪ್ರಧಾನ ಕಾರ್ಯದರ್ಶಿ ಅಲಿಸ್ ವೆಲ್ಸ್ 'ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅಮೆರಿಕಕ್ಕೆ ಆಸಕ್ತಿಯಿದೆ. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

 

'ಈವರೆಗೆ ಚೀನಾದಲ್ಲಿ ಕೇಂದ್ರೀಕೃತವಾಗಿದ್ದ ಪೂರೈಕೆ ಜಾಲವನ್ನು ಇತರ ದೇಶಗಳಿಗೆ ವಿಸ್ತರಿಸಲು ಹಲವು ದೇಶಗಳು ಯೋಚಿಸುತ್ತಿವೆ. ಇದು ಭಾರತಕ್ಕೆ ನಿಜವಾಗಿಯೂ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ. ದೇಶೀಯ ಉತ್ಪನ್ನಗಳು ಮತ್ತು ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ಹೆಚ್ಚು ಒತ್ತುಕೊಡುವ ದೃಷ್ಟಿಕೋನದಿಂದ ಆಚೆಗೆ ಯೋಚಿಸುವ ಮೂಲಕ ಭಾರತವು ಈ ಬೆಳವಣಿಗೆಗೆ ಪ್ರತಿಕ್ರಿಯಿಸಬೇಕು. ಉದ್ಯಮ ಸ್ನೇಹಿ ವಾತಾವರಣ ರೂಪಿಸಲು ಯತ್ನಿಸಬೇಕು. ವ್ಯಾಪಾರದ ವಾತಾವರಣ ಉತ್ತಮಪಡಿಸಲು ಭಾರತದೊಂದಿಗೆ ಕೆಲಸ ಮಾಡಲು ಅಮೆರಿಕ ಸಿದ್ಧವಿದೆ' ಎಂದು ಅವರು ತಿಳಿಸಿದರು.

 

'ನಮ್ಮದು ವ್ಯಾಪಾರ ಒಪ್ಪಂದಗಳಿಗೆ ಒತ್ತುಕೊಡುವ ದೇಶ. ಆದರೆ ನಮ್ಮೊಂದಿಗೆ ಗಟ್ಟಿಯಾದ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಭಾರತಕ್ಕೆ ಕೇವಲ ಅಮೆರಿಕದೊಂದಿಗೆ ಮಾತ್ರವಲ್ಲ, ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳೊಂದಿಗೂ ಗಟ್ಟಿಯಾದ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಮಾತು ತುಸು ಒರಟು ಎನಿಸಬಹುದು. ಆದರೂ ಇದು ಸತ್ಯ' ಎಂದು ವಿವರಿಸಿದರು.


'ಕೋವಿಡ್-19ರ ನಂತರದ ಜಗತ್ತು ಹಿಂದಿಗಿಂತ ಭಿನ್ನ. ಚೀನಾ ಅಪಾಯವನ್ನು ನೀಗಿಸಿಕೊಳ್ಳಲು ಹಲವು ದೇಶಗಳು ಯೋಚಿಸುತ್ತಿವೆ. ಇದು ಭಾರತಕ್ಕೆ ನಿಜಕ್ಕೂ ಸುವರ್ಣಾವಕಾಶ ಕಲ್ಪಿಸಿದೆ. ಇಂಥ ಸಂದರ್ಭದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಬದ್ಧತೆ, ಸೂಕ್ತ ನೀತಿಗಳ ಜಾರಿಯ ಮೂಲಕ ಭಾರತ ಪ್ರತಿಕ್ರಿಯಿಸಬೇಕು' ಎಂದು ಅವರು ಸಲಹೆ ಮಾಡಿದರು.

 

Find out more: