ಕೊರೋನಾ ಸೋಕು ಹುಟ್ಟಿದು ಯಾವುದ್ದನ್ನು ಎಂದು ಯಾರನ್ನಾದರೂ ಕೇಳಿದರೆ ಯೋಚಿಸದೇ ಹೇಳುವುದು ಕೇವಲ ಚೀನಾ ದೇಶವನ್ನ ಮಾತ್ರ. ತನ್ನ ಸ್ವಾರ್ಥ ಸಾಧನೆಗಾಗಿ ಇಡೀ ವಿಶ್ವಕ್ಕೇ ವೈರಸ ನ್ನು ಪಸರಿಸಿದ್ದಲ್ಲದೆ. ಈಗ ಚೀನ ತನ್ನ ಮೇಲಿರುವ ಬಂದಿರುವ ಆರೋಪವನ್ನು ತಳ್ಳಿಹಾಕಿದೆ. ಚೀನಾದಲ್ಲಿ ಜನ್ಮ ತಾಳಿದ ಕೊರೊನಾದಿಂದ ಸಾಕಷ್ಟು ಅನಾಹುತವಾಗಿದೆ. ಹಾನಿಗೆಲ್ಲಾ ಪರಿಹಾರವನ್ನು ಚೀನಾ ಸರ್ಕಾರ ಕೊಡಬೇಕು. ಎಂದು ತಿಳಿಸಿಲಾಗಿದ್ದರೂ ಕೂಡ ಇದನ್ನು ಚೀನಾ ಹಲ್ಲೆಗೆಳಗಿದೆ.
ಹೌದು ಜಾಗತಿಕವಾಗಿ ಮಾರಣಹೋಮಕ್ಕೆ ಕಾರಣವಾಗುತ್ತಿರುವ ಕರೋನಾ ವೈರಾಣು ತಮ್ಮ ದೇಶದಲ್ಲೇ ಉಗಮಿಸಿದ್ದರೂ ಚೀನಾದ ಮುಖಂಡರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಇದೀಗ ಆ ಬಗ್ಗೆ ಜಾಗತಿಕ ತನಿಖೆಗೆ ಒಪ್ಪಿಕೊಂಡಿದ್ದರೂ, ತಮ್ಮ ರಾಷ್ಟ್ರ ಯಾವುದೇ ಕಾರಣಕ್ಕೂ ಪರಿಹಾರ ಕೊಡುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯೀ ಹೇಳಿದ್ದಾರೆ.
13ನೇ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ಪರಿಹಾರ ಕೊಡುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ ಎಂದು ಹೇಳಿದರು.
ವ್ಯಾಂಗ್ ಯೀ ಹೇಳಿಕೆಯನ್ನು ಗಮನಿಸಿದಾಗ ಚೀನಾದ ವಿದೇಶಾಂಗ ನೀತಿಯ ತಳಹದಿ ತುಂಬಾ ಗಟ್ಟಿಯಾಗಿರುವುದು ಸ್ಪಷ್ಟವಾಗುತ್ತದೆ. ಇದಕ್ಕೂ ಮುನ್ನ ಚೀನಾದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಕರೊನಾ ವೈರಾಣುವಿನ ಮೂಲದ ಅಂತಾರಾಷ್ಟ್ರೀಯ ತನಿಖೆಗೆ ತಮ್ಮ ದೇಶ ಮುಕ್ತವಾಗಿದೆ ಎಂದು ಹೇಳಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೊನಾ ಪಿಡುಗಿಗೆ ಚೀನಾವೇ ಕಾರಣ ಎಂದು ನಿರಂತರವಾಗಿ ದೂಷಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾ ವಿದೇಶಾಂಗ ಸಚಿವರ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.
ಈ ವಿಷಯವಾಗಿ ಉಭಯ ರಾಷ್ಟ್ರಗಳು ಪರಸ್ಪರ ಕೆಸೆರೆಚಾಟದಲ್ಲಿ ತೊಡಗಿಕೊಂಡಿವೆ. ಈ ಪಿಡುಗಿಗೆ ಪರಸ್ಪರರನ್ನು ಹೊಣೆಯಾಗಿಸಲು ಚೀನಾ ಮತ್ತು ಅಮೆರಿಕ ನಿರಂತರವಾಗಿ ಪ್ರಯತ್ನಿಸುತ್ತಿವೆ. ಡೊನಾಲ್ಡ್ ಟ್ರಂಪ್ ಅವರಂತೂ ಚೀನಾದ ವುಹಾನ್ನಲ್ಲಿ ಈ ವೈರಾಣುವನ್ನು ಸೃಷ್ಟಿಸಲಾಗಿದೆ. ಅದು ಆಕಸ್ಮಿಕವಾಗಿ ಸೋರಿಕೆಯಾಗಿ ಜಾಗತಿಕವಾಗಿ ಹಬ್ಬಿದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಚೀನಾ ಇದನ್ನು ಅಲ್ಲಗಳೆಯುತ್ತಲೇ ಬರುತ್ತಿದೆ.
ಇದಕ್ಕೆ ಪ್ರತಿಯಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿಜಿಯಾನ್ ಝಾವೋ ಅಮೆರಿಕದ ಯೋಧರೇ ಈ ವೈರಾಣುವನ್ನು ಚೀನಾಕ್ಕೆ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ನಂತರದಲ್ಲಿ ಅದು ಚೀನಾದಿಂದಲೇ ಮನುಷ್ಯರಿಂದ ಮನುಷ್ಯರಿಗೆ ಹಬ್ಬುತ್ತಾ ಇಡೀ ವಿಶ್ವವನ್ನೇ ಆವರಿಸಿತು ಎಂಬುದು ಸಾಬೀತಾಗಿತ್ತು.