ಕೊರೋನಾ ಸೋಂಕು ಇಂದು ಇಡೀ ಜಗತ್ತಿನಾದ್ಯಂತ ಹೆಚ್ಚಾಗುತ್ತಿದ್ದು ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಭಾರತದಲ್ಲೂ ಕೂಡ ಲಕ್ಷಾಂತರ ಮಂದಿಗೆ ಸೋಂಕು ತಗುಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ಈಗ ಏಷ್ಯಾದ ಅತಿ ಹೆಚ್ಚು ಬಾಧಿತದೇಶವಾಗಿದೆ. ಅಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಭಾರತ 9ನೇ ಸ್ಥಾನಕ್ಕೇರಿದೆ. ಸಾಂಕ್ರಾಮಿಕರೋಗ ಮತ್ತು ಸಾವು ಪ್ರಕರಣಗಳ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವಾಗಲೇ ಸಮುದಾಯ ಸೋಂಕು ಸಾಧ್ಯತೆಯ ಭೀತಿಯೂ ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ.
ನಿನ್ನೆ ಒಂದೇ ದಿನ ದೇಶದಲ್ಲಿದಾಖಲೆ ಪ್ರಮಾಣದ 7,466 ಸೋಂಕು ಪ್ರಕರಣಗಳು ದಾಖಲಾಗಿದ್ದು, ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರಇದುಗರಿಷ್ಠ ಪ್ರಮಾಣದ್ದಾಗಿದೆ. ದೇಶದಲ್ಲಿ ಸತತಎಂಟನೆ ದಿನ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದುದೇಶದಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ.
ಮೃತರ ಸಂಖ್ಯೆ 4,700 ಹಾಗೂ ರೋಗಪೀಡಿತರ ಸಂಖ್ಯೆ 1.66 ಲಕ್ಷದಾಟಿದೆ. ನಿನ್ನೆಒಂದೇ ದಿನ ಅಂದರೆ 24 ತಾಸುಗಳ ಅವಧಿಯಲ್ಲಿ 7,466 ಸಾಂಕ್ರಾಮಿಕರೋಗಉಲ್ಬಣದಲ್ಲಿ ನಿರಂತರಎಂಟನೇ ದಿನದ ಭಾರೀಜಿಗಿತ ಇದಾಗಿದೆ. ಅಲ್ಲದೇ ಈ ವಾರದಲ್ಲಿ ಆರು ದಿನಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್ಗಳು ದಾಖಲಾಗಿವೆ.
ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 175 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 4,706ಕ್ಕೇರಿದೆ . ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 1,65,799 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈವರೆಗೆ ಸಂಭವಿಸಿರುವ 4,531 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 89,980ರಷ್ಟಿದೆ. ಈ ಮಧ್ಯೆ, ಈವರೆಗೆ71,105(ಚೇತರಿಕೆ ಪ್ರಮಾಣ ಶೇ.42.89) ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.
ಏಷ್ಯಾದಲ್ಲೇ ನಂ.1
ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ಈಗ ಏಷ್ಯಾದ ಅತಿ ಹೆಚ್ಚು ಬಾಧಿತ ದೇಶವಾಗಿದೆ. ಅಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಭಾರತ 9ನೇ ಸ್ಥಾನಕ್ಕೇರಿದೆ. ವಿಶ್ವದಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ 9ನೇ ಸ್ಥಾನದಲ್ಲಿದ್ದಟರ್ಕಿಯನ್ನು ಹಿಂದಿಕ್ಕಿದೆ.
ಅಮೆರಿಕ, ಬ್ರೆಜಿಲ್, ರಷ್ಯಾ, ಸ್ಪೇನ್, ಇಂಗ್ಲೆಂಡ್. ಇಟಲಿ, ಫ್ರಾನ್ಸ್, ಜರ್ಮನಿ ನಂತರದ ಸ್ಥಾನದಲ್ಲಿ ಭಾರತವಿದೆ. ಕೊರೊನಾ ದಾಳಿಯ ವೇಗ ದೇಶದಲ್ಲಿಇದೇರೀತಿ ಮುಂದುವರಿದರೆ. ಭಾರತವು ಈ ಸೋಮವಾರದ ವೇಳೆಗೆ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರುವ ಆತಂಕವೂ ಇದೆ.