ಕೊರೋನಾ ವೈರಸ್ ಇಂದ ದೇಶವನ್ನು ರಕ್ಷಿಸುವ ದೃಷ್ಟಿಯಿಮದ ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಘೋಷಣೆಯನ್ನು ಮಾಡಲಾಗಿತ್ತು. ಈ ಲಾಕ್ ಡೌನ್ 1.0 , ಲಾಕ್ ಡೌನ್ 2.0 ನಲ್ಲಿ ಬಿಗಿಯಾಗಿದ್ದ ಹಿಡಿತ ಲಾಕ್ ಡೌನ್ 3.0 ನಲ್ಲಿ ಸ್ವಲ್ಪ ಸಡಿಲ ಗೊಳಿಸಲಾಗಿತ್ತು, ಆದರೆ ಲಾಕ್ ಡೌನ್ 4.0 ನಲ್ಲಿ ಕಂಟೈನ್ ಮೆಂಟ್ ಕೇಂದ್ರ ಗಳನ್ನು ಹೊತುಪಡಿಸಿ ಉಳಿದೆಲ್ಲಾ ಪ್ರದೇಶಗಳನ್ನು ಸಡಿಲ ಗೊಳಿಸಲಾಗಿತ್ತು, ಆದರೆ ಈಗ ಲಾಕ್ ಡೌನ್ 4.0 ಮುಗಿಯುವ ಹಂತಕ್ಕೆ ಬಂದಿದ್ದು ಜೂನ್ 1 ರಿಂದ ಲಾಕ್ ಡೌನ್ 5.0 ಘೋಷಣೆಯನ್ನು ಮಾಡುವ ಲಕ್ಷಣಗಳು ಗೋಚರವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಈಗಾಗಲೇ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಿದರೂ ಕೂಡ ರೆಸ್ಟೋರೆಂಟ್, ಥಿಯೇಟರ್ ಹಾಗೂ ಮಾಲ್‌ಗಳು ಸೇರಿದಂತೆ ಇನ್ನೊಂದಿಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಿಲ್ಲ. ಹಾಗಾಗಿ ಐದನೇ ಹಂತದ ಲಾಕ್‌ಡೌನ್‌ನಲ್ಲಿ ವಿನಾಯಿತಿ ಸಿಗುವ ಸೂಚನೆ ಇದೆ.
ಇದರ ಜೊತೆಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹೊರತುಪಡಿಸಿ ಕಡಿಮೆ ಇರುವ ಕಡೆಗಳಲ್ಲಿ ಹೆಚ್ಚಿನ ವಿನಾಯಿತಿ ನೀಡಲು ಮಂದಾಗಿದ್ದು, ಹೆಚ್ಚಿನ ಕೊರೊನಾ ಸೋಂಕು ಇರುವ ಪ್ರದೇಶಗಳನ್ನು ಪಟ್ಟಿ ಮಾಡಿದೆ ಎನ್ನಲಾಗುತ್ತಿದೆ.
ಒಟ್ಟು 13 ನಗರಗಳನ್ನು ಗುರುತಿಸಲಾಗಿದೆ. ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ-ಹೌರಾ, ಇಂದೋರ್, ಜೈಪುರ, ಜೋಧ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರುಗಳು ಹೆಚ್ಚಿನ ಕೊರೊನಾ ಸೋಂಕು ಇರುವ ನಗರಗಳಾಗಿವೆ. ಈ ನಗರಗಳನ್ನು ಹೊರತುಪಡಿಸಿ ಉಳಿದ ಕಡೆ ಹೆಚ್ಚಿನ ವಿನಾಯಿತಿ ನೀಡಲು ಮುಂದಾಗಿದೆಯಂತೆ.
ನಾಲ್ಕನೇ ಹಂತದ ಲಾಕ್‌ಡೌನ್ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಹೀಗಾಗಿ ಜೂನ್ 1 ರಿಂದ ಷರತ್ತು ಬದ್ಧವಾಗಿ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡಲು ಅನುಮತಿ ನೀಡುವ ಸಾಧ್ಯತೆಯಿದೆ.
ಭಾನುವಾರ 11 ಗಂಟೆಗೆ ಮನ್-ಕೀ-ಬಾತ್ ಮಾತು:
ನೊವೆಲ್ ಕೊರೊನಾ ವೈರಸ್ ನಿಂದ ಸಂದಿಗ್ಧ ಪರಿಸ್ಥಿತಿಯಲ್ಲಿ ಆತಂಕದಲ್ಲೇ ದಿನ ಕಳೆಯುತ್ತಿರುವ ಪ್ರಜೆಗಳನನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ 65ನೇ ಮನ್ ಕೀ ಬಾತ್ ನಲ್ಲಿ ಮಾತನಾಡಲಿದ್ದಾರೆ. ಕೊರೊನಾ ವೈರಸ್ ಸೋಂಕಿನ ಜೊತೆಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದ್ದ ಪ್ರಧಾನಿ ಮೋದಿ ಅದಕ್ಕಾಗಿ ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದರು.