ಇಡೀ ಜಗತ್ತನ್ನು ಕೊರೋನಾ ವೈರಸ್ ಆವರಿಸಿಕೊಂಡು ಅನೇಕ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯನ್ನು ಕೊ ರೋನಾ ವೈರಸ್ ನುಂಗಿ ಹಾಕಿಕೊಂಡಿರುವ ಸಂದರ್ಭದಲ್ಲಿ ಈ ಶೃಂಗ ಸಭೆಯನ್ನು ನಡೆಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ತಿಳಿಸಿದ್ದಾರೆ, ಈ ಶೃಂಗ ಸಭೆಯಲ್ಲಿ 7 ರಾಷ್ಟ್ರಗಳ ಜೊತೆಗೆ ಮತ್ತಷ್ಟು ರಾಷ್ಟ್ರಗಳು ಭಾಗವಹಿಸಲಿದ್ದಾವೆ ಅಷ್ಟಕ್ಕೂ ಈ ಶೃಂಗ ಸಭೆಯಲ್ಲಿ ಈ ಬಾರಿ ಯಾವ ಯಾವ ಹೊಸ ರಾಷ್ಟ್ರಗಳು ಭಾಗವಹಿಸುತ್ತವೆ ಗೊತ್ತಾ..?

 

ಜಿ7 ಶೃಂಗ ಸಭೆ ಇದೇ ಜೂನ್​ನಲ್ಲಿ ನಡೆಯಬೇಕಿತ್ತು. ಆದರೆ, ಕೊರೋನಾ ವೈರಸ್ ಇರುವ ಹಿನ್ನೆಲೆಯಲ್ಲಿ ಇದು ನಡೆಯುತ್ತದೆಯೋ ಅಥವಾ ಇಲ್ಲವೋ ಎನ್ನುವ ಅನುಮಾನ ಕಾಡಿತ್ತು. ಇದಕ್ಕೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಉತ್ತರ ನೀಡಿದ್ದು, ನಾನು ಶೃಂಗಸಭೆಯನ್ನು ಸ್ವಲ್ಪ ತಡವಾಗಿ ನಡೆಸುತ್ತೇನೆ ಈ ಶೃಂಗಸಬೆಯಲ್ಲಿ  ಪ್ರತಿವರ್ಷ ಜಿ7 ಶೃಂಗಸಭೆಯಲ್ಲಿ ಬ್ರಿಟನ್​, ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ, ಜಪಾನ್​ ಮತ್ತು ಅಮೆರಿಕ ಪಾಳ್ಗೊಳ್ಳುತ್ತಿತ್ತು. ಈ ಏಳು ರಾಷ್ಟ್ರಗಳು ಕೂಡಿ ವಿಶ್ವದ ಆರ್ಥಿಕತೆ ಬಗ್ಗೆ ಚರ್ಚೆ ನಡೆಸುತ್ತಿದ್ದವು. ಆದರೆ, ಇವುಗಳ ಜೊತೆ ಇನ್ನೂ ಹಲವು ರಾಷ್ಟ್ರಗಳನ್ನು ಸೇರಿಸುವುದಾಗಿ ಟ್ರಂಪ್​ ಹೇಳಿದ್ದಾರೆ.

 

ಶ್ವೇತಭವನದಲ್ಲಿ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿದ್ದ ಜಿ7 ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್‌ಗೆ ಮುಂದೂಡಿದ್ದಾರೆ.ಜೊತೆಗೆ ಜಿ7 ಶೃಂಗ ರಾಷ್ಟ್ರಗಳೊಂದಿಗೆ ಇಂದು ವಿಶ್ವದ ಆರ್ಥಿಕತೆಯಲ್ಲಿ ಗುರುತಿಸಿಕೊಂಡಿರುವ ಭಾರತ ಮತ್ತು ಇತರ ಕೆಲವು ದೇಶಗಳನ್ನು ಸೇರಿಸುವಂತೆ ಅವರು ಕೋರಿದ್ದಾರೆ.

 

ಈ ಬಗ್ಗೆ ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಟ್ರಂಪ್, ಜಿ7 ಶೃಂಗಸಭೆಯನ್ನು ಸೆಪ್ಟೆಂಬರ್ ವರೆಗೆ ಮುಂದೂಡಲಾಗುವುದು, ನಂತರ ನಡೆಸುವ ಶೃಂಗಸಭೆಗೆ ಭಾರತ ಸೇರಿದಂತೆ ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳನ್ನು ಸಹ ಆಹ್ವಾನಿಸಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಜಿ7 ಅನ್ನು ಜಿ10 ಅಥವಾ ಜಿ11 ಎಂದು ಕರೆಯಬಹುದು ಎಂದಿದ್ದಾರೆ.

 

"ನಾನು ಅದನ್ನು ಮುಂದೂಡುತ್ತಿದ್ದೇನೆ ಏಕೆಂದರೆ ಜಿ 7 ಸದ್ಯ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ಪ್ರತಿನಿಧಿಸುತ್ತದೆ ಎಂದು ನನಗೆ ಅನಿಸುವುದಿಲ್ಲ" ಇದು ಬಹಳ ಹಳತಾದ ದೇಶಗಳ ಗುಂಪಾಗಿದೆ'' ಎಂದು ಟ್ರಂಪ್ ತಿಳಿಸಿದ್ದಾರೆ.

 

ವಿಶ್ವದ ಅತ್ಯಂತ ಸುಧಾರಿತ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಕೆನಡಾ ದೇಶಗಳನ್ನು ಒಟ್ಟು ಸೇರಿಸಿ ಜಿ7 ಶೃಂಗರಾಷ್ಟ್ರಗಳನ್ನಾಗಿ ರಚಿಸಲಾಗಿತ್ತು. ಈ ದೇಶಗಳ ಮುಖ್ಯಸ್ಥರು ವರ್ಷಕ್ಕೊಂದು ಬಾರಿ ಸಭೆ ಸೇರಿ ಅಂತರಾಷ್ಟ್ರೀಯ ಆರ್ಥಿಕತೆ ಮತ್ತು ವಿತ್ತೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ.

 

ಈ ವರ್ಷದ ಜಿ7 ಶೃಂಗಸಭೆಯ ಆತಿಥ್ಯ ಅಮೆರಿಕ ವಹಿಸಲಿದೆ. ಸಾಮಾನ್ಯವಾಗಿ ಈ ಶೃಂಗಸಭೆಗೆ ಅಧ್ಯಕ್ಷರು ಪ್ರತಿವರ್ಷ ಒಂದು ಅಥವಾ ಎರಡು ರಾಷ್ಟ್ರಗಳ ಮುಖ್ಯಸ್ಥರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸುತ್ತಾರೆ. ಕಳೆದ ವರ್ಷ ಫ್ರಾನ್ಸ್ ನಲ್ಲಿ ನಡೆದ ಶೃಂಗಸಭೆಗೆ ಪ್ರಧಾನಿ ಮೋದಿಯವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

 

Find out more: