ಎರಡು ತಿಂಗಳ ಕಾಲ ಕೊರೋನ ಸೋಂಕಿನಿಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಇನ್ನು ಮುಂದೆ ಲಾಕ್ ಡೌನ್ ಅಲ್ಲ ಅನ್ ಲಾಕ್ ಶೂರುವಾಗುತ್ತಿದೆ. ಲಾಕ್ ಡೌನ್ ಅನ್ನು ನೇರವಾಗಿ ತೆಗೆಯದೆ ನಿಧಾನವಾಗಿ ತೆಗೆಯುತ್ತಾ ಇಡೀ ದೇಶವನ್ನೇ ಅನ್ ಲಾಕ್ ಮಾಡುವ ಯೋಜನೆಯನ್ನು ಮೋದಿ ರೂಪಿಸಿದ್ದಾರೆ. ಇದರ ಜೊತೆಗೆ ಅನ್ ಲಾಕ್  ಆದ ನಂತರ ಜನರು ಯಾವ ಯಾವ ಕ್ರಮಗಳನ್ನು  ಕೈಗೊಳ್ಳಬೇಕು ಎಂದು  ಹೇಳಿದ್ದಾರೆ ಗೊತ್ತಾ..?

 

ಕೇಂದ್ರವು ಜೂ.8ರಂದು ಹೋಟೆಲ್‌ಗಳು ಮತ್ತು ರೆಸ್ಟೋರಂಟ್‌ಗಳು,ಶಾಪಿಂಗ್ ಮಾಲ್‌ಗಳು ಮತ್ತು ಧಾರ್ಮಿಕ ಸ್ಥಳಗಳ ಪುನರಾರಂಭಕ್ಕೆ ಅವಕಾಶ ಕಲ್ಪಿಸಿ ಶನಿವಾರ ಪ್ರಕಟಿಸಿರುವ 'ಅನ್‌ಲಾಕ್ 1'ನ್ನು ಪ್ರಸ್ತಾಪಿಸಿದ ಮೋದಿ,ಅದು 'ದೋ ಗಜ್ ಕೀ ದೂರಿ' ನಿಯಮ,ಮಾಸ್ಕ್ ಧಾರಣೆ ಅಥವಾ ಸಾಧ್ಯವಿದ್ದಷ್ಟು ಮನೆಯಲ್ಲಿಯೇ ಇರುವುದು ಆಗಿರಲಿ,ಜನರು ಇವುಗಳನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸಬೇಕು  ದೇಶದಲ್ಲಿ ಲಾಕ್‌ಡೌನ್ ಅನ್ನು ನಿಧಾನವಾಗಿ ತೆರವುಗೊಳಿಸಲಾಗುತ್ತಿದ್ದು,ಜನರೀಗ ಹೆಚ್ಚು ಎಚ್ಚರಿಕೆಯಿಂದಿರ ಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ಮಾಸಿಕ 'ಮನ್ ಕಿ ಬಾತ್'ರೇಡಿಯೊ ಭಾಷಣದಲ್ಲಿ ಹೇಳಿದರು.

 

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನ ಕೊಡುಗೆಯಿದೆ ಎಂದ ಅವರು,ಕೋವಿಡ್-19 ವಿರುದ್ಧ ಲಸಿಕೆ ಕಂಡು ಹಿಡಿಯಲು ಭಾರತದ ಪ್ರಯೋಗಶಾಲೆಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳ ಮೇಲೆ ಇಡೀ ಜಗತ್ತೇ ಕಣ್ಣಿರಿಸಿದೆ ಎಂದರು. ಆದರೆ ವೈರಸ್‌ನ್ನು ಮಣಿಸುವ ಮುನ್ನ ಇನ್ನಷ್ಟು ದೂರ ಪಯಣಿಸ ಬೇಕಿದೆ ಎಂದು ಎಚ್ಚರಿಕೆ ನೀಡಿದ ಮೋದಿ,'ಮುಂಬರುವ ದಿನಗಳಲ್ಲಿ ಪರಿಸ್ಥಿತಿಯು ಇನ್ನಷ್ಟು ಹದಗೆಡಬಾರದು ಎನ್ನುವುದು ನಮ್ಮ ಗಮನದಲ್ಲಿರಬೇಕು 'ಎಂದರು.

 

ಕೊರೋನ ವೈರಸf ಲಾಕ್‌ಡೌನ್‌ನಿಂದಾಗಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿದವರೆಂದರೆ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ಎಂದ ಪ್ರಧಾನಿ,ಅವರ ಬವಣೆಗಳನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇಡೀ ದೇಶವೇ ಅವರ ಸಂಕಷ್ಟ-ಯಾತನೆಗಳನ್ನು ಹಂಚಿಕೊಳ್ಳುತ್ತಿದೆ ಎಂದರು.

 

ಕೊರೋನ ವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಹಾಲಿವುಡ್‌ನಿಂದ ಹರಿದ್ವಾರದವರೆಗಿನ ಜನರು ಯೋಗದತ್ತ ಗಂಭೀರ ಗಮನವನ್ನು ನೀಡುತ್ತಿದ್ದಾರೆ ಎಂದ ಮೋದಿ, ಜೂ.21ರಂದು ಆಚರಣೆಯಾಗಲಿರುವ ವಿಶ್ವ ಯೋಗ ದಿನವನ್ನು ಉಲ್ಲೇಖಿಸಿ,ಯೋಗವು ಸಮುದಾಯ,ನಿರೋಧಕ ಶಕ್ತಿ ಮತ್ತು ಏಕತೆಗೆ ಒಳ್ಳೆಯದು. ಕೊರೋನ ವೈರಸ್ ಶ್ವಾಸಕೋಶಗಳ ಮೇಲೆ ದಾಳಿಯಿಡುವುದರಿಂದ ಯೋಗಾಭ್ಯಾಸ ಈಗ ಇನ್ನಷ್ಟು ಮಹತ್ವವನ್ನು ಪಡೆದುಕೊಂಡಿದೆ. ಶ್ವಾಸಕೋಶಗಳನ್ನು ಸದೃಢಗೊಳಿಸುವ ಹಲವಾರು ಪ್ರಾಣಾಯಾಮಗಳು ಯೋಗದಲ್ಲಿದ್ದು,ಅದರ ಲಾಭದಾಯಕ ಪರಿಣಾಮಗಳನ್ನು ನಾವು ಸುದೀರ್ಘ ಕಾಲದಿಂದಲೂ ನೋಡುತ್ತಿದ್ದೇವೆ. ಇವೆಲ್ಲ ಕಾಲದ ಪರೀಕ್ಷೆಯಲ್ಲಿ ಗೆದ್ದಿವೆ ಮತ್ತು ತಮ್ಮದೇ ಆದ ವಿಶಿಷ್ಟ ಮಹತ್ವ ಹೊದಿವೆ ಎಂದರು.

+

ಲಾಕ್‌ಡೌನ್ ನಿಧಾನವಾಗಿ ತೆರವುಗೊಳ್ಳುತ್ತಿರುವುದರಿಂದ ಜನರು ಪರಿಸರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಿ ಹೇಳಿದ ಅವರು,ಜೂ.5ರಂದು ಪರಿಸರ ದಿನದ ಸಂದರ್ಭದಲ್ಲಿ ಗಿಡಗಳನ್ನು ನೆಡುವಂತೆ ಜನರಿಗೆ ಸೂಚಿಸಿದರು. 'ನದಿಗಳು ಸ್ವಚ್ಛವಾಗಿರಲು, ಪ್ರಾಣಿಗಳು ಮತ್ತು ಪಕ್ಷಿಗಳು ಮುಕ್ತವಾಗಿ ಬದುಕುವ ಹಕ್ಕು ಹೊಂದಿರಲು ಮತ್ತು ಆಗಸವು ಮಾಲಿನ್ಯಮುಕ್ತವಾಗಿರಲು ನಾವು ನಿಸರ್ಗದೊಂದಿಗೆ ಸೌಹಾರ್ದತೆಯಲ್ಲಿ ಬದುಕುವ ಸ್ಫೂರ್ತಿಯನ್ನು ಹೊಂದಿರಬೇಕು 'ಎಂದರು.

 

Find out more: