ಕೊರೋಣಾ ವೈರಸ್ ನಿಮದಾಗಿ ಇಡೀ ದೇಶವೇ ಳಾಕ್ ಡೌನ್ ಆದ ಸಂದರ್ಭದಲ್ಲಿ ಭಾರತದಲ್ಲಿದ್ದ ಎಲ್ಲಾ ಕೈಗಾರಿಕೆಗಳನ್ನು ಮುಚ್ಚಲಾಗಿತ್ತು, ಇದರಿಂದಾಗಿ ಈ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಕಾರ್ಮಿಕರು ಕೆಲಸವನ್ನು ಕಳೆದುಕೊಂಡು ಬೀದಿಗೆ ಬಿದ್ದರು. ಇದರಿಂದಾಗಿ ಕಾರ್ಖಾನೆಗಳಲ್ಲಿ ಉತ್ಪಾದನೆಯಿಲ್ಲದೆ ಯಾವುದೇ ಮಾರಾಟವಿಲ್ಲದೆ ದೇಶಕ್ಕೆ ಬೊಕ್ಕಸಕ್ಕೆ ಸಾಕಷ್ಟು ಕೋಟ್ಯಾಂತರ ರೂಗಳ ನಷ್ಟವಾಗಿತ್ತು. ಇದನ್ನು ಸರಿದೂಗಿಸುವ ಸಲುವಾಗಿ ಭಾರತವನ್ನು ಹಂತ ಹಂತವಾಗಿ ಲಾಕ್ ಡೌನ್ ಅನ್ನು ತೆರವು ಗೊಳಿಸುತ್ತಾ ಕಾರ್ಖಾನೆಗಳು, ಉದ್ದಿಮೆಗಳು ಕೆಲಸವನ್ನು ನಿರ್ವಹಿಸುವಂತೆ ಅವಕಾಶ ಮಾಡಿಕೊಟ್ಟಿತ್ತು.
ಆದರೆ ಈಗ ದೇಶದಲ್ಲಿ ಲಾಕ್ ಡೌನ್ ಅನ್ನು ಸಂಪೂರ್ಣವಾಗಿ ತೆರವು ಗೊಳಿಸುತ್ತಿರುವುದರಿಂದ ಈಗ ಕುಸಿದಿದ್ದ ಭಾರತದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಸಾಕಷ್ಟು ಚರ್ಚೆಗಳನ್ನು ಮಾಡಲಾಗುತ್ತಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಉನ್ನತ ಕೈಗಾರಿಕಾ ಸಂಸ್ಥೆಗಳ ಜೊತೆಗೆ ಸಭೆ ಕರೆದು ಚರ್ಚೆ ನಡೆಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಭಾರತದ ಆರ್ಥಿಕತೆ ಕುಗ್ಗಿದೆ, ಅದನ್ನು ಮೇಲೆತ್ತಲು ಏನೆಲ್ಲಾ ಪ್ರಯತ್ನಗಳನ್ನು ನಡೆಸಬೇಕು ಎನ್ನುವ ಕುರಿತು ಮಾತನಾಡಿದರು. ಉದ್ದೇಶ, ಸೇರ್ಪಡೆ,ಹೂಡಿಕೆ, ಮೂಲ ಸೌಕರ್ಯ, ನಾವೀನ್ಯತೆ ಅಥವಾ ಸಂಶೋಧನೆ ಅತಿಮುಖ್ಯವಾಗಿರುತ್ತದೆ ಎಂದರು.
ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು ಈ ರೀತಿಯ ಆನ್‌ಲೈನ್ ಸಭೆಗಳು ಕೊವಿಡ್ 19 ರೋಗ ಬಂದಾಗಿನಿಂದ ಸಾಮಾನ್ಯವಾಗಿಬಿಟ್ಟಿದೆ.
-ಭಾರತದ ಸಂಶೋಧನೆ, ಉದ್ಯಮಿಗಳು ನಿಮ್ಮನ್ನೇ ನಂಬಿದ್ದೇನೆ ನಿಮ್ಮೆಲ್ಲರ ಸಹಕಾರದಿಂದ ಆರ್ಥಿಕತೆ ಮರುಸ್ಥಾಪನೆ ಸಾಧ್ಯ.
ಕೊರೊನಾ ವೈರಸ್ ನಮ್ಮನ್ನು ನಿಧಾನಗತಿಯಲ್ಲಿ ಸಾಗುವಂತೆ ಮಾಡಿದೆ, ಆದರೆ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಆರ್ಥಿಕತೆ ಪುನರಾರಂಭಗೊಳ್ಳಲಿದೆ. ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಡಬೇಕು, ನಾವು ಕೇವಲ ಭೌದ್ಧಿಕ ಸಂಪನ್ಮೂಲಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ, ಆದರೆ ಮಾನವ ಸಂಪನ್ಮೂಲಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
-ಉದ್ದೇಶ, ಸೇರ್ಪಡೆ,ಹೂಡಿಕೆ, ಮೂಲ ಸೌಕರ್ಯ, ನಾವೀನ್ಯತೆ ಅಥವಾ ಸಂಶೋಧನೆ ಅತಿಮುಖ್ಯವಾಗಿರುತ್ತದೆ. ಆರ್ಥಿಕತೆಯನ್ನು ಬಲಗೊಳಿಸುವ ಮೂಲಕ ದೇಶವನ್ನು ಬಲಗೊಳಿಸುವ ಅಗತ್ಯವಿದೆ ಎಂಎಸ್‌ಎಂಇಗೆ ಸಾಧ್ಯವಾದಷ್ಟು ಸಹಾಯ ಮಾಡಲಾಗುತ್ತದೆ, ಅದನ್ನು ಮೊದಲು ಬಲಗೊಳಿಸುವ ಅಗತ್ಯವಿದೆ.ಭಾರತದ ಆರ್ಥಿಕತೆಯ ಮೂಲ ಈ ಎಂಎಸ್‌ಎಂಇಗಳಾಗಿವೆ. ಎಲ್ಲಾ ವಿಧದಲ್ಲೂ ಸಹಾಯ ಮಾಡಲಾಗುತ್ತದೆ. ಭಾರತದಲ್ಲಿ ವಸ್ತುಗಳನ್ನು ಹೆಚ್ಚು ಬಳಸಿ, ಆದಷ್ಟು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದು ಮೋದಿ ಕರೆ ನೀಡಿದ್ದಾರೆ.