ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ಆದಾಯದ ಮೂಲವೆಲ್ಲವೂ ಬಂದ್ ಆಗಿ ಪಾತಾಳಕ್ಕೆ ಕುಸಿದಿದ್ದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ, ದೇಶವನ್ನು ಲಾಕ್ ಡೌನ್ ಇಂದ ನಿಧಾನವಾಗಿ ಸಡಿಲಿಕೆಯನ್ನು ಮಾಡುತ್ತಾ ವ್ಯಾಪಾರ ಸೇವಾರಂಗಗಳಿಗೆ, ಕಾರ್ಖಾನೆಗಳು,ಉದ್ದಿಮೆಗಳಿಗೆ ವಿನಾಯಿತಿಯನ್ನು ನೀಡಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಯಿತು, ಈ ಮೂಲಕ ಸರ್ಕಾರ ನಿಧಾನವಾಗಿ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದೆ. ಇದರ ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವ ಉದ್ದೇಶದಿಂದ ಕೆಲವು ಆರ್ಥಿಕ ಪ್ಯಾಕೇಜ್ ಗಳನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಈಗ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು 5 ಸೂತ್ತ್ರಗಳನ್ನು ನೀಡಿದ್ದಾರೆ. ಅಷ್ಟಕ್ಕೂ ಮೋದಿ ತಿಳಿಸಿದ ಆ 5 ಸೂತ್ರಗಳು ಯಾವುದು ಗೊತ್ತಾ..?
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಕೈಗಾರಿಕಾ ರಂಗಕ್ಕೆ ಪ್ರಧಾನಿ ಮೋದಿ 5 “ಐ’ಗಳ ಸೂತ್ರ ನೀಡಿದ್ದಾರೆ. ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಸಂಸ್ಥೆಯ 125ನೇ ವಾರ್ಷಿಕೋತ್ಸವ ಸಮ್ಮೇಳನವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿ ,inclusion (ಉದ್ದೇಶ), inclusion (ಒಳಗೊಳ್ಳುವಿಕೆ), investment (ಹೂಡಿಕೆ), infrastructure (ಮೂಲ ಸೌಕರ್ಯ), innovation (ಆವಿಷ್ಕಾರ) ಎಂಬ ಐದು ಅಂಶಗಳ ಸೂತ್ರ ಅಳವಡಿಸಿಕೊಂಡಲ್ಲಿ ಆರ್ಥಿಕ ಬೆಳವಣಿಗೆಯ ವೇಗವನ್ನು ಮತ್ತೆ ಹೆಚ್ಚಿಸಬಹುದು ಎಂದು ತಿಳಿಸಿದರು.
ದೇಶದ ಆರ್ಥಿಕ ಬೆಳವಣಿಗೆ ಖಂಡಿತ ಚೇತರಿಕೆ ಕಾಣುತ್ತದೆ. ಕಠಿನ ಪರಿಶ್ರಮಪಡಲು ಈ ದೇಶದ ಉದ್ಯಮ ರಂಗ ಸಿದ್ಧವಿದೆ. ಛಲಬಿಡದೆ ದುಡಿಯುವಂಥ ಜನರು ನಮ್ಮಲ್ಲಿದ್ದಾರೆ. ಹೀಗಿರುವಾಗ ನಾವು ಏಕೆ ಹೆದರಬೇಕು ಎಂದು ಪ್ರಶ್ನಿಸಿದ್ದಾರೆ.
ಮೊದಲಿಗೆ ಕೋವಿಡ್-19 ನಮ್ಮ ಆರ್ಥಿಕ ವೇಗವನ್ನು ತಡೆಯಿತು. ಆದರೆ ಈಗ ನಾವು ಅದರ ಹರಡುವಿಕೆ ವೇಗವನ್ನು ತಡೆದಿದ್ದೇವೆ ಎಂದ ಪ್ರಧಾನಿ, ಸ್ಥಳೀಯ ಮಟ್ಟದ ಸ್ಫೂರ್ತಿಯ ಚಿಲುಮೆಯಾಗಿ ಎಂದು ಕೈಗಾರಿಕೆಗಳಿಗೆ ಕರೆ ನೀಡಿದರು. ವಿಶ್ವದ ಕೈಗಾರಿಕಾ ರಂಗ ತನಗೊಂದು ಅತ್ಯುತ್ತಮ ಜತೆಗಾರ ಸಿಗಬೇಕೆಂದು ಹಂಬಲಿಸುತ್ತಿದೆ. ಆ ಸ್ಥಾನವನ್ನು ತುಂಬುವ ಶಕ್ತಿ, ಸಂಪನ್ಮೂಲ ಮತ್ತು ಅರ್ಹತೆ ಭಾರತಕ್ಕಿದೆ. ಇದನ್ನು ಸರಿಯಾಗಿ ಬಳಸಿ ವಿಶ್ವಮಟ್ಟಕ್ಕೆ ಭಾರತೀಯ ಉದ್ಯಮಗಳು ಬೆಳೆಯಲಿ ಎಂದು ಹಾರೈಸಿದರು.
ಗ್ಲೋಬಲ್ ಸಪ್ಲೈ ಚೈನ್‌ನಲ್ಲಿ ಚೀನ ಹೊಂದಿರುವ ಆಧಿಪತ್ಯವನ್ನು ಕೊನೆಗಾಣಿಸುವಂತೆ ಪ್ರಧಾನಿ ಮೋದಿಯವರು ಭಾರತೀಯ ಕೈಗಾರಿಕೋದ್ಯಮಿಗಳಿಗೆ ಪರೋಕ್ಷವಾಗಿ ಕರೆ ನೀಡಿದ್ದಾರೆ. ಅದಕ್ಕಾಗಿ “ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದ ವರ್ಲ್ಡ್’ ಎಂಬ ಮೂಲಮಂತ್ರವನ್ನು ಎಲ್ಲ ಕೈಗಾರಿಕೆಗಳೂ ಮೈಗೂಡಿಸಿಕೊಳ್ಳಬೇಕು. ಜಾಗತಿಕ ರಂಗದಲ್ಲಿ ಗುರುತಿಸಿಕೊಳ್ಳುವ ಮುನ್ನ ನಾವು ದೇಶೀಯ ಸಪ್ಲೆ„ ಚೈನ್ ಅನ್ನು ಸಂಪೂರ್ಣ ಸ್ವಾವಲಂಬಿಯಾಗಿಸಬೇಕಿದೆ. ದೇಶದೊಳಗೆ ನಾವು ಇದನ್ನು ಸಾಧಿಸಿದರೆ ವಿಶ್ವಮಟ್ಟದಲ್ಲೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದ್ದಾರೆ.