ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಆದ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ದೇಶ ಅನ್ ಲಾಕ್ ಆಗುತ್ತಿರುವುದರಿಂದ ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕವನ್ನು ಈಗಾಗಲೇ ನಿರ್ಧಾರವನ್ನು ಮಾಡಲಾಗಿದೆ. ಆದರೆ ಈ ಕುರಿತು ಸಾಕಷ್ಟು ಪರ ವಿರೋಧಗಳು ಎದುರಾಗುತ್ತಿದ್ದರೂ ಕೂಡ ಶಿಕ್ಷಣ ಸಚಿವರು ಎದೆಗುಂದದೆ, ನಿರ್ಧರಿಸಿದ ದಿನಾಂಕದಂತೆ ಪರೀಕ್ಷೆಯನ್ನು ನಡೆಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಅಷ್ಡಕ್ಕೂ ಪರೀಕ್ಷೆಯನ್ನು ನಡೆಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಅಂತೀರ ಇಲ್ಲಿದೆ ನೋಡಿ.

 

ರಾಜ್ಯದಲ್ಲಿ ಜೂನ್ 25ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಲಿವೆ. ಒಂದು ವಿಶೇಷವಾದಂತ ಸನ್ನಿವೇಶದಲ್ಲಿ ಪರೀಕ್ಷೆ ನಡೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿರ್ಣಯ ಕೈಗೊಳ್ಳುವ ಮುನ್ನಾ ಎಲ್ಲಾ ವಲಯದ ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಜೂನ್ 25ರಿಂದ ಜುಲೈ 4ನೇ ತಾರೀಕಿನವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಮಕ್ಕಳ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

 

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಕಳೆದ 15 ದಿನಗಳಲ್ಲಿ 4700 ಕಿಲೋಮೀಟರ್ ಪ್ರವಾಸ ಮಾಡಿಕೊಂಡು ಬಂದಿದ್ದೇನೆ. ಮೈಕೋ ಲೆವೆಲ್ ಪ್ಲಾನಿಂಗ್ ಕೂಡ ನಮ್ಮ ಅಧಿಕಾರಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಮಾಡಿಕೊಂಡು ಬಂದಿದ್ದಾರೆ. ಪರೀಕ್ಷೆಗಾಗಿ ಎಲ್ಲಾ ಇಲಾಖೆಗಳು ಶಿಕ್ಷಣ ಸಂಸ್ಥೆಯ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಸಚಿವರು, ಜಿಲ್ಲಾ ಪಂಚಾಯ್ತಿ ಸದಸ್ಯರು ಪರೀಕ್ಷೆ ಸಾಂಗವಾಗಿ ನಡೆಯಬೇಕು ಎಂದು ಸಹಕಾರ ನೀಡಿದ್ದಾರೆ ಎಂದರು

 

8.5 ಲಕ್ಷ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಭಾರತ್ ಸ್ಕೌಟ್ ಮಾಸ್ಕ್ ವಿತರಿಸುತ್ತಿದೆ. ಇದಲ್ಲದೇ ಇತರೆ ಸಂಘ-ಸಂಸ್ಥೆಗಳು ಮಾಸ್ಕ್ ವಿತರಿಸುವುದಾಗಿ ಮುಂದೆ ಬಂದಿವೆ. ಪರೀಕ್ಷಾ ಹಾಲ್ ಗೆ ಮಕ್ಕಳು ಪ್ರವೇಶಿಸುವ ವೇಳೆ ಸ್ಯಾನಿಂಟೈಸ್ ಮಾಡಲಾಗುತ್ತದೆ. ಒಂದು ವೇಳೆ ಯಾವುದೇ ಮಗುವಿಗೆ ಅನಾರೋಗ್ಯ ಕಂಡು ಬಂದರೇ ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಿ ಬರೆಸುವ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ವ್ಯವಸ್ಥೆಗಾಗಿ ಮಕ್ಕಳ ವಿವರ ಪಡೆಯಲಾಗಿದೆ. ಯಾರು ಹೇಗೆ ಪರೀಕ್ಷೆಗೆ ಬರುತ್ತಾರೆ ಎಂಬ ಮಾಹಿತಿ ಪಡೆಯಲಾಗಿದೆ. ವಾಹನ ವ್ಯವಸ್ಥೆ ಬೇಕಿರುವ ಮಕ್ಕಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಕ್ಕಳನ್ನು ಕರೆದುಕೊಂಡು ಬರಲು ಖಾಸಗಿ ವಾಹನಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ರಾಜ್ಯದಲ್ಲಿ ಒಂದೇ ಒಂದು ಮಗು ಸಾರಿಗೆ ವ್ಯವಸ್ಥೆಯಿಂದ ಪರೀಕ್ಷೆ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

 

ಇದರ ಜೊತೆಗೆ ಎಲ್ ಕೆ ಜಿ ಮತ್ತು ಯುಕೆಜಿ, ಪ್ರಾಥಮಿಕ ಹಂತದ ತರಗತಿಗಳಿಗೆ ಈ ಕೂಡಲೇ ಆನ್ ಲೈನ್ ಟೀಚಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಕ್ಲಾಸ್ ನಿಲ್ಲಿಸಬೇಕು. ಜೊತೆಗೆ ಆನ್ ಲೈನ್ ಟೀಚಿಂಗ್ ಹೆಸರಿನಲ್ಲಿ ಫೀಸ್ ತಗೊಳ್ಳೋದು ಕೂಡ ನಿಲ್ಲಿಸಬೇಕು ಎಂದು ಖಡಕ್ ಸಂದೇಶವನ್ನು ನೀಡಿದರು.

 

 

 

 

Find out more: