ಕೆಲವು ದಿನಗಳ ಹಿಂದೆ ನೇಪಾಳ ಭಾರತದ ಕೆಲವು ಪ್ರದೇಶಗಳನ್ನು ತಮ್ಮದೇ ಎಂದು ಉಲ್ಲೇಖಿಸಿ ನಕ್ಷಯನ್ನು ಬಿಡುಗಡೆಯನ್ನು ಮಾಡಲಾಗಿತ್ತು. ಇದರಿಂದಾಗಿ ಭಾರತ ಮತ್ತು ನೇಪಾಳದ ನಡುವೆ ಸಂಘರ್ಷ ಉಂಟಾಗಿದೆ. ಈ ವಿಷಯದ ಕುರಿತಾಗಿ ಭಾರತೀಯ ವಿದೇಶಾಂಗದ ಸಚಿವಾಲಯದ ವಕ್ತಾರರೊಬ್ಬರು ತಮ್ಮ ಹೇಳಿಕೆಯ ಮೂಲಕ ನೇಪಾಳಕ್ಕೆ ಚಾಟಿ ಬೀಸಿದ್ದಾರೆ. ಅಷ್ಟಕ್ಕೂ ವಕ್ತಾರರು ಹೇಳಿದ ಹೇಳಿಕೆಗಳೇನು..?
ಭಾರತಕ್ಕೆ ಸೇರಿದ ಕಲಾಪಾನಿ, ಲಿಪುಲೆಕ್ ಮತ್ತು ಲಿಂಪುಯಾಡುರಾ ಪ್ರದೇಶಗಳನ್ನು ತಮ್ಮದೇ ಎಂದು ಉಲ್ಲೇಖಿಸಿ ನೇಪಾಳದ ಸಂಸತ್ತು ಹೊಸ ನಕ್ಷೆಯನ್ನು ಅನುಮೋದಿಸಿದೆ. ನೇಪಾಳ ಈ ಕ್ರಮಕ್ಕೆ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿದೆ. ನೇಪಾಳ ಸರ್ಕಾರದ ಕ್ರಮ ಸರಿಯಾದುದಲ್ಲ ದೇಶವು ಐತಿಹಾಸಿಕ ಸಂಗತಿಗಳನ್ನು ನಿರ್ಲಕ್ಷಿಸಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿಕೆ ನೀಡಿದ್ದಾರೆ.
ಭಾರತದ ಪ್ರದೇಶಗಳನ್ನು ತಮ್ಮದು ಎಂದು 'ನೇಪಾಳದ ಕೆಳಮನೆ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ. ಅದು ನಾವು ಈಗಾಗಲೇ ನಮ್ಮ ನಕ್ಷೆಯಲ್ಲಿ ಈ ಕುರಿತಾಗಿ ಸ್ಪಷ್ಟಪಡಿಸಿದ್ದೇವೆ. 'ನೇಪಾಳವು ಐತಿಹಾಸಿಕ ಸಂಗತಿಗಳು ಮತ್ತು ಪುರಾವೆಗಳನ್ನು ನಿರ್ಲಕ್ಷಿಸುವುದು ಮತ್ತು ಪ್ರದೇಶಗಳನ್ನು ಕೃತಕವಾಗಿ ಹಕ್ಕು ಸಾಧಿಸುವುದು ಸಮರ್ಥನೀಯವಲ್ಲ' ಎಂದು ಅವರು ಹೇಳಿದರು. ಗಡಿಯಾಚೆಗಿನ ಮಾತುಕತೆಯ ವಿಷಯದ ಬಗ್ಗೆ ನೇಪಾಳ ಕನಿಷ್ಠ ತಿಳುವಳಿಕೆಯನ್ನು ಉಲ್ಲಂಘಿಸಿದೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ.
ವಿವಾದಾತ್ಮಕ ಹೊಸ ನಕ್ಷೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ನೇಪಾಳ ಕೆಳಮನೆ ಶನಿವಾರ ಅಂಗೀಕರಿಸಿದ್ದು, ಭಾರತದ ಪ್ರಾಂತ್ಯಗಳಾದ ಲಿಪುಲೆಕ್, ಕಲಾಪಾನಿ ಮತ್ತು ಲಿಂಪಿಯಾಡುರಾವನ್ನು ತಮ್ಮ ಪ್ರಾಂತ್ಯವೆಂದು ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತ ಪ್ರತಿಕ್ರಿಯಿಸಿದೆ. ಕಳೆದ ಐದು ವರ್ಷಗಳಲ್ಲಿ ಇದು ಎರಡನೇ ಬಾರಿಗೆ ಭಾರತ ಮತ್ತು ನೇಪಾಳ ನಡುವೆ ಸಂಘರ್ಷ ಉದ್ಭವಿಸಿದೆ.
ನೇಪಾಳದ ಸಂಸತ್ತಿನಲ್ಲಿ ಶನಿವಾರ ಮಸೂದೆ ಕುರಿತು ಚರ್ಚೆಯ ವೇಳೆ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಉಪೇಂದ್ರ ಅವರು ಮಹಾಕಾಳಿ ಒಪ್ಪಂದಕ್ಕೂ ತಿದ್ದುಪಡಿ ತರಬೇಕು ಎಂದು ಹೇಳಿದರು. ಆದರೆ, ಇದನ್ನು ಸ್ಪೀಕರ್ ಒಪ್ಪಲಿಲ್ಲ. ಸಮಾಜವಾದಿ ಪಕ್ಷದ ಸಂಸದ ಸರಿತಾ ಗಿರಿ ಮಾತ್ರ ಈ ಪ್ರಸ್ತಾಪಗಳನ್ನು ಒಪ್ಪಿಕೊಂಡರು.
ಮತ್ತೊಂದೆಡೆ, ನೇಪಾಳದೊಂದಿಗಿನ ಸಂಘರ್ಷವನ್ನು ಭಾರತ ಎದುರಿಸುತ್ತಿದೆ. ಇತ್ತೀಚೆಗೆ, ನೇಪಾಳ ಪೊಲೀಸರು ಗಡಿಗಳಲ್ಲಿ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ್ದಾರೆ ಮತ್ತು ಒಬ್ಬ ಭಾರತೀಯನನ್ನು ಕೊಂದಿದ್ದಾರೆ. ಘಟನೆ ಬಗ್ಗೆ ಭಾರತ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಸೇನಾ ಮುಖ್ಯಸ್ಥ ಎಂ.ಎಂ.ನಾರವನ್ ಕೂಡ ನೇಪಾಳದೊಂದಿಗೆ ಸಂಬಂಧ ಉತ್ತಮವಾಗಿದೆ ಮತ್ತು ಎಂದು ಹೇಳಿದರು.
ಭೌಗೋಳಿಕವಾಗಿ, ಧಾರ್ಮಿಕವಾಗಿ, ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಜನರ ನಡುವೆ ಉತ್ತಮ ಸಂಬಂಧಗಳಿವೆ ಮತ್ತು ಅವರು ಯಾವಾಗಲೂ ಆ ದೇಶದೊಂದಿಗೆ ಉತ್ತಮವಾದ ಸಂಬಂಧವನ್ನು ಬಯಸುತ್ತಾರೆ ಮತ್ತು ಭವಿಷ್ಯದಲ್ಲಿ ಅದನ್ನು ಮುಂದುವರಿಸುತ್ತಾರೆ ಎಂದು ನರವನನ್ ಪ್ರತಿಕ್ರಿಯಿಸಿದ್ದಾರೆ.