ಕೊರೋನಾ ವೈರಸ್ ಜಗತ್ತನ್ನೇ ಆಕ್ರಮಿಸಿ ಅಪಾರ ಸಾವುನೋವುಗಳಬನ್ನು ಉಂಟುಮಾಡಿ ಸಾಕಷ್ಟು ಜನರಲ್ಲಿ ಭಯವನ್ನುಮೂಡಿಸಿದೆ. ಇದರ ಜೊತೆಗೆ ಲಕ್ಷಾಂತರ ಮಂದಿ ಕೊರೋನಾ ಸೋಂಕಿನ ಕೂಪದಲ್ಲಿ ನರಳುತ್ತಿದ್ದಾರೆ, ಬೇರೆ ಬೇರೆ ದೇಶಗಳಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಆದರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ ಅದರಲ್ಲೂ ಕರ್ನಾಟಕದಲ್ಲಿ ಇನ್ನೂ ಕಡಿಮೆ ಇರುವುದು ರಾಜ್ಯದಲ್ಲಿ ಆತಂಕವನ್ನು ಕಡಿಮೆ ಮಾಡಿದೆ. ಈ ಕುರಿತು ರಾಜ್ಯದ ಮುಖ್ಯ ಮಂತ್ರಿ ಬಿ. ಎಸ್ ಯಡಿಯೂರಪ್ಪ ರಾಜ್ಯದ ಜನಕ್ಕೆ ಧೈರ್ಯವನ್ನು ಹೇಳಿದ್ದಾರೆ.
ರಾಜ್ಯದಲ್ಲಿ ಇವತ್ತಿನವರೆಗೂ 7,000 ಕೊರೋನಾ ಸೋಂಕಿತರ ಪೈಕಿ 3,955 ಜನ ಗುಣಮುಖರಾಗಿದ್ದಾರೆ. ಮರಣ ಪ್ರಮಾಣವು ಸಹ ಕರ್ನಾಟಕದಲ್ಲಿ ಕೇವಲ 1.2 ಪರ್ಸೆಂಟ್ ಇದೆ. ಹೀಗಾಗಿ ಜನ ಸಾಮಾನ್ಯರು ಕೊರೋನಾ ಕುರಿತು ಹೆಚ್ಚು ಭಯ ಪಡುವ ಅಗತ್ಯ ಇಲ್ಲ. ಆದರೆ, ಮುನ್ನೆಚ್ಚರಿಕೆಯಿಂದಿರುವುದು ಒಳ್ಳೆಯದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಚಿವರು ಮತ್ತು ರಾಜ್ಯದ ವಿವಿಧ ಇಲಾಖೆಯ ಮುಖ್ಯಸ್ಥರ ಜೊತೆಗೆ ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಯಡಿಯೂರಪ್ಪ, "ರಾಜ್ಯದಲ್ಲಿ ಇವತ್ತಿನವರೆಗೂ 7,000 ಕೊರೋನಾ ಸೋಂಕಿತರ ಪೈಕಿ 3,955 ಜನ ಗುಣಮುಖರಾಗಿದ್ದಾರೆ. ಹಾಗಾಗಿ ಜನ ಕೊರೋನಾ ಕುರಿತು ಭಯ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಮರಣ ಪ್ರಮಾಣವು ಸಹ ಕರ್ನಾಟಕದಲ್ಲಿ ಕೇವಲ 1.2 ಪರ್ಸೆಂಟ್ ಇದೆ. : ಕಲಬುರ್ಗಿಯಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಕಲ್ಲು ತೂರಾಟ; ಆಯಂಬುಲೆನ್ಸ್, ಪೊಲೀಸ್ ವಾಹನಗಳು ಜಖಂ
ಇನ್ನು ಕೊರೋನಾ ತಡೆಯಲು ಮುಖ್ಯವಾಗಿ ಮಾಸ್ಕ್ ಧರಿಸಿಬೇಕು ಈ ಹಿನ್ನೆಲೆಯಲ್ಲಿ ಸರ್ಕಾರ ಜನರಿಗೆ ಜಾಗೃಯಿ ಮೂಡಿಸಲು ಮಾಸ್ಕ್ ಡೇ ಮಾಡಲು ತೀರ್ಮಾನ ಮಾಡಲಾಗಿದೆ. ಇದೇ ಗುರುವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲ ಮಾಸ್ಕ್ ಡೇ ಆಚರಣೆಗೆ ನಿರ್ಧರಿಸಲಾಗಿದೆ ಬೆಂಗಳೂರಿನಲ್ಲಿ ನಡೆಯುವ ಜಾಗೃತಿಯಲ್ಲಿ ಕ್ರೀಡೆ, ಸಿನಿಮಾ ಗಣ್ಯರಿಂದ ಜಾಗೃತಿ ಮೂಡಿಸಲಾಗುವುದು. ಒಂದು ವೇಳೆ ಮಾಸ್ಕ್ ಧರಿಸದೆ ಹೋದ್ರೆ 200 ರೂಪಾಯಿ ದಂಡ ಹಾಕಲಾಗುವುದು "ಎಂದು ತಿಳಿಸಿದ್ದಾರೆ.