ಭಾರತ ಕೊರೋನಾ ವೈರಸ್ ನಿಂದ ಹೊರ ಬರಲು ಪ್ರಯತ್ನಿಸುತ್ತಿದ್ದರೆ ಇತ್ತ ಚೀನಾ ಗಡಿ ತಕರಾರನ್ನು ಶುರು ಮಾಡಿ ಭಾರತವನ್ನು ಕೆಣಕುವಂತಹ ಪ್ರಯತ್ನವನ್ನು ಮಾಡುತ್ತಿದೆ. ಈ ನಡುವೆ ಚೀನಾ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ಮಾಡಿದ್ದು ಇದರಿಂದ 20 ಮಂದಿ ಯೋಧರು ಹುತಾತ್ಮರಾಗಗಿದ್ದಾರೆ. ಚೀನಾದ ಈ ಪೈಶಾಚಿಕ ಕೃತ್ಯವನ್ನು ಹಲವು ರಾಷ್ಟ್ರಗಳು ಟೀಕಿಸಿವೆ, ಈ ದಾಳಿಯ ಕುರಿತು ಪ್ರಧಾನಿ ಮೋದಿ ಚೀನಾಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ,
ಹೌದು, ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ಕುರಿತು ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ''ಭಾರತ ಶಾಂತಿ ಬಯಸುತ್ತದೆ, ನಮ್ಮನ್ನು ಪ್ರಚೋದಿಸಿದರೆ, ಅದು ಯಾವುದೇ ಪರಿಸ್ಥಿತಿ ಇರಲಿ ನಾವು ಸಹ ಸೂಕ್ತ ಉತ್ತರ ನೀಡಲು ಸಮರ್ಪಕವಾಗಿದ್ದೇವೆ'' ಎಂದಿದ್ದಾರೆ.
ಕೊರೊನಾ ವೈರಸ್ ಕುರಿತು ಮುಖ್ಯಮಂತ್ರಿಗಳು ಜೊತೆ ಸಭೆ ನಡೆಸಿದಿ ಪ್ರಧಾನಿ ಮೋದಿ, ಸಭೆ ಆರಂಭಕ್ಕೂ ಮುನ್ನ ಹುತಾತ್ಮ ಯೋಧರಿಗೆ ಎರಡು ನಿಮಿಷಗಳ ಕಾಲ ಸಂತಾಪ ಸೂಚಿಸಿದ ನಂತರ ಮಾತನಾಡಿದ ಮೋದಿ ನಮ್ಮ ದೇಶದ ಜವಾನರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ. ನಮಗೆ ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯ.. ಭಾರತ ಶಾಂತಿಯನ್ನು ಬಯಸುತ್ತದೆ, ಆದರೆ ಪ್ರಚೋದಿಸಿದರೆ ಅದಕ್ಕೆ ತಕ್ಕ ಉತ್ತರವನ್ನೂ ಕೊಡಲು ತಯಾರಾಗಿದೆ ಎಂದು ಎಚ್ಚರಿಕೆ ನೀಡಿದರು.
ಜೊತೆಗೆ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂಥ ನಡೆಯನ್ನು ಯಾರಿಂದಲೂ ಸಹಿಸುವುದಿಲ್ಲ, ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವ ಮಾತೇ ಇಲ್ಲ ಅಂತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಬಲವಾದ ಶಬ್ದಗಳಲ್ಲಿ ಕುಟುಕಿದ್ದಾರೆ.
ಸೋಮವಾರ ರಾತ್ರಿ ಲಡಾಖ್‌ನ ಗಾಲ್ವಿನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಘರ್ಷಣೆ ಉಂಟಾಗಿತ್ತು. ಈ ಹಿಂಸಾತ್ಮಕ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಸೇನೆಯಲ್ಲೂ 40ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈವರೆಗೂ ಚೀನಾ ಸೇನೆ ಈ ಬಗ್ಗೆ ನಿಖರವಾದ ಮಾಹಿತಿ ಹಂಚಿಕೊಂಡಿಲ್ಲ.
ಭಾರತದ ರಕ್ಷಣ ರಾಜನಾಥ್ ಸಿಂಗ್ ಸಹ ಈ ಘಟನೆ ಬಗ್ಗೆ ಟ್ವೀಟ್ ಮಾಡಿ ''ಗಾಲ್ವಾನ್ ಕಣಿವೆ ಪ್ರದೇಶದ ನಡೆದ ಘಟನೆಯಲ್ಲಿ ಹುತಾತ್ಮರಾದ ಯೋಧರ ಸಾವು ನಮಗೆ ತೀವ್ರ ನೋವು ತಂದಿದೆ. ನಮ್ಮ ಸೈನಿಕರು ಗಡಿ ಕರ್ತವ್ಯದಲ್ಲಿ ಧೈರ್ಯ ಮತ್ತು ಶೌರ್ಯದಿಂದ ಹೋರಾಡಿದರು. ಭಾರತದ ಸೈನ್ಯದ ಉನ್ನತಮಟ್ಟದ ಸಂಪ್ರದಾಯದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ'' ಎಂದು ಸಂತಾಪ ಸೂಚಿಸಿದ್ದಾರೆ.