ಭಾರತದ ಲಡಾಕ್ ಗಾಲ್ವಾನ್ ಕಣಿವೆ ಭಾಗದಲ್ಲಿ ಚೀನಾ ಗಡಿ ಕ್ಯಾತೆಯನ್ನು ಶುರುಮಾಡಿ ಭಾರತೀಯರ ಮೇಲೆ ದಾಳಿಯನ್ನು ಮಾಡಿ 20ಭಾರತೀಯ ಸೈನಿಕರನ್ನು ಕೊಲ್ಲಲಾಗಿದೆ. ಇದಕ್ಕೆ ಪ್ರತಿಯಾಗಿ ಪ್ರಧಾಣಿ ನರೇಂದ್ರ ಮೋದಿ ತಿರುಗೇಟನ್ನು ನೀಡುವುದಾಗಿ ತಿಳಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ಗಡಿಭಾಗದಲ್ಲಿ ಸೇನೆ ಯುದ್ದಮಾಡಲು ಸಶಸ್ತ್ರಗಳ ಮೂಲಕ ಸನ್ನದ್ದಾಗಿದೆ.
ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ವಿರುದ್ಧ ಕ್ರೌರ್ಯ ನಡೆಸಿ 20 ಜನರನ್ನು ಬಲಿ ಪಡೆದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ)ಗೆ ಸಡ್ಡು ಹೊಡೆಯಲು ಭಾರತೀಯ ಸೇನೆಯ ಮೂರು ಸಶಸ್ತ್ರ ಪಡೆಗಳು ಸರ್ವಸನ್ನದ್ದವಾಗಿವೆ.
ಇದೇ ವೇಳೆ ಭಾರತೀಯ ಸೇನಾಪಡೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತಾಗಿ 500 ಕೋಟಿ ರೂ.ಗಳ ಅತ್ಯಾಧುನಿಕ ಯುದ್ದಾಸ್ತ್ರಗಳನ್ನು ಖರೀದಿಸಲು ಸಮ್ಮತಿ ನೀಡಿದೆ. ಇದರೊಂದಿಗೆ ಭಾರತೀಯ ಸೇನೆಯಲ್ಲಿ ರಣೋತ್ಸಾಹ ಪುಟಿದೆದ್ದಿದೆ. ಕುತಂತ್ರಿ ಚೀನಾಗೆ ತಕ್ಕ ಪಾಠ ಕಲಿಸಲು ಆರ್ಥಿಕ , ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಲು ದಿಟ್ಟ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಇಂಡೋ ಚೀನಾ ಗಡಿಭಾಗದಲ್ಲಿ ಚೀನಾ ಸೇನಾ ಪಡೆಗಳಿಗೆ ಸಡ್ಡು ಹೊಡೆಯಲು ಮಹತ್ವದ ಕಾರ್ಯತಂತ್ರವೊಂದನ್ನು ರೂಪಿಸಿದೆ.
ಇದೇ ಕಾರಣಕ್ಕಾಗಿ ಗಡಿಭಾಗದಲ್ಲಿ ಜಾರಿಯಲ್ಲಿದ್ದ ಹಳೆಯ ಸೇನಾ ನಿಯಮಗಳನ್ನು ಕೇಂದ್ರ ಸರ್ಕಾರ ಮಾರ್ಪಡು ಮಾಡಿದ್ದು, ನಿನ್ನೆಯಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ. ವಿಶ್ವದ ಅತಿ ದೊಡ್ಡ ಸೇನಾಪಡೆ ಹೊಂದಿರುವ ಚೀನಾ ಆರ್ಮಿ ದುಸ್ಸಾಹಸಕ್ಕೆ ಮುಂದಾದರೆ ತಕ್ಕ ಶಾಸ್ತಿ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಭಾರತದ ಸೇನಾಪಡೆಗಳಿಗೆ ಪರಮಾಧಿಕಾರ ನೀಡಿದೆ.
ಅಲ್ಲದೆ 1999 ಮತ್ತು 2005ರಲ್ಲಿ ರೂಪಿಸಿದ್ದ ಗಡಿ ಪ್ರದೇಶಗಳಲ್ಲಿನ ಗರಿಷ್ಠ ಸಂಯಮ ನಿಯಮದಲ್ಲಿ ಮಹತ್ವದ ಮಾರ್ಪಾಡು ಮಾಡಿದೆ. ಚೀನಾದ ಪಿಎಲ್‍ಎ ಯೋಧರು ಗಡಿಭಾಗದಲ್ಲಿ ಉದ್ದಟತನ ತೋರಿದರೆ ಭಾರತೀಯ ಯೋಧರು ಈ ಹಿಂದಿನಂತೆ ಸಂವಾದದಿಂದ ವರ್ತಿಸುವ ಅಗತ್ಯವಿಲ್ಲ. ಬದಲಿಗೆ ಪೂರ್ಣ ಪ್ರಮಾಣದ ಶಸ್ತ್ರಾಸ್ತ್ರಗಳ ಬಳಕೆ ಮೂಲಕ ತಿರುಗೇಟು ನೀಡಲು ಸೇನಾಪಡೆಗಳಿಗೆ ಅಧಿಕಾರ ನೀಡಲಾಗಿದೆ.
ಈ ಹಿಂದೆ ಗಡಿಪ್ರದೇಶದ 2 ಕಿ.ಮೀ ಒಳಗೆ ಅನಗತ್ಯವಾಗಿ ಶಸ್ತ್ರಾಸ್ತ್ರಗಳನ್ನು ಮತ್ತು ಸ್ಫೋಟಕಗಳನ್ನು ಬಳಸದಂತೆ ಭಾರತೀಯ ಯೋಧರಿಗೆ ತಾಕೀತು ಮಾಡಲಾಗಿತ್ತು. ಆದರೆ ಹೊಸ ನಿಯಮಾವಳಿ ಪ್ರಕಾರ ಈ ನಿಯಮವನ್ನು ಹಿಂದಕ್ಕೆ ಪಡೆಯಲಾಗಿದ್ದು, ಗಡಿ ಸರಹದ್ದು ಪ್ರದೇಶಗಳಲ್ಲಿ ಚೀನಾ ಯೋಧರು ತಂಟೆ ಮಾಡದೆ ದಿಟ್ಟ ಪ್ರತ್ಯುತ್ತರ ನೀಡಲು ಅವಕಾಶ ನೀಡಲು ಭಾರತೀಯ ಯೋಧರಿಗೆ ಇನ್ನು ಮುಂದೆ ಚೀನಾದ ಯಾವುದೇ ದುಸ್ಸಾಹವನ್ನು ಸದೆಬಡೆಯಲು ಅಡ್ಡಿಯಾಗುವುದಿಲ್ಲ.
500 ಕೋಟಿ ರೂ. ತುರ್ತು ಶಸ್ತ್ರಾಸ್ತ್ರ: ಗಾಲ್ವಾನ್ ಕಣಿವೆ ಘಟನೆ ನಂತರ ಕೇಂದ್ರ ಸರ್ಕಾರ ಭಾರತೀಯ ಭೂ ಸೇನೆ ಮತ್ತು ನೌಕಾದಳಕ್ಕೆ ಅಗತ್ಯವಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತುರ್ತಾಗಿ ಖರೀದಿಸಲು 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಭಾರತದ 3 ಶಸ್ತ್ರಸ್ತ್ರ ಪಡೆಗಳ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಅಮೆರಿಕ, ಫ್ರಾನ್ಸ್ , ಇಸ್ರೇಲ್ ಸೇರಿದಂತೆ ಕೆಲ ದೇಶಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಖರೀದಿಸಲು ಇದರಿಂದ ಹಾದಿ ಸುಗಮವಾಗಿದೆ. ಒಟ್ಟಾರೆ ಚೀನಾದ ಪಿಎಲ್‍ಎ ಆರ್ಮಿಗೆ ಪೂರ್ಣ ಬಲದಿಂದ ಸಡ್ಡು ಹೊಡೆಯಲು ಭಾರತೀಯ ಯೋಧರು ಯುದ್ದೋತ್ಸಾಹದೊಂದಿಗೆ ಸರ್ವ ಸನ್ನದ್ದರಾಗಿದ್ದಾರೆ.