ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಕೂಡ ಕೊರೋನಾ ಮಾತ್ರ ಯಾವುದಕ್ಕೂ ಜಗ್ಗದೆ ಮುಂದೆ ನಡೆಯುತ್ತಾ ಇಡೀ ದೇಶ ಮೂಲೆ ಮೂಲೆಯನ್ನು ತಲುಪಿದೆ, ಇದರಿಂದಾಗಿ ದೇಶದ ಜನರಲ್ಲಿ ಸಾಕಷ್ಟು ಆತಂಕ ಮೂಡಿದೆ, ಸಾಕಷ್ಟು ಜನರು ಕೊರೋನಾ ದಿಂದಾಗಿ ಇಡೀ ಜೀವನವನ್ನೇ ಕಳೆದುಕೊಂಡಿದ್ದಾರೆ. ಇದನ್ನು ತಡೆಯಲು ಸರ್ಕಾರ ನಾಲ್ಕು ಬಾರಿ ಲಾಕ್ ಡೌನ್ನು ಘೋಷಣೆಯನ್ನು ಮಾಡಲಾಗಿತ್ತು ಆದರೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿದ ಕಾರಣದಿಂದ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡಲಾಗಿತ್ತು. ಆದರೆ ಇದರಿಂದಾಗಿ ಕೊರೋನಾ ಹೆಚ್ಚಾದ ಹಿನ್ನಲೆ ಮತ್ತೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಷ್ಟಕ್ಕೂಆ ಮಾರ್ಗ ಸೂಚಿಯಲ್ಲಿ ಏನಿದೆ ಗೊತ್ತಾ…?
ಜುಲೈ 1-31ರನಡುವೆ ದೇಶಾದ್ಯಂತ 'ಅನ್ ಲಾಕ್ 2' ಜಾರಿಯಾಗಲಿದ್ದು ಇದಕ್ಕಾಗಿ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಗಳ ಪ್ರಕಾರ, ಶಾಲೆ, ಕಾಲೇಜುಗಳು ಜುಲೈ 31 ರವರೆಗೆ ತೆರ್ಯುವಂತಿಲ್ಲ. ಆನ್‌ಲೈನ್ / ದೂರಶಿಕ್ಷಣಕ್ಕೆ ಅನುಮತಿ ಇದ್ದು ಇದಕ್ಕೆ ಪ್ರೋತ್ಸಾಹವಿದೆ. ಕಂಟೈನ್‌ಮೆಂಟ್ ವಲಯಗಳಲ್ಲಿಯಥಾಸ್ಥಿತಿ ಜಾರಿಯಲ್ಲಿರಲಿದ್ದು ಅಗತ್ಯ ಚಟುವಟಿಕೆಗೆ ಮಾತ್ರ ಅನುಮತಿ ಸಿಕ್ಕಲಿದೆ. ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನಿಗದಿಪಡಿಸಲಾಗಿದೆ.
.ಪ್ರಸ್ತುತ ದೇಶದಲ್ಲಿ ಪ್ರಾದೇಶಿಕ ವಿಮಾನ ಹಾಗು ರೈಲು ಸಂಚಾರ ಮಾಡುತ್ತಿದೆ. ಆದರೆ ವಿದೇಶಿ ವಿಮಾನ ಸಂಚಾರ ಆರಂಭವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅಂತರರಾಷ್ಟ್ರೀಯ ವಿಮಾನ ಸಂಚಾರ ಹಾಗೂ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ ನೀಡಿಲ್ಲ.
ಅನ್‌ಲಾಕ್2ರಲ್ಲಿಯಲ್ಲಾದರೂ ಚಿತ್ರಮಂದಿರಗಳು, ಜಿಮ್‌ಗಳು, ಪೂಲ್‌ಗಳಿಗೆ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಚಿತ್ರಮಂದಿರಗಳು, ಜಿಮ್‌ಗಳು, ಪೂಲ್‌ಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ.
ಅನ್‌ಲಾಕ್2 ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು:-
* ಜುಲೈ 31ರವರೆಗೂ ಶಾಲೆಗಳು, ಕಾಲೇಜುಗಳು ತೆರೆಯುವಂತಿಲ್ಲ
* ಚಿತ್ರಮಂದಿರಗಳು, ಜಿಮ್‌ಗಳಿಗೂ ಅವಕಾಶ ಸಿಕ್ಕಿಲ್ಲ
* ಅಂತರರಾಷ್ಟ್ರೀಯ ವಿಮಾನಗಳು, ಮೆಟ್ರೋ ರೈಲು ಬಂದ್
* ರಾತ್ರಿ 10:00 ರಿಂದ ಬೆಳಿಗ್ಗೆ 5:00 ರವರೆಗೆ ರಾತ್ರಿ ಕರ್ಫ್ಯೂ ಜಾರಿ
* ಧಾರ್ಮಿಕ ಕೂಟಗಳ ಚಟುವಟಿಕೆಗಳು ನಿಷೇಧಿತವಾಗಿವೆ
* ಕಂಟೈನ್‌ಮೆಂಟ್ ಜೋನ್‌ನಲ್ಲಿದ್ದ ನಿಯಮಗಳು ಮುಂದುವರಿಕೆ
* ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಮತ್ತು ಇತರ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.
* ಆರೋಗ್ಯ ಸೇತು ಆಪ್ ಬಳಕೆ ಮಾಡಬೇಕಿದೆ.