ಕೊರೋನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಎರಡು ಸವಾಲುಗಳು ಸರ್ಕಾರಗಳ ಮುಂದಿವೆ. ಕಳೆದ ತಿಂಗಳವರೆಗೂ ಸತತವಾಗಿ ಲಾಕ್ಡೌನ್ ಮಾಡಿದ ಪರಿಣಾಮ ಆರ್ಥಿಕ ಪರಿಸ್ಥಿತಿ ಜರ್ಝರಿತಗೊಂಡಿತ್ತು. ಅನ್ಲಾಕ್ ಡೌನ್ ಘೋಷಣೆಯಾದಾಗಿನಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಆದರೆ ಕೊರೋನ ವೈರಸ್ ದಿದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾಕಷ್ಟು ಕ್ರಮವನ್ನು ತೆಗೆದುಕೊಳ್ಳಲೇ ಬೇಕು ಹಾಗಾಗಿ ಸೋಮವಾರ ಕೇಂದ್ರ ಸರ್ಕಾರ ಎರಡನೇ ಅನ್ಲಾಕ್ ಅವಧಿಗೆ ಪ್ರಕಟಿಸಿದ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ಧಾರೆ. ಅಷ್ಟಕ್ಕೂ ಈ ಅನ್ ಲಾಕ್ ಮಾರ್ಗ ಸೂಚಿಯಲ್ಲಿ ಇರುವ ಅಂಶಗಳೇನು ಗೊತ್ತಾ..?
ಜುಲೈ 1ರಿಂದ 31ರವರೆಗೆ ಅನ್ಲಾಕ್ 2 ಜಾರಿಯಲ್ಲಿರಲಿದೆ. ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಕಡೆ ಬಹುತೇಕ ಅನ್ಲಾಕ್ ಆಗುವುದು ಮುಂದುವರಿಯಲಿದೆ. ಆದರೆ, ಚಿತ್ರಮಂದಿರ, ಜಿಮ್ ಇತ್ಯಾದಿಗಳಿಗೆ ಜುಲೈ 31ರವರೆಗೆ ಬಂಧಮುಕ್ತಿ ಇರುವುದಿಲ್ಲ. ಶಾಲಾ ಕಾಲೇಜುಗಳಿಗೂ ಅವಕಾಶ ಇರುವುದಿಲ್ಲ. ಕಂಟೈನ್ಮೆಂಟ್ ಜೋನ್ಗಳಲ್ಲಿ ಜುಲೈ 31ರವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಯಲ್ಲಿರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಒಟ್ಟಾಗಿ ಕೊರೋನಾ ತಡೆಯೋಣ: ಬಿಎಸ್ ಯಡಿಯೂರಪ್ಪ ಜುಲೈ 31ರವರೆಗೆ ಇವುಗಳಿಗೆ ಇರುವುದಿಲ್ಲ ಅವಕಾಶ:
1) ಶಾಲೆ, ಕಾಲೇಜು, ಕೋಚಿಂಗ್ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನ ತೆರೆಯಲು ಅವಕಾಶ ಇಲ್ಲ; ಆದರೆ, ಆನ್ಲೈನ್ ಶಿಕ್ಷಣ ಮುಂದುವರಿಸಬಹುದು. ಆದರೆ, ಸರ್ಕಾರಿ ತರಬೇತಿ ಸಂಸ್ಥೆಗಳು ಜುಲೈ 15ರಿಂದ ನಿಗದಿತ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲು ಅನುಮತಿ ಇರುತ್ತದೆ.
2) ಕೇಂದ್ರ ಗೃಹ ಇಲಾಖೆ ಅನುಮತಿಸದ ಹೊರತು ಯಾವುದೇ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಅವಕಾಶ ಇಲ್ಲ.
3) ಮೆಟ್ರೋ ರೈಲು ಇಲ್ಲ4) ಸಿನಿಮಾ ಮಂದಿರ, ಜಿಮ್, ಸ್ವಿಮಿಂಗ್ ಪೂಲ್, ಮನರಂಜನಾ ಪಾರ್ಕ್, ರಂಗ ಮಂದಿರ, ಬಾರ್, ಆಡಿಟೋರಿಯಂ, ಸಭಾಂಗಣ ಮೊದಲಾದ ಸ್ಥಳಗಳು.
5) ಹೆಚ್ಚು ಜನಸಂದಣಿ ಇರುವ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಕ್ರೀಡಾಕೂಟ, ಸಾಂಸ್ಕೃತಿ ಕಾರ್ಯಕ್ರಮ, ರಾಜಕೀಯ ಕಾರ್ಯಕ್ರಮ ಇತ್ಯಾದಿಗಳಿಗೆ ಅವಕಾಶ ಇಲ್ಲ.
ನೈಟ್ ಕರ್ಫ್ಯೂ: ರಾಜ್ಯಾದ್ಯಂತ ಎಲ್ಲಾ ಪ್ರದೇಶಗಳಲ್ಲೂ ರಾತ್ರಿ 8ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಟ್ಟುನಿಟ್ಟಿನ ನಿಷೇಧಾಜ್ಞೆ ಇರಲಿದೆ. ಈ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಹೊರತುಪಡಿಸಿ ಉಳಿದಂತೆ ಜನಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕಚೇರಿಗೆ ಕೆಲಸಕ್ಕೆ ಹೋಗುವವರು ತಮ್ಮ ವೇಳಾಪಟ್ಟಿಯನ್ನು ಕರ್ಫ್ಯೂ ಅವಧಿಗೆ ಪೂರಕವಾಗಿ ಬದಲಾಯಿಸಿಕೊಳ್ಳುವುದು.
ಸಂಡೇ ಲಾಕ್ಡೌನ್: ಜುಲೈ 5ರಿಂದ ಆಗಸ್ಟ್ 2ರವರೆಗೆ ಒಟ್ಟು ಐದು ಭಾನುವಾರದ ದಿನಗಳಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಇರಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಸರ್ಕಾರಿ ಕಚೇರಿಗಳಿಗೆ ವಾರಕ್ಕೆರಡು ದಿನ ರಜೆ: ಅಗತ್ಯ ಸೇವೆಗಳನ್ನ ಹೊರತುಪಿಸಿ ಜುಲೈ 10ರಿಂದ ಎಲ್ಲಾ ಸರ್ಕಾರಿ ಕಚೇರಿಗಳು ಆಗಸ್ಟ್ ಎರಡನೇ ವಾರದವರೆಗೆ ಪ್ರತೀ ಶನಿವಾರ ಮತ್ತು ಭಾನುವಾರ ಎರಡೂ ದಿನಗಳಂದು ಬಂದ್ ಮಾಡುವುದು.
ಕಂಟೈನ್ಮೆಂಟ್ ಜೋನ್ಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್:
ಕಂಟೈನ್ಮೆಂಟ್ ಜೋನ್ಗಳಲ್ಲಿ ಸಂಪೂರ್ಣ ಲಾಕ್ಡೌನ್ ಕ್ರಮ ಕಟ್ಟುನಿಟ್ಟಾಗಿ ಮುಂದುವರಿಯುತ್ತದೆ. ಅಗತ್ಯ ಸೇವೆ ಹೊರತುಪಡಿಸಿ ಬೇರಾವ ರೀತಿಯ ಜನಸಂಚಾರಕ್ಕೆ ಅವಕಾಶ ಇರದಂತೆ ನೋಡಿಕೊಳ್ಳಲಾಗುತ್ತದೆ. ಈ ಝೋನ್ನಿಂದ ಯಾರೂ ಹೊರಗೆ ಹೋಗದಂತೆ, ಹೊರಗಿನಿಂದ ಯಾರೂ ಒಳಗೆ ಬರದಂತೆ ನಿಗಾ ಇಡಲಾಗುತ್ತದೆ.
ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಕಂಟೈನ್ಮೆಂಟ್ ವಲಯಗಳನ್ನ ಗೊತ್ತು ಮಾಡಲಾಗುತ್ತದೆ. ಇಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್, ಮನೆ ಮನೆ ತಪಾಸಣೆ ಇತ್ಯಾದಿ ಕಾರ್ಯಗಳನ್ನ ನಡೆಸಲಾಗುತ್ತದೆ. ಈ ಕಂಟೈನ್ಮೆಂಟ್ ಜೋನ್ಗಳ ಹೊರಗೆ ನಿರ್ದಿಷ್ಟ ಅಂತರದಲ್ಲಿ ಬಫರ್ ಜೋನ್ಗಳನ್ನೂ ಗುರುತಿಸಿ ಬಿಗಿ ನಿಯಮಾವಳಿಗಳನ್ನ ಜಾರಿಗೆ ತರಲಾಗುತ್ತದೆ. ಬೆಂಗಳೂರು ನಗರವೊಂದರಲ್ಲೇ ಸದ್ಯಕ್ಕೆ 600ಕ್ಕೂ ಹೆಚ್ಚು ಕಂಟೈನ್ಮೆಂಟ್ ವಲಯಗಳಿವೆ.