ಟಿಕ್ ಟ್ಯಾಕ್ ಇದು ಭಾರತದಲ್ಲಿಯೇ ಭಾರೀ ಭಾರೀ ಜನಪ್ರಿಯತೆಯನ್ನು ಪಡೆದ ಒಂದು ತಂತ್ರಾಂಶ ಇದಾಗಿತ್ತು. ಇದರಲ್ಲಿ ಹಲವು ಂದಿ ತಮ್ಮ ಪ್ರತಿಭೆಯನ್ನು ಅನಾವರಣವನ್ನು ಮಾಡುವಂತಹ ವೇಧಿಕಯನ್ನಾಗಿ ಮಾಡಿಕೊಂಡಿದ್ದರು. ಇದರಿಂದ ಸಾಕಷ್ಟು ಕಲಾವಿದರು ಎಲ್ಲರಿಗೂ ಪರಿಚಿತರಾಗಿದ್ದಾರೆ. ಅದೆಷ್ಟೋ ಜನರಲ್ಲಿ ಸ್ತುಪ್ತವಾಗಿದ್ದ ಪ್ರತಿಭೆ ಮುಕ್ತವಾಗಿ ಹಲವರಿಗೆ ತಿಳಿಯುವಂತೆ ಮಾಡಿತ್ತು. ಈ ಮೂಲಕ ಅತೀ ಕಡಿಮೆ ಸಮಯದಲ್ಲಿ ಸಾಕಷ್ಟು ಪ್ರತಿಭೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿದ್ದರು. ಹಾಗಾಗಿ ಈ ಟಿಕ್ ಟ್ಯಾಕ್ ಅನ್ನು ಹಲವರು ತಮ್ಮ ಪ್ರತಿಭೆಯನ್ನು ಹೊರಹಾಕಲು ಹಾಗೂ ಮನರಂಜನೆಯನ್ನು ಪಡೆಯಲು ಇದನ್ನು ಬಳಸಲಾಗುತ್ತಿತ್ತು. ಈ ಟಿಕ್ ಟ್ಯಾಕ್ ನ ಮೂಲಕ ಚೀನ ಕೋಟಿ ಕೋಟಿ ಹಣವನ್ನು ಪಡೆದುಕೊಳ್ಳುತ್ತಿತ್ತು ಆದರೆ ಇಂದು ಟಿಕ್ ಟ್ಯಾಕ್ ನ ಮುಂದಿನ ಭವಿಷ್ಯ ಭಾರತದಲ್ಲಿ ಇಲ್ಲದಂತೆ ಮಾಡಿದೆ ಕೇಂದ್ರ ಸರ್ಕಾರ
ಹೌದು ಲಡಾಖ್ ಗಡಿ ಸಂಘರ್ಷದ ಬೆನ್ನಲ್ಲೇ ಭಾರತ ಸರ್ಕಾರ ಚೀನಾಗೆ ಡಿಜಿಟಲ್ ತಿರುಗೇಟು ನೀಡಿದ್ದು, ತುಂಬಾ ಪ್ರಖ್ಯಾತಿ ಪಡೆದಿದ್ದ ಟಿಕ್ಟಾಕ್ ಸೇರಿದಂತೆ ಚೀನಾ ನಿರ್ಮಿತ 59 ಆಯಪ್ಗಳನ್ನು ಸೋಮವಾರ ಬ್ಯಾನ್ ಮಾಡಿದೆ. ಬ್ಯಾನ್ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಗೂಗಲ್ ಆಯಂಡ್ ಆಯಪಲ್ ಆಯಪ್ ಸ್ಟೋರ್ನಿಂದ ಟಿಕ್ಟಾಕ್ ಆಯಪ್ ಅನ್ನು ಕಿತ್ತೊಗೆಯಲಾಯಿತು. ಆದರೆ, ಈಗಾಗಲೇ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಲಾಗಿದ್ದ ಟಿಕ್ಟಾಕ್ ಆಯಪ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು.
ಆದರೆ, ಅದು ಕೂಡ ಹೆಚ್ಚಿನ ಸಮಯ ಉಳಿಯಲು ಸಾಧ್ಯವಾಗಿಲ್ಲ. ಏಕೆಂದರೆ ಟಿಕ್ಟಾಕ್ ಆಯಪ್ ಇದೀಗ ಸಂಪೂರ್ಣ ಆಫ್ಲೈನ್ಗೆ ಹೋಗಿದೆ. ನೀವು ಟಿಕ್ಟಾಕ್ ಆಯಪ್ ಓಪನ್ ಮಾಡಿದರೆ 59 ಆಯಪ್ಗಳನ್ನು ಬ್ಯಾನ್ ಮಾಡಿದ ಸರ್ಕಾರದ ಆದೇಶದ ಕುರಿತ ಸೂಚನೆಯನ್ನು ತೋರಿಸುತ್ತದೆ. ಅದರ ಸಾರ ಈ ಕೆಳಕಂಡಂತಿದೆ.
ಆತ್ಮೀಯ ಬಳಕೆದಾರರೆ, 2020, ಜೂನ್ 29ರಂದು ಭಾರತ ಸರ್ಕಾರ ಟಿಕ್ಟಾಕ್ ಸೇರಿದಂತೆ 59 ಆಯಪ್ಗಳನ್ನು ಬ್ಯಾನ್ ಮಾಡುವ ನಿರ್ಧಾರ ತೆಗೆದುಕೊಂಡಿತು. ನಾವು ಭಾರತ ಸರ್ಕಾರದ ನಿರ್ದೇಶನವನ್ನು ಪಾಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ಸಮಸ್ಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಕ್ರಮವನ್ನು ತಿಳಿದುಕೊಳ್ಳಲು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭಾರತದಲ್ಲಿ ನಮ್ಮ ಎಲ್ಲ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು ನಮ್ಮ ಆದ್ಯತೆಯಾಗಿ ಉಳಿದಿದೆ ಎಂದು ತಿಳಿಸಿದೆ.
ಟಿಕ್ಟಾಕ್ನ ಅಧಿಕೃತ ವೆಬ್ಸೈಟ್ ಸಹ ದೀರ್ಘಕಾಲ ಉಳಿದಿಲ್ಲ. ಇದೀಗ ಟಿಕ್ಟಾಕ್. ಕಾಮ್ (tiktok.com) ವೆಬ್ಸೈಟ್ ಓಪನ್ ಮಾಡಿದರೆ, ಪೇಜ್ ನಾಟ್ ಫೌಂಡ್ ಎಂಬ ಸಂದೇಶದೊಂದಿಗೆ ಮೇಲಿನ ಸೂಚನೆಯನ್ನು ಸಹ ತೋರಿಸುತ್ತಿದೆ. (ಏಜೆನ್ಸೀಸ್)