ಕೊರೋನಾ ವಯರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಘುತ್ತಿರುವುದರಿಂದ ಲಾಕ್ ಡೌನ್ ಮಾಡುವ ಅವಶ್ಯಕತೆಗಳು ತುಂಬಾ ಇದ್ರೂ ಕೂಡ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ. ಹಾಗಾಗಿ ಪ್ರತಿ ಭಾನವಾರ ಲಾಕ್ ಡೌನ್ ಮಾಡಲು ಈಗಾಗಲೇ ಅನುಮತಿಯನ್ನು ನೀಡಲಾಗಿದೆ. ಇದರ ಜೊತೆಗೆ ಕೊರೋನಾವನ್ನು ತಡೆಯಲು ತಜ್ಞರ ತಂಡವೊಂದು ಹಾಫ್ ಲಾಕ್  ಡೌನ್ ಮಾಡಬಹುದು ಎಂದು ಸಲಹೆಯನ್ನು ನೀಡುತ್ತಿದೆ. ಅಷ್ಟಕ್ಕೂ ಈ ಹಾಫ್ ಲಾಕ್ ಡೌನ್ ಎಂದರೇನು..?

 

ರಾಜ್ಯ ರಾಜಧಾನಿಯಲ್ಲಿ ಪ್ರತಿದಿನವೂ ಒಂದು ಸಾವಿರಕ್ಕಿಂತ ಹೆಚ್ಚು ಕರೊನಾ ಸೋಂಕು ಪ್ರಕರಣಗಳು ವರದಿಯಾಗತೊಡಗಿದರೆ ಲಾಕ್‌ಡೌನ್ ಪುನಃ ಆರಂಭಿಸಬೇಕೆಂಬ ತಜ್ಞರ ಶಿಫಾರಸಿಗೆ ರಾಜ್ಯ ಸರ್ಕಾರ ಭಾಗಶಃ ಸಮ್ಮತಿ ನೀಡುವ ಸಾಧ್ಯತೆ ಇದೆ. ತಜ್ಞರ ಸಲಹೆಯಂತೆ ಸಂಪೂರ್ಣ ಲಾಕ್‌ಡೌನ್ ಮಾಡಿದರೆ ಸರ್ಕಾರಕ್ಕೆ ಬರಬೇಕಾದ ಆದಾಯ ಕುಂಠಿತಗೊಂಡು ಆರ್ಥಿಕತೆ ಹಳಿ ತಪ್ಪುತ್ತದೆ. ಆದ್ದರಿಂದ ಹಾಫ್ ಲಾಕ್‌ಡೌನ್ ಮಾಡುವುದು ಒಳಿತು ಎಂಬ ಅಭಿಪ್ರಾಯ ಕೇಳಿಬಂದಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಿರಿಯ ಸಚಿವರು ಒಪ್ಪಿಗೆ ನೀಡುವುದೊಂದೇ ಬಾಕಿ ಇದೆ ಎನ್ನಲಾಗಿದೆ. 

 

ಭಾನುವಾರದ ಪೂರ್ಣ ಲಾಕ್‌ಡೌನ್ ಇಂದಿನಿಂದ ಆರಂಭವಾಗಿದ್ದು, ಅದನ್ನು ಕನಿಷ್ಠ ಎರಡು ತಿಂಗಳ ಕಾಲ ಮುಂದುವರಿಸುವ ನಿರೀಕ್ಷೆ ಇದೆ. ಇದರ ಜತೆಗೇ ಹಾಫ್ ಲಾಕ್‌ಡೌನ್ ಪ್ರತಿದಿನ ಅನ್ವಯವಾಗುವಂತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದು ಸೋಮವಾರದಿಂದ ಅಥವಾ ಮಂಗಳವಾರದಿಂದ ಜಾರಿಯಾಗಬಹುದು ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

 

ಏನಿದು ಹಾಫ್ ಲಾಕ್‌ಡೌನ್: ಬೆಂಗಳೂರಿಗೆ ಪ್ರತಿದಿನ ಸುತ್ತಮುತ್ತಲಿನ ಜಿಲ್ಲೆಗಳಿಂದ ಲಕ್ಷಾಂತರ ಜನರು ನಾನಾ ಕೆಲಸಗಳಿಗಾಗಿ ಬರುತ್ತಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಜಿಲ್ಲೆಗಳಿಂದ ಜನ ಬೆಂಗಳೂರಿಗೆ ಬರುವುದನ್ನು ತಾತ್ಕಾಲಿಕವಾಗಿ ತಕ್ಷಣದಿಂದಲೇ ತಡೆಯುವುದು; ದೂರದ ಜಿಲ್ಲೆಗಳಿಂದ ಬೆಂಗಳೂರಿಗೆ ಜನರು ಬರುವುದನ್ನೂ ಕನಿಷ್ಠ 3-4 ವಾರಗಳ ಕಾಲ ನಿಷೇಧಿಸುವುದು; ಇದಕ್ಕೆ ಪೂರಕವಾಗಿ ಅಂತರ್‌ಜಿಲ್ಲಾ ವಾಹನ ಸಂಚಾರಕ್ಕೆ ಕಡಿವಾಣ ಹಾಕುವುದು; ಹೀಗೆ ಹಲವು ಕ್ರಮಗಳು ಹಾಫ್ ಲಾಕ್‌ಡೌನ್‌ನಲ್ಲಿ ಬರುತ್ತವೆ.

 

ಉಳಿದಂತೆ ಬೆಂಗಳೂರಿನಲ್ಲಿ ಈಗಾಗಲೇ ನೆಲೆಸಿರುವವರು ತಮ್ಮ ಕೆಲಸಕಾರ‌್ಯಗಳನ್ನು ಮುಂದುವರಿಸಲು ಅವಕಾಶ ನೀಡುವುದು; ಹೋಟೆಲ್ ಮತ್ತಿತರ ವ್ಯಾಪಾರ-ವಹಿವಾಟು ಮುಂದುವರಿಸುವುದು; ಉದ್ಯಾನವನ ಮತ್ತಿತರ ಕಡೆ ಜನ ಸೇರುವುದನ್ನು ಒಂದು ತಿಂಗಳ ಕಾಲ ನಿರ್ಬಂಧಿಸುವುದು ಮುಂತಾದ ಕ್ರಮಗಳೂ ಈ ಹಾಫ್ ಲಾಕ್‌ಡೌನ್‌ನಲ್ಲಿ ಸೇರಿವೆ. ಬೆಂಗಳೂರಿನಲ್ಲಿ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗತೊಡಗಿರುವ ಹಿನ್ನೆಲೆಯಲ್ಲಿ ಸೋಮವಾರ ಈ ದಿಸೆಯಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

 

Find out more: