ಕೊರೋನಾ ವೈರಸ್ ಇಂದಾಗಿ ಇಡೀ ವಿಶ್ವವೇ ನಲುಗಿ ಹೋಗಿ ಸಾಕಷ್ಟು ಅಭಿವೃದ‍್ಧಿ ಶೀಲ ದೇಶಗಳು ಆರ್ಥಿಕವಾಗಿ ಜರ್ಜರಿತವಾಗಿದೆ ಅದರಲ್ಲೂ ಭಾರತ ದೇಶವಂತೂ ಆರ್ಥಿಕ ಪರಿಸ್ಥಿತಿ ನೆಲಕಚ್ಚಿತ್ತು. ಇದರ ಜೊತೆಗೆ ಕೊರೋನಾ ದೇಶದಲ್ಲಿ ರಣಕೇಕೆಯನ್ನು ಮಾಡಲು ಆರಂಬಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕ ಪರಿಸ್ಥಿಯನ್ನು ಮೇಲೆತ್ತುವ ಸಲುವಾಗಿ ಇಂಗ್ಲೆಂಡ್ ನಲ್ಲಿ ನಡೆಯುವ ಕಾರ್ಯಕ್ರದಲ್ಲಿ ಆನ್ ಲೈನ್ ನಲ್ಲಿ ಭಾಷಣವನ್ನು ಮಾಡಲಿದ್ದಾರೆ.
ಹೌದು ಲಂಡನ್‌ನಲ್ಲಿ ಆಯೋಜಿಸಲಾಗಿರುವ ಇಂಡಿಯಾ ಗ್ಲೋಬಲ್ ವೀಕ್ 2020 ಕಾರ್ಯಕ್ರಮವನ್ನು ಉದ್ದೇಶಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಧ್ಯಾಹ್ನ 1.30ಕ್ಕೆ ಮಾತನಾಡಲಿದ್ದಾರೆ. GDF ಭಾರತೀಯ ಜಾಗತೀಕರಣಕ್ಕೆ ಸಂಬಂಧಿಸಿದಂತೆ ಅತಿ ದೊಡ್ಡ ಅಂತಾರಾಷ್ಟ್ರೀಯ ಕಾರ್ಯಕ್ರಮ ಎನಿಸಿಕೊಂಡಿದ್ದು, ಭಾರತದ ವಾಣಿಜ್ಯ ವಹಿವಾಟು ಮತ್ತು ಹೂಡಿಕೆಯ ಭವಿಷ್ಯದ ಕುರಿತು ಮೋದಿ ಮಾತನಾಡುವ ಸಾಧ್ಯತೆ ಇದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿದೆ. ಹಾಗಾಗಿ, ಈ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಮೋದಿ ಭಾಷಣ ಮಾಡಲಿದ್ದಾರೆ. ಜುಲೈ 9ರಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಜಾಗತಿಕ ಪ್ರತಿನಿಧಿಗಳು ಭಾಗವಹಿಸಿಲಿದ್ದಾರೆ.
ಮೋದಿ ಭಾಷಣ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮ ಆಯೋಜಕ, ಇಂಡಿಯಾ ಇಂಕ್ ಗ್ರೂಪ್‌ನ ಸಿಇಒ ಲಡ್ವಾ ''ಇಡೀ ವಿಶ್ವವೇ ಕೊರೊನಾ ಸಾಂಕ್ರಮಿಗ ರೋಗದ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಭಾರತ ತನ್ನಲ್ಲಿರುವ ಪ್ರತಿಭಾನ್ವಿತರು, ತಾಂತ್ರಿಕತೆ ಹಾಗೂ ಪ್ರಬಲ ನಾಯಕತ್ವದಿಂದ ಜಾಗತಿಕ ವ್ಯವಹಾರದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಮೋದಿ ಅವರ ಸಂದೇಶ ಜಗತ್ತಿಗೆ ಪ್ರತಿಧ್ವನಿಸಲಿದೆ ಎಂದು ನಂಬಿಕೆ ಇದೆ'' ಎಂದಿದ್ದಾರೆ.
ಇನ್ನು ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಭಾರತದ ಕೇಂದ್ರ ಸಚಿವರಾದ ಎಸ್.ಜೈಶಂಕರ್, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ, ರವಿಶಂಕರ್ ಪ್ರಸಾದ್ ಮತ್ತು ಮಹೇಂದ್ರ ನಾಥ್ ಪಾಂಡೆ ಸಹ ಮಾತನಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯುಕೆ ಸರ್ಕಾರದ ವತಿಯಿಂದ ಪ್ರಿನ್ಸ್ ಚಾರ್ಲ್ಸ್ ಈ ಕಾರ್ಯಕ್ರಮದಲ್ಲಿ ವಿಶೇಷ ಭಾಷಣ ಮಾಡಲಿದ್ದಾರೆ. ಜೊತೆಗೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕಾರ್ಯದರ್ಶಿ ಸಹ ಮಾತನಾಡಲಿದ್ದಾರೆ.