ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಾವು ಸ್ಥಾಪಿಸಿ ಜನಪ್ರಿಯ ಗೊಳಿಸಿದ್ದ ಜಿಯೋ ನಲ್ಲಿ ಈಗಾಗಲೇ ಸಾಕಷ್ಟು ಕಂಪನಿಗಳು ಪಾಲುಗಳನ್ನು ಖರೀದಿಸಿದ್ದು ಅದರಲ್ಲಿ ಫೇಸ್ ಬುಕ್ ಕೂಡ ಒಂದು ಇದರ ಜೊತೆಗೆ ಇನ್ನು ಸಾಕಷ್ಟು ಸಂಸ್ಥೆಗಳು ಜಿಯೋದಲ್ಲಿ ಕೊಟ್ಯಾಂತರ ರೂಗಳನ್ನು ವ್ಯಯಿಸಿ ಪಾಲನ್ನು ಖರೀದಿಯನ್ನು ಮಾಡಲಾಗಿದೆ. ಅದರಂತೆ ಈ ಬಾರಿಯೂ ಕೂಡ ಅಮೇರಿಕಾದ ಒಂದು ಸಂಸ್ಥೆಗೆ ಪಾಲನ್ನು ಮಾರಿದ್ದಾರೆ.

 

ಹೌದು ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಮತ್ತೊಂದು ಅಮೆರಿಕ ಮೂಲದ ಸಂಸ್ಥೆ ಹೂಡಿಕೆ ಮಾಡಿದ್ದು, ಇದು ಜಿಯೋದ 13ನೇ ಜಾಗತಿಕ ಒಪ್ಪಂದವಾಗಿದೆ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಡಿಜಿಟಲ್ ಅಂಗವಾದ ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಮತ್ತೊಂದು ಕಂಪನಿ ಹೂಡಿಕೆ ಮಾಡಿದೆ. ಕ್ವಾಲ್​ಕಾಮ್ ವೆಂಚರ್ಸ್ ಸಂಸ್ಥೆ ಜಿಯೋ ಪ್ಲಾಟ್​ಫಾರ್ಮ್​​ಗಳಲ್ಲಿ 730 ಕೋಟಿ ರೂ ಮೊತ್ತದ ಶೇ. 0.15ರಷ್ಟು ಪಾಲು ಖರೀದಿಸಿದೆ. ಇತರ ಹೂಡಿಕೆದಾರರಂತೆ Qualcomm Ventures ಸಂಸ್ಥೆ ಕೂಡ 4.91 ಲಕ್ಷ ಕೋಟಿ ರೂ ಈಕ್ವಿಟಿ ವ್ಯಾಲುಯೇಷನ್ ಹಾಗೂ 5.16 ಲಕ್ಷ ಕೋಟಿ ಎಂಟರ್ಪ್ರೈಸ್ ವ್ಯಾಲುಯೇಷನ್ ದರದಲ್ಲಿ ಜಿಯೋದಲ್ಲಿ ಪಾಲು ಖರೀದಿ ಮಾಡಿದೆ.

 

ಕಳೆದ 3 ತಿಂಗಳ ಅವಧಿಯಲ್ಲಿ ಜಿಯೋ ಪ್ಲಾಟ್​ಫಾರ್ಮ್​​ಗಳಲ್ಲಿ ಹೂಡಿಕೆ ಮಾಡಲು ಆಗಿರುವ 13ನೇ ಒಪ್ಪಂದ ಇದಾಗಿದೆ. ವಿಶ್ವದ ಕೆಲ ಅಗ್ರಗಣ್ಯ ಸಂಸ್ಥೆಗಳು ಜಿಯೋದೊಂದಿಗೆ ವ್ಯಾವಹಾರಿಕವಾಗಿ ಭಾಗಿಯಾಗಿವೆ. ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ಕೆಕೆಆರ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್ ಮೊದಲಾದ ಸಂಸ್ಥೆಗಳು ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಹೂಡಿಕೆ ಮಾಡಿವೆ. ಈ 13 ಒಪ್ಪಂದಗಳಿಂದ ಜಿಯೋಗೆ 1.18 ಲಕ್ಷ ಕೋಟಿ ಬಂಡವಾಳ ಹರಿದುಬಂದಂತಾಗಿದೆ.

 

ಅಮೆರಿಕದ ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನಕಚೇರಿ ಹೊಂದಿರುವ ಕ್ವಾಲ್​ಕಾಮ್​ನ ಹೂಡಿಕೆ ಅಂಗವಾದ ಕ್ವಾಲ್​ಕಾಮ್ ವೆಂಚರ್ಸ್ 2000ರಿಂದಲೂ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದೆ. ಮುಂದಿನ ತಲೆಮಾರಿನ ವೈರ್​ಲೆಸ್ (ನಿಸ್ತಂತು) ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕ್ವಾಲ್​ಕಾಮ್ ಸಂಸ್ಥೆ ಸ್ಥಾಪಿತವಾಗಿದ್ದು 1985ರಲ್ಲಿ. ವೈರ್​ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾಫ್ಟ್​ವೇರ್, ಸೆಮಿಕಂಡಕ್ಟರ್ ಇತ್ಯಾದಿಗಳನ್ನ ಈ ಸಂಸ್ಥೆ ಪೂರೈಸುತ್ತದೆ.

13ನೇ ಜಾಗತಿಕ ಒಪ್ಪಂದ


ಈ ಒಪ್ಪಂದ ಮೂಲಕ ಜಿಯೋ ಸಂಸ್ಥೆ ಜಾಗತಿಕ ಒಟ್ಟು 13 ಒಪ್ಪಂದಗಳನ್ನು ಮಾಡಿಕೊಂತಾಗಿದ್ದು, ಕಳೆದ 3 ತಿಂಗಳಲ್ಲಿ ಜಿಯೋದೊಂದಿಗೆ ಫೇಸ್​ಬುಕ್: 43,573.62 ಕೋಟಿ ರೂ (ಶೇ. 9.99 ಪಾಲು), ಸಿಲ್ವರ್ ಲೇಕ್ ಪಾರ್ಟ್ನರ್ಸ್: 6,655.75 (ಶೇ. 1.15), ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್: 11,367.00 (ಶೇ. 2.32), ಜನರಲ್ ಅಟ್ಲಾಂಟಿಕ್: 6,598.38 (ಶೇ. 1.34), ಕೆಕೆಆರ್: 11,367.00 (ಶೇ. 2.32), ಮುಬದಲಾ: 9,093.60 (ಶೇ. 1.85), ಸಿಲ್ವರ್ ಲೇಕ್ ಪಾರ್ಟ್ನರ್ಸ್ 2ನೇ ಹೂಡಿಕೆ: 4,546.80 (ಶೇ. 0.93), ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ: 5,683.50 (ಶೇ. 1.16), ಟಿಪಿಜಿ: 4,546.80 (ಶೇ. 0.93), ಎಲ್ ಕಾಟರ್​ಟನ್(L Catterton): 1,894.50 (ಶೇ 0.39), ಪಿಐಎಫ್: 11,367.00 (ಶೇ. 2.32), ಇಂಟೆಲ್ ಕ್ಯಾಪಿಟಲ್: 1,894.50 (ಶೇ. 0.39) ಮತ್ತು ಕ್ವಾಲ್​ಕಾಮ್ ವೆಂಚರ್ಸ್: 730 ಕೋಟಿ ರೂ (ಶೇ. 0.15 ಪಾಲು) ಸಂಸ್ಥೆಗಳು ಷೇರು ಖರೀದಿ ಮಾಡಿವೆ.

 

Find out more: