ಮಾರಕ ಕೊರೋನಾ ವೈರಸ್​ನಿಂದ ತತ್ತರಿಸಿದ ವಿಶ್ವದ ಆರ್ಥಿಕತೆ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು ನಾವು ದೇಶೀಯ ಆರ್ಥಿಕ ಸಾಮರ್ಥ್ಯದ ಮೂಲಕವೇ ಜಾಗತಿಕ ಆರ್ಥಿಕ ಪುನಶ್ಚೇತನಗೊಳಿಸಬೇಕು. ಇದಕ್ಕಾಗಿ ದೇಶಿಯ ಉತ್ಪಾದನೆ ಹೆಚ್ಚಿಸಬೇಕು. ಈ ಮೂಲಕ ಜಾಗತಿಕ ಆರ್ಥಿಕ ವ್ಯವಸ್ಥೆಗೆ ವ್ಯಾಪಾರದ ವೈವಿಧ್ಯೀಕರಣ ಪುನರ್​ ಸ್ಥಾಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು..

ಇಂದು ಅಮೆರಿಕಾ-ಭಾರತ ವ್ಯವಹಾರ ಸಮಿತಿ ಆಯೋಜಿಸಿರುವ ಇಂಡಿಯಾ ಐಡಿಯಾಸ್​​​ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ ನಲ್ಲಿ ಪ್ರಧಾನಿ ಮೋದಿ ಹೇಳಿದರು.

ಇಂದು ಅಮೆರಿಕಾ-ಭಾರತ ವ್ಯವಹಾರ ಸಮಿತಿ ಆಯೋಜಿಸಿರುವ ಇಂಡಿಯಾ ಐಡಿಯಾಸ್​​​ ಕರೊನಾದಿಂದ ನಲುಗಿರುವ ಜಗತ್ತಿಗೆ ನಾವೀಗ ಉತ್ತಮ ಭವಿಷ್ಯ ರೂಪಿಸಬೇಕಾಗಿದೆ. ಅಮೆರಿಕ - ಭಾರತ ವ್ಯವಹಾರ ಸಮಿತಿ ವತಿಯಿಂದ ನಡೆಯುತ್ತಿರುವ ಇಂಡಿಯಾ ಐಡಿಯಾಸ್ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಸರೆನ್ಸ್​ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಆರ್ಥಿಕತೆ ಪುನಶಚೇತನಕ್ಕೆ ಆದ್ಯತೆ ನೀಡಬೇಕಿದೆ ಎಂದರು.

 

ಶಕ್ತಿಯುತ ದೇಶೀಯ ಆರ್ಥಿಕ ಸಾಮರ್ಥ್ಯಗಳಿಂದ ಜಾಗತಿಕ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಮರಳಿ ಸಾಧಿಸಬಹುದಾಗಿದೆ. ಇದರರ್ಥ ಉತ್ಪಾದನೆಗಾಗಿ ದೇಶೀಯ ಸಾಮರ್ಥ್ಯವನ್ನು ಸುಧಾರಿಸುವುದು ಹಾಗೂ ಹಣಕಾಸು ವ್ಯವಸ್ಥೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ವೈವಿಧ್ಯೀಕರಣವನ್ನು ಮರುಸ್ಥಾಪಿಸುವುದಾಗಿದೆ ಎಂದು ತಿಳಿಸಿದರು.

 

ಆತ್ಮನಿರ್ಭಾರ್​ ಭಾರತದ ಮೂಲಕ ಭಾರತವು ವಿಶ್ವದ ಏಳಿಗೆ ಮತ್ತು ಸ್ಥಿತಿಸ್ಥಾಪಕತ್ವದೆಡೆಗೆ ಕೊಡುಗೆ ನೀಡುತ್ತಿದೆ. ನಾವು ಸಹ ನಿಮ್ಮ(ಅಮೆರಿಕ) ಸಹಭಾಗಿತ್ವವನ್ನು ಬಯಸಿದ್ದೇವೆ. ಕಳೆದ 6 ವರ್ಷಗಳಲ್ಲಿ ನಮ್ಮ ಆರ್ಥಿಕತೆಯನ್ನು ಹೆಚ್ಚು ಮುಕ್ತ ಮತ್ತು ಸುಧಾರಣೆ ಆಧಾರಿತವಾಗಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಹೇಳಿದರು.

 

ಅವಕಾಶಗಳ ಭೂಮಿಯಾಗಿ ಭಾರತ ಹೊರಹೊಮ್ಮುತ್ತಿದೆ. ಹೇಗೆ ಎಂಬುದಕ್ಕೆ ಟೆಕ್ ವಲಯದ ಒಂದು ಉದಾಹರಣೆಯನ್ನು ನೀಡುತ್ತೇನೆ. ನಗರ ಪ್ರದೇಶಗಳ ಜನರಿಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಇಂಟರ್ನೆಟ್​ ಬಳಕೆಯಾಗುತ್ತಿದೆ ಎಂದು ಇತ್ತೀಚಿನ ಆಶಕ್ತಿದಾಯಕ ವರದಿಯೊಂದಿ ಹೇಳಿದೆ. ಹೀಗಾಗಿ ಭಾರತವು ಸಾಕಷ್ಟು ವಲಯಗಳಲ್ಲಿ ಹೇರಳ ಅವಕಾಶವನ್ನು ಹೊಂದಿದೆ ಎಂದರು. ​

ಪ್ರತಿವರ್ಷ ನಾವು ವಿದೇಶಾಂಗ ನೀತಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ. 2019-20ರಲ್ಲಿ ಭಾರತದಲ್ಲಿ ಎಫ್‌ಡಿಐ ಒಳಹರಿವು 74 ಬಿಲಿಯನ್ ಡಾಲರ್ ಆಗಿತ್ತು. ಇದೀಗ ಶೇ. 20 ರಷ್ಟು ಏರಿಕೆಯಾಗಿದೆ. ಭಾರತವು ಏಪ್ರಿಲ್-ಜುಲೈ ನಡುವಿನಲ್ಲಿ 20 ಬಿಲಿಯನ್ ಡಾಲರ್​ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ. ಯಾವಾಗ ಮಾರುಕಟ್ಟೆಗಳು ತೆರೆಯುತ್ತದೆಯೋ ಅವಕಾಶಗಳು ಮತ್ತು ಆಯ್ಕೆಗಳು ಹೇರಳವಾಗಿರುತ್ತದೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದರು.

 

Find out more: