ಕಳೆದ ತಿಂಗಳು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ 20 ಮಂದಿ ಭಾರತೀಯ ಯೋಧರು ಚೀನಾದ ಸೈನಿಕರಿಂದ ಹುತಾತ್ಮರಾದ ನಂತರ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ ಭಾರತದಲ್ಲಿ ಚೀನಾ ಹೂಡಿಕೆಗೆ ನಿರ್ಬಂಧ ವಿಧಿಸಲಾರಂಭಿಸಿತು. ಚೀನಾ ದೇಶದ 59 ಆಪ್ ಗಳನ್ನು ನಿಷೇಧಿಸಿತು. ಈ ಮೂಲಕ ಚೀನಾಕ್ಕೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಇದರ ಜೊತೆಗೆ ಭಾರತದಲ್ ವಾಣಿಜ್ಯಯ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಲು ಹಾಗೂ ಬೆಡ್ಡಿಂಗ್ಸ್ ಗಳನ್ನು ಮಾಡಲು ಚೀನಾ ಸೇರಿದಂತೆ ಭಾರತದ ಗಡಿಯನ್ನು ಹಂಚಿಕೊಂಡಿರುವ ದೇಶಗಳು ಭಾರತದ  ಸರ್ಕಾರದ ಅನುಮೋದನೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದೆ.

 

 

ಇದೀಗ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಚೀನಾ ಸೇರಿದಂತೆ ಭಾರತದ ಗಡಿಯನ್ನು ಹಂಚಿಕೊಂಡಿರುವ ದೇಶಗಳ ಕಂಪೆನಿಗಳು ನಮ್ಮ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲು ಹೊಸ ರಾಜಕೀಯ ಅನುಮತಿ ಪಡೆಯಬೇಕೆಂಬ ನಿರ್ಬಂಧ ವಿಧಿಸಿದೆ. ಈ ಕುರಿತು ಕಳೆದ ರಾತ್ರಿ ಹಣಕಾಸು ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

 

ಚೀನಾ ದೇಶವನ್ನು ಸರ್ಕಾರದ ಸಂಗ್ರಹಣೆಯಲ್ಲಿ ಅಥವಾ ಇಂಧನ, ರೈಲು ಮತ್ತು ಟೆಲಿಕಾಂ ಯೋಜನೆಗಳಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತಡೆಯಲು ಭಾರತ ಸರ್ಕಾರ ಈ ಕ್ರಮ ಕೈಗೊಂಡಿದ್ದು ಸ್ಪರ್ಧಾತ್ಮಕ ಪ್ರಾಧಿಕಾರಗಳಲ್ಲಿ ದಾಖಲಾತಿ ಮಾಡಿಕೊಂಡಿರುವ ಗಡಿ ದೇಶಗಳ ಕಂಪೆನಿಗಳು ಮಾತ್ರ ಬಿಡ್ಡಿಂಗ್ ನಲ್ಲಿ ಭಾಗವಹಿಸಬಹುದು ಎಂದು ಹೇಳಿದೆ.

ಬಿಡ್ಡಿಂಗ್ ನಲ್ಲಿ ಭಾಗವಹಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳಿಂದ ಕಂಪೆನಿಗಳು ಕಡ್ಡಾಯವಾಗಿ ರಾಜಕೀಯ ಮತ್ತು ಭದ್ರತಾ ಅನುಮತಿ ಹೊಂದಿರಬೇಕು ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

 

ಅಂದರೆ ಇದರರ್ಥ ಚೀನಾ ದೇಶದ ಕಂಪೆನಿಗಳು ಭದ್ರತಾ ಅನುಮತಿ ಪಡೆಯದೆ ಭಾರತದ ಇಂಧನ, ರೈಲು ಮತ್ತು ಟೆಲಿಕಾಂ ಪ್ರಾಜೆಕ್ಟ್ ಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಕೈಗಾರಿಕೆಗಳ ಮತ್ತು ಆಂತರಿಕ ವ್ಯಾಪಾರದ ಅಭಿವೃದ್ಧಿ ಇಲಾಖೆ ರಚಿಸಿರುವ ದಾಖಲಾತಿ ಸಮಿತಿಯು ಇದರ ಸ್ಮರ್ಧಾತ್ಮಕ ಪ್ರಾಧಿಕಾರವಾಗಿರುತ್ತದೆ. ಇಂದು ಭಾರತದ ಜೊತೆ ಗಡಿಯನ್ನು ಹಂಚಿಕೊಂಡಿರುವ ದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಮಾರ್ಗಸೂಚಿಯನ್ನು ಅನುಸರಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಪತ್ರ ಬರೆದಿದೆ.

 

Find out more: