ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷದಲ್ಲಿ ಭಾರತೀಯ ಯೋಧರು 20 ಮಂದಿ ಹುತಾತ್ಮರಾಗಿದ್ದರು ಇದಕ್ಕೆ ತಕ್ಕ ಪಾಟವನ್ನು ಕಲಿಸುವ ಉದ್ದೇಶದಿಂದ ಭಾರತದಲ್ಲಿ ಬಳಸಲಾಗುತ್ತಿದ್ದ 59 ಆಪ್ ಗಳನ್ನು ನಿಷೇಧ ಮಾಡಲಾಗಿತ್ತು. ಇದರಿಂದಾಗಿ ಚೀನಾ ಬಹಳಷ್ಟು ನಷ್ಟವನ್ನು ಅನುಭವಿಸ ಬೇಕಾಯಿತು. ಇದರ ಜೊತೆಗೆ ಇಂದು ಮತ್ತೆ 47 ಚೀನೀ ಅಪ್ಲಿಕೇಶನ್ ಗಳನ್ನು ನಿಷೇಧಿಸಿದೆ.
ಹೌದು ಕೇಂದ್ರ ಸರ್ಕಾರವು ಸೋಮವಾರ (ಜುಲೈ 27, 2020) 47 ಚೀನೀ ಅಪ್ಲಿಕೇಷನ್ ಗಳನ್ನು ನಿಷೇಧಿಸಿ, ಘೋಷಣೆ ಮಾಡಿದೆ. "ರಾಷ್ಟ್ರೀಯ ಭದ್ರತೆ ಹಾಗೂ ಖಾಸಗಿತನದ ಆತಂಕದ" ಆಧಾರದಲ್ಲಿ 47 ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿವೆ.
ಆ 47 ಅಪ್ಲಿಕೇಷನ್ ಗಳ ಹೆಸರು ತಕ್ಷಣಕ್ಕೆ ಖಾತ್ರಿ ಆಗಿಲ್ಲ. ಈ ಹಿಂದೆ 59 ಚೀನೀ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಯಿತಲ್ಲಾ ಇವು ಅವೇ ಮಾದರಿಯಲ್ಲಿವೆ. ಅಂಥ ಎಲ್ಲ ಆಪ್ ಗಳ ಬಗ್ಗೆಯೂ ಶೋಧಿಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.
ವರದಿಗಳ ಪ್ರಕಾರ, ಸರ್ಕಾರವು 275 ಚೈನೀಸ್ ಆಪ್ ಗಳ ಪಟ್ಟಿಯೊಂದನ್ನು ಮಾಡಿದೆ. ರಾಷ್ಟ್ರೀಯ ಭದ್ರತೆ ಹಾಗೂ ಬಳಕೆದಾರರ ಗೋಪ್ಯತೆಯ ನಿಯಮಗಳ ಉಲ್ಲಂಘನೆ ಆಗಿದೆಯಾ ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ. ಎಕನಾಮಿಕ್ ಟೈಮ್ಸ್ ವರದಿ ಮಾಡಿರುವಂತೆ, ಟೆನ್ಸೆಂಟ್ ಬೆಂಬಲದ ಪಬ್ ಜಿ, ಅಲಿಬಾಬ ಒಡೆತನದ ಅಲಿ ಎಕ್ಸ್ ಪ್ರೆಸ್, ರೆಸೊ ಮತ್ತಿತರ ಅಪ್ಲಿಕೇಷನ್ ಗಳನ್ನು ಸರ್ಕಾರ ನಿಷೇಧಿಸಿದೆ.
ಆರಂಭದಲ್ಲಿ ಸರ್ಕಾರವು ಐವತ್ತೊಂಬತ್ತು ಚೀನೀ ಅಪ್ಲಿಕೇಷನ್ ಗಳನ್ನು ನಿಷೇಧಿಸಿದ ಮೇಲೆ ಅದರಿಂದಲೇ ಹುಟ್ಟಿಕೊಂಡಂಥವು ಮತ್ತು ಅದೇ ರೀತಿಯಲ್ಲಿ ಇರುವಂಥವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮೇಲಕ್ಕೆ ಏರಿತು. ಲೈಕಿ ಎಂಬುದನ್ನು ನಿಷೇಧಿಸಲಾಗಿತ್ತು. ಆದರೆ ಲೈಕಿ ಲೈಟ್ ಎಂಬುದು ಗೂಗಲ್ ಪ್ಲೇ ಲಿಸ್ಟಿಂಗ್ ನಲ್ಲಿ ಟಾಪ್ ನಲ್ಲಿದೆ. ಟಿಕ್ ಟಾಕ್ ನಿಷೇಧದಿಮ್ದ ಸ್ನ್ಯಾಕ್ ವಿಡಿಯೋಗೆ ಅನುಕೂಲವಾಗಿದೆ.
ಸ್ನ್ಯಾಕ್ ವಿಡಿಯೋ ಎಂಬುದು ಚೀನೀ ಕುಯೇಶೌಗೆ ಸೇರಿದ್ದು. ಜೂನ್ 29ರಿಂದ ಜುಲೈ 19ರ ಮಧ್ಯೆ ಒಂದು ಕೋಟಿ ಹೊಸ ಡೌನ್ ಲೋಡ್ ಆಗಿದೆ. ಇದೇ ಆಪ್ ಜೂನ್ 8ರಿಂದ ಜೂನ್ 28ರ ಮಧ್ಯೆ ಕೇವಲ 1,72,000 ಡೌನ್ ಲೋಡ್ ಮಾತ್ರ ಆಗಿತ್ತು. ಶಿಯೋಮಿಗೆ ಸೇರಿದ ಝಿಲಿ ಎಂಬುದು ಟಿಕ್ ಟಾಕ್ ಗೆ ಪರ್ಯಾಯವಾಗಿ ಕಂಡುಕೊಂಡಿರುವ ಎರಡನೇ ಆಪ್. ಈ ಅವಧಿಯಲ್ಲಿ ಝಿಲಿ ಡೌನ್ ಲೋಡ್ 167 ಪರ್ಸೆಂಟ್ ಏರಿಕೆಯಾಗಿದೆ.