ದೇಶಾದ್ಯಂತ ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಲೇ ಇದೆ. ಅದರಲ್ಲೂ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಜೋರಾಗಿದೆ. ಸೋಂಕಿನ ನಿಯಂತ್ರಣಕ್ಕಾಗಿ ಏನೆಲ್ಲಾ ಸರ್ಕಸ್ ನಡೆಸುತ್ತಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ, ಕೊರೊನಾ ಸಂಖ್ಯೆ ಕೈಗೆ ಸಿಗುತ್ತಿಲ್ಲ ಅನ್ನುವಂತಾಗಿದೆ. ಇದರ ಮಧ್ಯೆ ಎಲ್ಲರೂ ಕೊರೊನಾ ನಿಯಂತ್ರಣಕ್ಕಾಗಿ 'ದೆಹಲಿ ಮಾದರಿ'ಯನ್ನ ಅನುಸರಿಸುವಂತೆ ಕರೆ ನೀಡುತ್ತಿದ್ದಾರೆ.ಅಷ್ಟಕ್ಕೂ ದೆಹಲಿಯಲ್ಲಿ ಕೋವಿಡ್ ತಡೆಗೆ ದೆಹಲಿ ಅನುಸರಿಸಿರುವ ಕ್ರಮ ಏನು..?
ಮೊನ್ನೆಯಷ್ಟೇ ಸಿಎಂ ಅರವಿಂದ್ ಕೇಜ್ರಿವಾಲ್ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ 'ತರಲು ದೆಹಲಿ ಮಾಡಲ್' ಬಳಸಿ ಅಂತಾ ಹೇಳಿದ್ದರು. ಅವರ ಹೇಳಿಕೆಯನ್ನೇ ಇಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಕೂಡ ಪುನರುಚ್ಛರಿಸಿದ್ದಾರೆ.
ತೆಲಂಗಾಣದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, ನಾನು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ, ಕೊರೊನಾ ನಿಯಂತ್ರಣ ಮಾಡಲು ತಪಾಸಣೆಗೆ ಹೆಚ್ಚು ಒತ್ತು ನೀಡಬೇಕು. ತಪಾಸಣೆ ನಂತರ ಕೊರೊನಾ ರಿಪೋರ್ಟ್ ಆದಷ್ಟು ಬೇಗ ಬರುವಂತೆ ನೋಡಿಕೊಳ್ಳಬೇಕು. ಜೊತೆಗೆ ಟ್ರೀಟ್ಮೆಂಟ್ ಹೆಚ್ಚಿಸಬೇಕು. ಟೆಸ್ಟ್ ಅನ್ನ ಇನ್ನೂ ಹೆಚ್ಚಿಸಬೇಕಾದ ಅಗತ್ಯತೆ ಇದೆ. ಜಾಸ್ತಿ ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಎಷ್ಟು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಅನ್ನೋದು ಗೊತ್ತಾಗಲಿದೆ. ನಾನು ವೈಯಕ್ತಿಕವಾಗಿ ದೆಹಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಏನು ಮಾಡಲಾಗುತ್ತಿದೆ ಅನ್ನೋದನ್ನ ಗಮನಿಸುತ್ತಿದ್ದೇನೆ. ಅಲ್ಲಿ ಶೇಕಡಾ 84 ರಷ್ಟು ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಎಲ್ಲಾ ರಾಜ್ಯಗಳೂ ಕೊರೊನಾ ನಿಯಂತ್ರಣಕ್ಕೆ ದೆಹಲಿ ಮಾದರಿಯನ್ನ ಅನುಸರಿಬೇಕು ಎಂದು ಒತ್ತಿ ಹೇಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ಕಡಿಮೆ ಆಗಲು ಕಾರಣ ಏನೆಂದರೆ ಹೆಚ್ಚು ತಪಾಸಣೆ ಮಾಡಿರೋದು. ಟ್ರೇಸ್ ಮಾಡಿರೋದು ಹಾಗೂ ಟ್ರೀಟ್ಮೆಂಟ್. ಇದರಿಂದಾಗಿ ಒಂದು ಸೋಂಕಿತರನ್ನ ಕಡಿಮೆ ಮಾಡಿರೋದು ಹಾಗೂ ಸಾವಿನ ಪ್ರಮಾಣವನ್ನ
ಕುಗ್ಗಿಸಿರೋದು. ಇನ್ನೊಂದು ವಿಶೇಷ ಏನಂದ್ರೆ ಇಲ್ಲಿನ ಕೊರೊನಾ ವಾರಿಯರ್ಸ್ ಕೇವಲ 72 ಗಂಟೆಯೊಳಗೆ ಶೇಕಡಾ 80 ರಷ್ಟು ಮಂದಿಯನ್ನ ಐಸೋಲೇಷನ್ ಮಾಡಬಹುದು ಅಂತಾ ತೋರಿಸಿಕೊಟ್ಟಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊರೊನಾ ನಿಯಂತ್ರಣಕ್ಕಾಗಿ ಐದು ನಿಯಮವನ್ನ ಜಾರಿಗೊಳಿಸಿದ್ದಾರೆ. ಅವುಗಳು ಯಾವುದೆಂದರೆ..
ತಪಾಸಣೆಯನ್ನ ಹೆಚ್ಚು ಮಾಡುವುದು
ಹೋಂ ಐಸೋಲೇಷನ್ ಆಫ್ ಮೈಲ್ಡ್ ಕೇಸಸ್
ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೂಡಲೇ ಬೆಡ್ಗಳನ್ನ ಒದಗಿಸೋದು
ಸರಿಯಾಗಿ ಮಾಹಿತಿಯನ್ನ ಕಲೆ ಹಾಕುವುದು
ಹಾಗೂ ಪ್ಲಾಸ್ಮಾ ಥೆರಪಿ.
ಅಂದ್ಹಾಗೆ ದೆಹಲಿಯಲ್ಲಿ 496 ಕಂಟೈನ್ಮೆಂಟ್ ಝೋನ್ಗಳಿವೆ. ಇಂದು ಹೊಸದಾಗಿ 1,246 ಪ್ರಕರಣಗಳು ದಾಖಲಾಗಿ 1,344 ಸೋಂಕಿತರು ಗುಣಮುಖರಾಗಿದ್ರೆ 40 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಒಟ್ಟು 1,13,740 ಪ್ರಕರಣಗಳು ದಾಖಲಾಗಿದ್ದು, 91,312 ಗುಣಮುಖರಾಗಿದ್ದಾರೆ. ಜೊತೆಗೆ 3,411 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ.