ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಸಿದರು ಎಂಬ ಮಾತು ಈ ವಿಷಯವನ್ನು ಕೇಳಿದರೆ ದಿಟ ಎಂದು ಎಂದೆನಿಸದೇ ಇರದು, ಹೂದು ಇನ್ನು ಪ್ರಪಂಚದ ವಿವಿಧ ದೇಶದಲ್ಲಿ ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ದೇಶದಲ್ಲಿ ಕೊರೋನಾ ವೈರಸ್ ಔಷಧಿಯನ್ನು ಸಂಶೋಧಸಿ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಆದರೆ ಕೆಲವರು ಈ ಕೊರೋನಾ ಔಷಧಿ ಮಾರುಕಟ್ಟೆಗೆ ಬರುವ ಮುನ್ನವೇ ಈ ಔಷಧಿಯನ್ನು ಹಣ ಕೊಟ್ಟು ಕೊಂಡಿಕೊಳ್ಳಲಾಗುತ್ತಿದೆ.
ಕರೊನಾ ಲಸಿಕೆ ಸಂಶೋಧನೆ ಪರಿಣಾಮಕಾರಿಯಾಗುವ ಭರವಸೆ ಮೂಡಿಸಿದೆ. ತೀವ್ರ ವೇಗದಲ್ಲಿ ಲಸಿಕೆ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗುತ್ತಿದೆ. ಆದರೆ, ಅಷ್ಟೇ ವೇಗದಲ್ಲಿ ಅದರ ಖರೀದಿಯೂ ಅರ್ಥಾತ್ ಮುಂಗಡ ಬುಕಿಂಗ್ ಕೂಡ ಆಗುತ್ತಿದೆ.
ಹೌದು… ಶ್ರೀಮಂತ ದೇಶಗಳು ಭರವಸೆ ಮೂಡಿಸಿರುವ ಅಥವಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಿಗೆ ಭಾರಿ ಪ್ರಮಾಣದಲ್ಲಿ ಹಣ ನೀಡಿ, ಲಸಿಕೆ ಯಶಸ್ವಿಯಾದಲ್ಲಿ ಮೊದಲು ತಮಗೆ ನೀಡಬೇಕೆಂದು ಒಪ್ಪಂದ ಮಾಡಿಕೊಂಡಿವೆ.
ಅಂತೆಯೇ, ಉತ್ಪಾದನೆಗೂ ಮುನ್ನವೇ ಈವರೆಗೆ 100 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಖರೀದಿಯಾಗಿದೆ. ಜತೆಗೆ, ಇನ್ನಷ್ಟು ಖರೀದಿಸಲು ಬಯಸಿದಲ್ಲಿ ಅದನ್ನು ಕೂಡ ಪೂರೈಸಬೇಕು ಎಂದು ಷರತ್ತನ್ನು ಈ ಕಂಪನಿಗಳಿಗೆ ವಿಧಿಸಲಾಗಿದೆ. ಸಹಜವಾಗಿಯೇ ಇದು ಬಡ ರಾಷ್ಟ್ರಗಳ ಹಾಗೂ ಲಸಿಕೆಯ ಸಮಾನ ಹಂಚಿಕೆ ಬಗ್ಗೆ ಕಳವಳಗಳನ್ನು ಮೂಡಿಸಿದೆ.
ಅಮೆರಿಕ ಈಗಾಗಲೇ ಮಾಡೆರ್ನಾ ಕಂಪನಿಗೆ ಎಲ್ಲ ರೀತಿಯ ಹಣಕಾಸು ನೆರವು ನೀಡಿದೆಯಲ್ಲದೇ, ಕ್ಲಿನಿಕಲ್ ಟ್ರಯಲ್ಗೂ ಸಹಕಾರ ನಿಡಿದೆ. ಅಕ್ಷರಶಃ ಈ ಕಂಪನಿಯ ಎಲ್ಲ ಲಸಿಕೆ ಅಮೆರಿಕ ಪಾಲಾಗಲಿದೆ. ಇದಲ್ಲದೇ,. ಸ್ಯಾನೋಫಿ, ಗ್ಲಾಕ್ಸೋ ಸ್ಮಿತ್ಕ್ಲೈನ್ಗೂ ನೂರಾರು ಕೋಟಿ ಡಾಲರ್ ನೀಡಿದೆ. ಇಂಗ್ಲೆಂಡ್ ಕೂಡ ಈ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇನ್ನೊಂದೆಡೆ ಜಪಾನ್ ಕೂಡ ಫೈಝರ್ ಕಂಪನಿ ಜತೆ ಖರೀದಿ ಒಪ್ಪಂದ ಮಾಡಿಕೊಂಡಿದೆ.
ಅಮೆರಿಕ, ಬ್ರಿಟನ್ ಹಾಗೂ ಯುರೋಪ್ ರಾಷ್ಟ್ರಗಳು ಹಾಗೂ ಜಪಾನ್ ದೇಶಗಳು 130 ಕೋಟಿ ಡೋಸ್ ಲಸಿಕೆ ಖರೀದಿಗೆ ಹಣ ನೀಡಿವೆ. ಇದಷ್ಟೇ ಅಲ್ಲ, ಇನ್ನೂ 150 ಕೋಟಿ ಡೋಸ್ ಖರೀದಿಗೆ ಅವಕಾಶವನ್ನು ಮಾಡಿಕೊಳ್ಳಲಾಗಿದೆ ಎಂದು ಲಂಡನ್ ಮೂಲದ ಏರ್ಫಿನಿಟಿ ಸಂಸ್ಥೆ ಮಾಹಿತಿ ನೀಡಿದೆ.
ಸಂಶೋಧನೆಗಳು ಯಶಸ್ವಿಯಾಗುವ ಭರವಸೆ ಮೂಡಿಸಿದ್ದರೂ, ಇಡೀ ಜಗತ್ತಿಗೆ ಬೇಕಾಗುವಷ್ಟು ಲಸಿಕೆಗಳಿಲ್ಲ. ಬಹಳಷ್ಟು ಲಸಿಕೆಗಳನ್ನು ಎರಡೆರಡು ಡೋಸ್ ನೀಡಬೇಕಾಗುತ್ತದೆ ಎಂದು ಏರ್ಫಿನಿಟಿ ಸಂಸ್ಥೆಯ ಸಿಇಒ ರಾಸ್ಮಸ್ ಬೆಕ್ ಹ್ಯಾನ್ಸೆನ್ ಹೇಳುತ್ತಾರೆ. ಲಸಿಕೆಗಳು ಯಶಸ್ವಿಯಾಗಿ, ಎಲ್ಲ ಅಡೆತಡೆಗಳನ್ನು ದಾಟಿ 100 ಕೋಟಿ ಡೋಸ್ ಉತ್ಪಾದನೆ 2022ರ ಮೊದಲ ತ್ರೈಮಾಸಿಕಕ್ಕೂ ಮುನ್ನ ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.
ಇನ್ನೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಅಲೈಯನ್ಸ್ ಫಾರ್ ವಾಕ್ಸಿನ್ ಆಯಂಡ್ ಇಮ್ಯೂನೈಜೇಷನ್ (ಜಿಎವಿಐ) ಸಂಸ್ಥೆಗಳು ಲಸಿಕೆ ಸಮಾನವಾಗಿ ಹಂಚಿಕೆಯಾಗಬೇಕು ಹಾಗೂ ಎಲ್ಲರಿಗೂ ದೊರೆಯಬೇಕು ಎಂಬ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. 2021ರ ಅಂತ್ಯಕ್ಕೆ 1800 ಕೋಟಿ ಡಾಲರ್ ಮೊತ್ತದಲ್ಲಿ 200 ಕೋಟಿ ಡೋಸ್ ಲಸಿಕೆ ಪಡೆಯುವ ಯೋಜನೆ ರೂಪಿಸಿವೆ. ಭಾರತವೂ ಈ ಅಭಿಯಾನಕ್ಕೆ ಆರ್ಥಿಕ ನೆರವು ನೀಡಿದೆ. ಆದರೆ, ಕಾರ್ಪೋರೇಟ್ ಮತ್ತು ಬಲಾಢ್ಯ ಆರ್ಥಿಕ ಶಕ್ತಿಗಳು ಇದಕ್ಕೆ ಮಣಿಯುತ್ತವೆಯೇ ಎಂಬುದು ಕೂಡ ಬಿಲಿಯನ್ ಡಾಲರ್ಪ್ರಶ್ನೆ.