ಕೊರೊನಾ ವೈರಸ್ ದೇಶದಲ್ಲಿ ಕೆಲವುದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅದರಲ್ಲೂ ಮಾಹಾನಗರಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಲೇ ಇದೆ. ಅಂತಹ ನಗರಗಳಾದ  ಮುಂಬೈ,  ಬೆಂಗಳೂರು ಹಾಗೂ ದೆಹಲಿಯಂತಹ ರಾಜಧಾನಿಗಳಲ್ಲಿ ಕೊರೋನಾ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ದಾಖಲಾಗುತ್ತಿವೆ, ಅದೇ ರೀತಿ ಮುಂಬೈ ಹಾಗೂ ದೆಹಲಿಗಳಲ್ಲಿ ಕೊರೋನಾ ಪ್ರತಿನಿತ್ಯ ನೂರಾರು ಮಂದಿ  ಸಾವನ್ನಪ್ಪುತ್ತಿದ್ದರು ಆದರೆ ದೆಹಲಿಯಲ್ಲಿ ಈ ಸಂಖ್ಯೆ ಭಾನುವಾರ ಸಾಕಷ್ಟು ಕಡಿಮೆಯಾಗಿದೆ.





ಹೌದು  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊವಿಡ್ ಸಾವಿನ ಸಂಖ್ಯೆ 4 ಸಾವಿರ ಗಡಿ ದಾಟಿದೆ. ಭಾನುವಾರ ದೆಹಲಿಯಲ್ಲಿ ಕೇವಲ 15 ಮಂದಿ ಮಾತ್ರ ಕೊರೊನಾದಿಂದ ಮೃತಪಟ್ಟಿದ್ದರು. ಭಾನುವಾರದ ವರದಿ ಬಳಿಕ ದೆಹಲಿಯಲ್ಲಿ ಒಟ್ಟು ಸಾವಿನ ಸಂಖ್ಯೆ 4004ಕ್ಕೆ ಏರಿಕೆಯಾಗಿದೆ. ಕಳೆದ ಎರಡೂವರೆ ತಿಂಗಳ ಅವಧಿಯಲ್ಲಿ ದಿನವೊಂದಕ್ಕೆ ದೆಹಲಿ ಕಂಡ ಅತ್ಯಂತ ಕಡಿಮೆ ಸಂಖ್ಯೆಯ ಕೊವಿಡ್ ಸಾವು ಇದಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.




ಭಾನುವಾರ ರಾಜಧಾನಿಯಲ್ಲಿ 961 ಮಂದಿಗೆ ಕೊವಿಡ್ ಸೋಂಕು ತಗುಲಿದೆ. 1186 ಜನರು ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1,37,677ಕ್ಕೆ ಏರಿಕೆಯಾಗಿದ್ದು, ಚೇತರಿಕೆ ಕಂಡವರ ಸಂಖ್ಯೆ 1,23,317ಕ್ಕೆ ಜಿಗಿದಿದೆ. ಶೇಕಡಾ 89.05ರಷ್ಟು ಗುಣಮುಖರಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ 10,356 ಕೇಸ್ ಮಾತ್ರ ಸಕ್ರಿಯವಾಗಿದೆ.




ಈ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು ''ದೆಹಲಿಯಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಆಗಿದೆ. 15 ಜನರು ಸಾವನ್ನಪ್ಪಿದ್ದಾರೆ. ಇದರ ಸಂಖ್ಯೆ ಕಡಿಮೆ ಮಾಡುವತ್ತಾ ಎಲ್ಲರು ಶ್ರಮಿಸೋಣ'' ಎಂದಿದ್ದಾರೆ.




ಭಾನುವಾರದ ವೇಳೆಗೆ ದೆಹಲಿಯಲ್ಲಿ 5,663 ಜನರು ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆ. 2,886 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ 685 ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ 161 ಮಂದಿ ಇದ್ದಾರೆ. ಆಸ್ಪತ್ರೆಗಳಲ್ಲಿ ಒಟ್ಟು 10,692 ಕೋವಿಡ್ ಹಾಸಿಗೆಗಳು ಖಾಲಿ ಇವೆ. ಈ ಪೈಕಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ 5,389 ಮತ್ತು ಆರೋಗ್ಯ ಕೇಂದ್ರಗಳಲ್ಲಿ 393 ಖಾಲಿ ಇವೆ. ಆದರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿನ 4,170 ಹಾಸಿಗೆಗಳನ್ನು ವಂದೇ ಭಾರತ್ ಮಿಷನ್ ವಿಮಾನಗಳಿಂದ ಬಂದ ಪ್ರಯಾಣಿಕರಿಗೆ ನೀಡಲಾಗುತ್ತಿದೆ.

Find out more: